Karnataka Assembly Elections 2023: ಪ್ರಧಾನಿ ಮೋದಿ ರ‍್ಯಾಲಿಗೆ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್
ಪ್ರಧಾನಿ ಮೋದಿ ರ‍್ಯಾಲಿಗೆ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ. ನ್ಯಾ. ಕೃಷ್ಣ ದೀಕ್ಷಿತ್, ನ್ಯಾ. ವಿಜಯ್‌ಕುಮಾರ್ ಪಾಟೀಲ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ (Narendra Modi) ರ‍್ಯಾಲಿಗೆ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ. ನ್ಯಾ. ಕೃಷ್ಣ ದೀಕ್ಷಿತ್, ನ್ಯಾ. ವಿಜಯ್‌ಕುಮಾರ್ ಪಾಟೀಲ್ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಮೇ 6ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಮತ್ತು ಮೇ 7ರಂದು ಬೆಳಗ್ಗೆ 9 ಗಂಟೆಯಿಂದ ಬೆಳಗ್ಗೆ 11.30ರವರೆಗೆ ರೋಡ್ ಶೋಗೆ ಮಾತ್ರ ಅನುಮತಿ ನೀಡಲಾಗಿದೆ. ಭಾರತದಲ್ಲಿ ಚುನಾವಣೆಗಳನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಮೊದಲ ಚುನಾವಣೆಯಿಂದಲೂ ರಾಜಕೀಯ ರ‍್ಯಾಲಿ ಆಚರಣೆಯಲ್ಲಿದೆ. ಪ್ರಸಕ್ತ ವರ್ಷದಲ್ಲೇ 2517 ರೋಡ್ ಶೋಗಳಿಗೆ ಅನುಮತಿ ನೀಡಲಾಗಿದೆ.
ರೋಡ್ ಶೋ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಅಗತ್ಯವಿರುವ ಕಡೆ ಬಾಂಡ್ ಬರೆಸಿಕೊಳ್ಳಲಾಗುತ್ತಿದೆ. ಆ್ಯಂಬುಲೆನ್ಸ್, ಶಾಲಾ ಬಸ್ ಸಂಚಾರಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರು ಹೇಳಿಕೆ ನೀಡಿದ್ದಾರೆ. ರ‍್ಯಾಲಿಗಳಿಂದ ಜನರಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸಬಹುದು ಎಂದು ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಪಿಐಎಲ್ ಇತ್ಯರ್ಥ ಆಗಿದೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಹಿನ್ನಡೆ; ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋಗೆ ಚುನಾವಣಾ ಆಯೋಗ ಅನುಮತಿ
ನ್ಯಾ. ಕೃಷ್ಣ ದೀಕ್ಷಿತ್ ಹೇಳಿದ್ದೇನು?
ಬಳಿಕ ನ್ಯಾ. ಕೃಷ್ಣ ದೀಕ್ಷಿತ್ ಮಾತನಾಡಿ, 2 ದಿನಗಳ ಕಾಲ ಬೆಳಗ್ಗೆ 9ರಿಂದ 1.30ರವರೆಗೆ ಪ್ರಧಾನಿ ರೋಡ್ ಶೋಗೆ ಅನುಮತಿ ನೀಡಲಾಗಿದೆ. ರೋಡ್ ಶೋ ದಿನದಂದು ಪರೀಕ್ಷೆಗಳಿವೆಯೇ ಎಂದು ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದ್ದು, ರಾಜ್ಯದ 499 ಸೆಂಟರ್ಗಳಲ್ಲಿ ನೀಟ್ ಪರೀಕ್ಷೆ ನಡೆಯುತ್ತಿದೆ. ಬೆಂಗಳೂರಿನ 30 ಸೆಂಟರ್ಗಳಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಮೇ 7ರ ಮಧ್ಯಾಹ್ನ 2ರಿಂದ ಸಂಜೆ 5.20ರವರೆಗೆ ಪರೀಕ್ಷೆ ನಡೆಯುತ್ತೆ. ಮೇ 6ರಂದು ಯಾವುದೇ ಪರೀಕ್ಷೆ ನಿಗದಿ ಬಗ್ಗೆ ಮಾಹಿತಿಯಿಲ್ಲ ಎಂಬ ತುಷಾರ್ ಗಿರಿನಾಥ್ ಹೇಳಿಕೆಯನ್ನು ಹೈಕೋರ್ಟ್ ರೆಕಾರ್ಡ್ ಮಾಡಿಕೊಂಡಿದೆ. ನಾಳಿನ ಪರೀಕ್ಷೆಗಳ ಬಗ್ಗೆ ತಕ್ಷಣ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ. ಮೇ 6, 7ರಂದು ಕಾಂಗ್ರೆಸ್ ರೋಡ್ ಶೋಗೂ ಅನುಮತಿ ನೀಡಲಾಗಿದೆ. ರೋಡ್ ಶೋ ವೇಳೆ ಅನುಚಿತ ಘಟನೆ ನಡೆದಿವೆಯೇ ಎಂಬ ಹೈಕೋರ್ಟ್ ಪ್ರಶ್ನೆಗೆ ಅನುಚಿತ ಘಟನೆ ನಡೆದಿಲ್ಲವೆಂದು ಆಯುಕ್ತರು ಉತ್ತರಿಸಿದ್ದಾರೆ.
ಶನಿವಾರ ಮೋದಿ ರೋಡ್ ಶೋ ಮಾರ್ಗ
ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂ->ಸಾರಕ್ಕಿ ಜಂಕ್ಷನ್-> ಸೌತ್ ಎಂಡ್ ಸರ್ಕಲ್->ಕೃಷ್ಣರಾವ್ ಪಾರ್ಕ್->ರಾಮಕೃಷ್ಣ ಆಶ್ರಮ-> ಮಕ್ಕಳ ಕೂಟ->ಟೌನ್ ಹಾಲ್->ಕಾವೇರಿ ಭವನ->ಮೆಜೆಸ್ಟಿಕ್-> ಮಾಗಡಿ ರೋಡ್->GT ವರ್ಲ್ಡ್ ಮಾಲ್->ಹೌಸಿಂಗ್ ಬೋರ್ಡ್->ಬಸವೇಶ್ವರ ನಗರ->ಶಂಕರ ಮಠ ಸರ್ಕಲ್-> ಮೋದಿ ಆಸ್ಪತ್ರೆ ರಸ್ತೆ->ನವರಂಗ್ ಸರ್ಕಲ್->ಮಹಾಕವಿ ಕುವೆಂಪು ರಸ್ತೆ->ಮಲ್ಲೇಶ್ವರಂ ಸರ್ಕಲ್ ->ಸಂಪಿಗೆ ರಸ್ತೆ-> ಸರ್ಕಲ್ ಮಾರಮ್ಮ ದೇವಸ್ಥಾನ.
ಇದನ್ನೂ ಓದಿ: Narendra Modi: ಹನುಮನ ಜನಿಸಿದ ನಾಡಲ್ಲೇ ಮತ್ತೆ ಬಜರಂಗಬಲಿ ಘೋಷಣೆ; ಪ್ರಧಾನಿ ಮೋದಿ ತಂತ್ರಗಾರಿಕೆ ಏನು?
ಭಾನುವಾರದ ರೋಡ್ ಶೋ ರೂಟ್ ಮ್ಯಾಪ್
ಬೆಮೆಲ್ ಸರ್ಕಲ್->ತಿಪ್ಪಸಂದ್ರ ಮುಖ್ಯರಸ್ತೆ->ಇಎಸ್ಐ ಆಸ್ಪತ್ರೆ, CMH ರೋಡ್->ಇಂದಿರಾನಗರ->ಹಲಸೂರು ಪೊಲೀಸ್ ಸ್ಟೇಷನ್- ಎಂ.ಜಿ ರಸ್ತೆ->ಬ್ರಿಗೇಡ್ ರೋಡ್
ರೋಡ್ ಶೋನಲ್ಲಿ 4 ಕಿ.ಮೀ ಕಡಿತ!
ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಸುರಂಜನ್‌ದಾಸ್ ಸರ್ಕಲ್‌ನಿಂದ ಟ್ರಿನಿಟಿ ಸರ್ಕಲ್‌ವರೆಗೆ ರೋಡ್ ಶೋ ನಡೆಯಲಿದೆ. ಭಾನುವಾರ ನಡೆಯುವ ಪ್ರಧಾನಿ ರೋಡ್ ಶೋ 4 ಕಿ.ಮೀ. ಕಡಿತ ಮಾಡಲಾಗಿದೆ. ನೀಟ್ ಪರೀಕ್ಷೆ ಹಿನ್ನೆಲೆ ರೋಡ್ ಶೋ ರೂಟ್‌ನಲ್ಲಿ ಬದಲಾವಣೆ ಮಾಡಲಾಗಿದ್ದು, ಟ್ರಾಫಿಕ್ ಸಮಸ್ಯೆ ಆಗಬಹುದು ಅನ್ನೋ ಕಾರಣಕ್ಕೆ ಪ್ರಧಾನಿ ಕಚೇರಿ ನಿರ್ದೇಶನದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ.
ಕಾಂಗ್ರೆಸ್ಗೆ ಹಿನ್ನಡೆ
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮೆಗಾ ರೋಡ್ ಶೋಗೆ ಅನುಮತಿ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ ಮಾಡಿತ್ತು. ಆದರೆ ಪ್ರಧಾನಿಯವರ ರೋಡ್ ಶೋಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಗುರುವಾರ ಸಂಜೆ ಸ್ಪಷ್ಟಪಡಿಸಿದ್ದರು. ಆ ಮೂಲಕ ಕಾಂಗ್ರೆಸ್ಗೆ ಹಿನ್ನೆಡೆಯಾಗಿತ್ತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Fri, 5 May 23