Modi Road Show: ಶನಿವಾರ ಮಾತ್ರವಲ್ಲ ಭಾನುವಾರವೂ ಬೆಂಗಳೂರಿನಲ್ಲಿ ಮೋದಿ ರೋಡ್​ ಶೋ: ಇಲ್ಲಿದೆ ರೂಟ್​ ಮ್ಯಾಪ್

ಅತಿ ಹೆಚ್ಚು 28 ವಿಧಾನಸಭಾ ಕ್ಷೇತ್ರಗಳಿರುವ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಶನಿವಾರ ಮಾತ್ರವಲ್ಲ ಭಾನುವಾರವೂ ಸಹ ರೋಡ್​ ಶೋ ನಡೆಸಲಿದ್ದಾರೆ. ಎಲ್ಲೆಲ್ಲಿ ಸಾಗಲಿದೆ ರೋಡ್​ ಶೋ. ಈ ಕೆಳಗಿನಂತಿದೆ ನೋಡಿ ರೂಟ್ ಮ್ಯಾಪ್.

Modi Road Show: ಶನಿವಾರ ಮಾತ್ರವಲ್ಲ ಭಾನುವಾರವೂ ಬೆಂಗಳೂರಿನಲ್ಲಿ ಮೋದಿ ರೋಡ್​ ಶೋ: ಇಲ್ಲಿದೆ ರೂಟ್​ ಮ್ಯಾಪ್
ಪ್ರಧಾನಿ ನರೇಂದ್ರ ಮೋದಿ
Follow us
|

Updated on:May 04, 2023 | 1:50 PM

ಬೆಂಗಳೂರು: ಕರ್ನಾಟಕದಲ್ಲಿ ಪೂರ್ಣಬಹುಮತದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ(PM Nagendra Modi) ಶಪಥ ಮಾಡಿದ್ದಾರೆ. ಚುನಾವಣೆಗೆ ಇನ್ನೇನು ಬೆರಳೆಣಿಕೆ ದಿನಗಳು ಬಾಕಿ ಉಳಿದಿರುವಂತೆ ರಾಜ್ಯದ ಉದ್ದಗಲಕ್ಕೂ ದಂಡಯಾತ್ರೆ ಕೈಗೊಂಡಿದ್ದಾರೆ. ಏಪ್ರಿಲ್ 29ರಿಂದ ಶುರುವಾಗಿರುವ ಮೋದಿ ಕ್ಯಾಂಪೇನ್ ಮೇ 7ರವರೆಗೂ ನಡೆಯಲಿದ್ದು, ಈಗಾಗಲೇ ಎರಡು ಹಂತದ ಪ್ರಚಾರ ಮುಗಿಸಿದ್ದಾರೆ. ಹಳೇ ಮೈಸೂರು, ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಗಳಲ್ಲಿ ರಣಕಹಳೆ ಮೊಳಗಿಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಲ್ಲಿ ಮೇ 6ರಂದು(ಶನಿವಾರ) ಮಾತ್ರವಲ್ಲದೇ ಭಾನುವಾರವೂ (ಮೇ7) ಸಹ ರಾಜಧಾನಿ ಬೆಂಗಳೂರು(Bengaluru) ನಗರದಲ್ಲಿ ಬೃಹತ್‌ ರೋಡ್‌ ಶೋ(Modi Roadshow)  ನಡೆಸಲಿದ್ದಾರೆ.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ಮೇ 6ರಂದು ಬೆಂಗಳೂರಿನಲ್ಲಿ 38 ಕಿಮೀ ಮೋದಿ ರ‍್ಯಾಲಿ: ಈ ರಸ್ತೆಗಳು ಬಂದ್

ಹೌದು..ಈ ಮೂದಲು ಮೇ 6ರಂದು ಮಾತ್ರ ಇಡೀ ದಿನ ಬೆಂಗಳೂರು ನಗರದಲ್ಲಿ ಒಟ್ಟು 38 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ಫಿಕ್ಸ್ ಆಗಿತ್ತು. ಆದ್ರೆ, ಮಳೆ ಅಡ್ಡಿಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ನಿಗದಿಯಾಗಿದ್ದ ರೋಡ್​ ಶೋ ಭಾನುವಾರ ಬೆಳಗ್ಗೆಗೆ ನಿಗದಿ ಮಾಡಲಾಗಿದೆ. ಕಳೆದ ಐದಾರು ದಿನಗಳಿಂದ ಬೆಂಗಳೂರಿನಲ್ಲಿ ಸಂಜೆ ಸಮಯದಲ್ಲಿ ಮಳೆ ಬರುತ್ತಿದೆ.  ಈ ಕಾರಣಕ್ಕಾಗಿ  ಶನಿವಾರ ಸಂಜೆ ನಿಗದಿಯಾಗಿದ್ದ ಮಾರ್ಗದಲ್ಲೇ ಭಾನುವಾರ ಬೆಳಗ್ಗೆ ಮೋದಿ ರೋಡ್ ಶೋ ನಡೆಯಲಿದೆ.

ಮೇ6ರ ಬೆಳಗಿನ ರೋಡ್ ಶೋ ಮಾರ್ಗ

ಶನಿವಾರ ಬೆಳಗ್ಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಒಟ್ಟು ಐದು ಕ್ಷೇತ್ರಗಳ ವ್ಯಾಪ್ತಿಗಳಲ್ಲಿ ರೋಡ್‌ ಶೋ ನಡೆಯಲಿದೆ. ಹಳೆ ವಿಮಾನ ನಿಲ್ದಾಣ ಜಂಕ್ಷನ್‌ ಬಳಿಯ ಸುರಂಜನ್‌ದಾಸ್‌ ರಸ್ತೆ, ಬೆಮಲ್‌ ಕಾರ್ಖಾನೆ ಜಂಕ್ಷನ್‌, ತಿಪ್ಪಸಂದ್ರ ಮುಖ್ಯ ರಸ್ತೆ, ಎಚ್‌ಎಎಲ್‌ 2ನೇ ಹಂತದ 80 ಅಡಿ ಜಂಕ್ಷನ್‌, ಸಾಯಿ ರಸ್ತೆ ಜಂಕ್ಷನ್‌, ಇಂದಿರಾನಗರ, ಚಿನ್ಮಯ ಮಿಷನ್‌ ಆಸ್ಪತ್ರೆ ರಸ್ತೆ, ಹಳೆ ಮದ್ರಾಸ್‌ ರಸ್ತೆಯ ಸ್ವಾಮಿ ವಿವೇಕಾನಂದ ರಸ್ತೆ, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ.

  • ಮಹದೇವಪುರ
  • ಕೆ.ಆರ್. ಪುರ
  • ಸಿ.ವಿ. ರಾಮನ್ ನಗರ
  • ಶಿವಾಜಿ ನಗರ
  • ಶಾಂತಿ ನಗರ

ಮೇ7ರಂದು ಬೆಳಗ್ಗೆ ರೋಡ್ ಶೋ ಸಾಗುವ ಮಾರ್ಗ

ಶನಿವಾರ ಸಂಜೆ ನಿಗದಿಯಾಗಿದ್ದ ರೋಡ್‌ ಶೋ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ನಡೆಯಲಿದೆ. ಜೆ.ಪಿ.ನಗರದ ಆರ್‌ಬಿಐನಿಂದ ಶುರುವಾಗಿ ಬೊಮ್ಮನಹಳ್ಳಿ, ಜೆ.ಪಿನಗರ, ಜಯನಗರ, ಅರಬಿಂದೊ ಮಾರ್ಗ, ಕೂಲ್‌ ಜಾಯಿಂಟ್‌, ಮಯ್ಯಾಸ್‌, ಕರಿಸಂದ್ರ, ಸೌತ್‌ ಎಂಡ್‌ ಸರ್ಕಲ್‌, ನೆಟ್ಕಲ್ಲಪ್ಪ ಸರ್ಕಲ್‌, ಎನ್‌.ಆರ್‌.ಕಾಲೋನಿ, ಬಸವನಗುಡಿ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್‌, ಟಿ.ಆರ್‌.ಮಿಲ್‌, ಸಿರ್ಸಿ ಸರ್ಕಕ್‌, ಈಟಾ ಮಾಲ್‌, ಮಾಗಡಿ ರಸ್ತೆ, ಬಸವೇಶ್ವರ ನಗರ, ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌, ಮೋದಿ ಆಸ್ಪತ್ರೆ, ನವರಂಗ್‌ ಸರ್ಕಲ್‌, ಸಂಪಿಗೆ ರಸ್ತೆ, ಮಲ್ಲೇಶ್ವರ, ಮಾರಮ್ಮ ದೇವಸ್ಥಾನ ಬಳಿ ರೋಡ್‌ ಶೋ ಅಂತ್ಯವಾಗಲಿದೆ.

  • ಬೆಂಗಳೂರು ದಕ್ಷಿಣ
  • ಬೊಮ್ಮನಹಳ್ಳಿ
  • ಜಯನಗರ
  • ಪದ್ಮನಾಭನಗರ
  • ಬಸವನಗುಡಿ
  • ಚಿಕ್ಕಪೇಟೆ
  • ಚಾಮರಾಜಪೇಟೆ
  • ಗಾಂಧಿನಗರ
  • ಮಹಾಲಕ್ಷ್ಮಿ
  • ಲೇಔಟ್ ವಿಜಯ ನಗರ
  • ಗೋವಿಂದರಾಜನಗರ
  • ರಾಜಾಜಿನಗರ
  • ಮಲ್ಲೇಶ್ವರಂ

ರಾಜಧಾನಿ ಬೆಂಗಳೂರು ಅತಿ ಹೆಚ್ಚು 28 ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆ. ಬೆಂಗಳೂರು ಗ್ರಾಮಾಂತರದ ನಾಲ್ಕು ಕ್ಷೇತ್ರಗಳನ್ನು ಸೇರಿಸಿಕೊಂಡ್ರೆ ಒಟ್ಟು 32 ಕ್ಷೇತ್ರಗಳಾಗುತ್ತೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಬೆಂಗಳೂರಲ್ಲಿ ಹೆಚ್ಚು ಸ್ಥಾನ ಗೆಲ್ಲಲೇಬೇಕು. ಹೀಗಾಗಿ ಪ್ರಧಾನಿ ಮೋದಿ ಬೆಂಗಳೂರನ್ನು ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ಈ ವೀಕೆಂಡ್​ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಇದರೊಂದಿಗೆ ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ಮೂಲಕ ಇಡೀ ನಗರವನ್ನು ಆವರಿಸಿಕೊಳ್ಳಲಿದ್ದಾರೆ. ಉತ್ತರದಿಂದ ದಕ್ಷಿಣ.. ಪೂರ್ವದಿಂದ ಪಶ್ಚಿಮ.. ನಗರದ ಅಷ್ಟ ದಿಕ್ಕುಗಳಲ್ಲೂ ಮೋದಿ ಸಂಚರಿಸಲಿದ್ದಾರೆ.

ಸಾರ್ವಜನಿಕರು ಮೇ6 ಹಾಗೂ 7ರಂದು ಬೆಳಗ್ಗೆ ನಡೆಯಲಿರುವ ಪ್ರಧಾನಮಂತ್ರಿ ರೋಡ್‌ ಶೋ ವೇಳೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದಲ್ಲಿ ಸೂಚಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Thu, 4 May 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ