ಕಾಂಗ್ರೆಸ್​ಗೆ ಹಿನ್ನಡೆ; ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋಗೆ ಚುನಾವಣಾ ಆಯೋಗ ಅನುಮತಿ

ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬೆಂಗಳೂರಿನಲ್ಲಿ ಭಾಗವಹಿಸಲಿರುವ ಮೆಗಾ ರೋಡ್​ ಶೋಗೆ ಅನುಮತಿ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದ ಕಾಂಗ್ರೆಸ್​​ಗೆ ಹಿನ್ನಡೆಯಾಗಿದೆ.

ಕಾಂಗ್ರೆಸ್​ಗೆ ಹಿನ್ನಡೆ; ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋಗೆ ಚುನಾವಣಾ ಆಯೋಗ ಅನುಮತಿ
ಪ್ರಧಾನಿ ನರೇಂದ್ರ ಮೋದಿ
Follow us
Ganapathi Sharma
|

Updated on: May 04, 2023 | 8:59 PM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬೆಂಗಳೂರಿನಲ್ಲಿ ಭಾಗವಹಿಸಲಿರುವ ಮೆಗಾ ರೋಡ್​ ಶೋಗೆ ಅನುಮತಿ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದ ಕಾಂಗ್ರೆಸ್​​ಗೆ ಹಿನ್ನಡೆಯಾಗಿದೆ. ಪ್ರಧಾನಿಯವರ ರೋಡ್‌ ಶೋಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ (Manoj Kumar Meena) ಗುರುವಾರ ಸಂಜೆ ತಿಳಿಸಿದ್ದಾರೆ. ಮೇ 6, 7ರಂದು ಪ್ರಧಾನಿ ರೋಡ್‌ ಶೋಗೆ ಅನುಮತಿ ನೀಡಲಾಗಿದೆ. ಅಗ್ನಿಶಾಮಕ ದಳ ಸೇರಿದಂತೆ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆದಿದ್ದರೆ ಮಾತ್ರ ಅವಕಾಶ ನೀಡಲಾಗುತ್ತಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಮಾತ್ರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಮೋದಿ ರೋಡ್ ಶೋ ನಡೆಸುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಹೀಗಾಗಿ ಅವರ ರೋಡ್ ಶೋಗೆ ಅನುಮತಿ ನೀಡಬಾರದು ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಮೋದಿಯವರು ಚುನಾವಣಾ ಪ್ರಚಾರ ಭಾಷಣಗಳಲ್ಲಿ ಧಾರ್ಮಿಕ ಭಾವನೆಗಳು ಬಳಸಿಕೊಳ್ಳುತ್ತಿದ್ದಾರೆ. ಜಾತಿ ಹಾಗೂ ಧರ್ಮದ ಹೆಸರು ಬಳಸಿಕೊಂಡು ಚುನಾವಣಾ ಪ್ರಚಾರ ಮಾಡುವುದಕ್ಕೆ ಅವಕಾಶ ನೀಡಬಾರದು. ಅಲ್ಲದೆ, ಬೆಂಗಳೂರಿನಲ್ಲಿ 38 ಕಿಲೋಮೀಟರ್ ರೋಡ್ ಶೋ ನಡೆಸುವುದರಿಂದ ಜನರಿಗೆ ತೊಂದರೆ ಆಗುತ್ತದೆ ಎಂಬ ಬಗ್ಗೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಯ ವಿಚಾರಣೆ ವೇಳೆಯೂ ಉಲ್ಲೇಖಿಸಲಾಗಿದೆ. ಹೈಕೋರ್ಟ್ ನಿರ್ದೇಶನ ಪಾಲಿಸದೆ ಅನುಮತಿ ನೀಡಲಾಗಿದೆ ಎಂದು ಕಾಂಗ್ರೆಸ್ ದೂರಿತ್ತು.

ಇದನ್ನೂ ಓದಿ: TV9 Pre-poll Survey: ರಾಜ್ಯದಲ್ಲಿ ಸರಳ ಬಹುಮತದ ಸನಿಹದತ್ತ ಬಿಜೆಪಿ, ಕಾಂಗ್ರೆಸ್​ ಪೈಪೋಟಿ

ಕರ್ನಾಟಕದಲ್ಲಿ ಪೂರ್ಣಬಹುಮತದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ ನಿರಂತರ ಕ್ರಿಯಾಶೀಲರಾಗಿದ್ದು, ರಾಜ್ಯದ ಉದ್ದಗಲ ಪ್ರವಾಸ ಮಾಡುತ್ತಿದ್ದಾರೆ. ಏಪ್ರಿಲ್ 29ರಿಂದ ಶುರುವಾಗಿರುವ ಮೋದಿ ಕ್ಯಾಂಪೇನ್ ಮೇ 7ರವರೆಗೂ ನಡೆಯಲಿದ್ದು, ಈಗಾಗಲೇ ಎರಡು ಹಂತದ ಪ್ರಚಾರ ಮುಗಿಸಿದ್ದಾರೆ. ಅತಿ ಹೆಚ್ಚು 28 ವಿಧಾನಸಭಾ ಕ್ಷೇತ್ರಗಳಿರುವ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಶನಿವಾರ ಮಾತ್ರವಲ್ಲ ಭಾನುವಾರವೂ ಸಹ ರೋಡ್​ ಶೋ ನಡೆಸಲಿದ್ದಾರೆ.

ಶನಿವಾರ ಬೆಳಗ್ಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಒಟ್ಟು ಐದು ಕ್ಷೇತ್ರಗಳ ವ್ಯಾಪ್ತಿಗಳಲ್ಲಿ ರೋಡ್‌ ಶೋ ನಡೆಯಲಿದೆ. ಈ ಮೊದಲು ಶನಿವಾರ ಸಂಜೆಗೆ ನಿಗದಿಯಾಗಿದ್ದ ರೋಡ್‌ ಶೋ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ನಡೆಯಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ