Kolar: ವಿಲ್ಲಾ ಬಳಿ ಬಿಟ್ಟುಹೋಗಿದ್ದ ಕಾರಿನಲ್ಲಿದ್ದ 3 ಗೋಣಿ ಚೀಲದಲ್ಲಿತ್ತು ಕೋಟಿ ಕೋಟಿ ಹಣ
ಹಂಚಾಳ ಬಳಿಯ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ನ ವಿಲ್ಲಾದಲ್ಲಿದ್ದ ಕಾರಿನಲ್ಲಿ ಒಟ್ಟು 4 ಕೋಟಿ 5 ಲಕ್ಷ ರೂ. ನಗದು ಪತ್ತೆಯಾಗಿದೆ.
ಕೋಲಾರ: ಇಲ್ಲಿನ ಹಂಚಾಳ ಬಳಿಯ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ನ ವಿಲ್ಲಾದಲ್ಲಿದ್ದ ಕಾರಿನಲ್ಲಿ ಒಟ್ಟು 4 ಕೋಟಿ 5 ಲಕ್ಷ ರೂ. ನಗದು ಪತ್ತೆಯಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವರಿಗೆ ಸೇರಿದ ವಿಲ್ಲಾ ಇದಾಗಿದೆ. ವಿಲ್ಲಾ ಬಳಿ ಬಿಟ್ಟುಹೋಗಿದ್ದ ಕಾರಿನಲ್ಲಿ 3 ಗೋಣಿ ಚೀಲದಲ್ಲಿ 1.5 ಕೋಟಿ ರೂಪಾಯಿ ಇತ್ತು. ಚುನಾವಣಾಧಿಕಾರಿಗಳು, ಪೊಲೀಸರ ದಾಳಿ ವೇಳೆ ವಿಲ್ಲಾ ಬಳಿ ಕಾರು ಬಿಟ್ಟು ಪರಾರಿಯಾಗಿದ್ದರು ಎನ್ನಲಾಗಿದೆ. ಕೆಜಿಎಫ್ ಎಸ್ಪಿ ಧರಣಿದೇವಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆದಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos