Karnataka Assembly Elections 2023: ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಪ್ರಚಾರಕ್ಕೆ ಅನುಮತಿ ನಿರಾಕರಣೆ, ಕಾರಣ ಇಲ್ಲಿದೆ
ಕನಕಪುರದಲ್ಲಿ ಡಿಕೆ ಶಿವಕುಮಾರ್ ಪರ ಡಿಕೆ ಸುರೇಶ್ ಪ್ರಚಾರ ನಡೆಸಲಿದ್ದು ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ಒಂದೇ ಮಾರ್ಗದಲ್ಲಿ ಪ್ರಚಾರ ಮಾಡಿದರೆ ಘರ್ಷಣೆ ಎದುರಾಗುವ ಹಿನ್ನೆಲೆ ಪ್ರಚಾರ ರದ್ದು ಮಾಡಲಾಗಿದೆ.
ರಾಮನಗರ: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ದಿನಗಳು ಸಮೀಪಿಸುತ್ತಿದ್ದು ಕನಕಪುರ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಂದಾಯ ಸಚಿವ ಆರ್ ಅಶೋಕ್(R Ashok) ಸ್ಪರ್ಧಿಸುತ್ತಿದ್ದಾರೆ. ಹೈವೋಲ್ಟೇಜ್ ಕ್ಷೇತ್ರ ಎನಿಸಿರುವ ಕನಕಪುರ ಕ್ಷೇತ್ರದಲ್ಲಿಂದು ಆರ್ ಅಶೋಕ್ ಪ್ರಚಾರ ನಡೆಸಬೇಕಿತ್ತು. ಆದ್ರೆ ಪ್ರಚಾರ ದಿಢೀರ್ ರದ್ದಾಗಿದೆ. ಕನಕಪುರದಲ್ಲಿ ಡಿಕೆ ಶಿವಕುಮಾರ್ ಪರ ಡಿಕೆ ಸುರೇಶ್ ಪ್ರಚಾರ ನಡೆಸಲಿದ್ದು ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು ಒಂದೇ ಮಾರ್ಗದಲ್ಲಿ ಪ್ರಚಾರ ಮಾಡಿದರೆ ಘರ್ಷಣೆ ಎದುರಾಗುವ ಹಿನ್ನೆಲೆ ಪ್ರಚಾರ ರದ್ದು ಮಾಡಲಾಗಿದೆ.
ಬಿಜೆಪಿ ಅಭ್ಯರ್ಥಿ ಆರ್ ಅಶೋಕ್, ಕನಕಪುರ ಕ್ಷೇತ್ರದ ಅರಳಾಳು ಸಂದ್ರಗೇಟ್, ಚಿಕ್ಕಮುದವಾಡಿ, ಚಿಕ್ಕೇನಹಳ್ಳಿ ವಾಡೇದೊಡ್ಡಿ ಮುಂತಾದೆಡೆ ಪ್ರಚಾರ ಮಾಡಬೇಕಿತ್ತು. ಆದ್ರೆ ಇದೇ ಮಾರ್ಗದಲ್ಲಿ ಸಂಸದ ಡಿಕೆ ಸುರೇಶ್ ಅವರು ಡಿಕೆ ಶಿವಕುಮಾರ್ ಪರವಾಗಿ ಪ್ರಚಾರ ನಡೆಸುವ ಹಿನ್ನೆಲೆ ಆಶೋಕ್ ಪ್ರಚಾರಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಘರ್ಷಣೆ ನಡೆಯುವ ಸಾಧ್ಯತೆ ಹಿನ್ನೆಲೆ ಪೊಲೀಸರಿಂದ ಅನುಮತಿ ನಿರಾಕರಿಸಲಾಗಿದೆ.
ಸದ್ಯ ಈಗ ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರ ಪರವಾಗಿ ಡಿಕೆ ಸುರೇಶ್ ರೋಡ್ ಶೋ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧೆ: ಆರ್ ಅಶೋಕ್ ಫಸ್ಟ್ ರಿಯಾಕ್ಷನ್ ಹೀಗಿದೆ..!
ಅಮಿತ್ ಶಾ ಕನಕಪುರ ಪ್ರವಾಸ ರದ್ದು
ಇನ್ನು ಇಂದು ಕನಕಪುರ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ನಡೆಸಲಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಆದ್ರೆ ಡಿಕೆ ಶಿವಕುಮಾರ್ ಪ್ರಚಾರ ಹಿನ್ನೆಲೆ ಬಿಜೆಪಿ ಪ್ರಚಾರ ರದ್ದಾಗಿದೆ. ಇಂದಿನಿಂದ ನಿರಂತರ 4 ದಿನಗಳ ಕಾಲ ರಾಜ್ಯದಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ನಾಳೆ ರಾಯಚೂರು, ಮಸ್ಕಿ, ಕೊಪ್ಪಳ, ಕುಷ್ಟಗಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ನಾಳೆ ರಾತ್ರಿ ಹೊಸಪೇಟೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಹುನಗುಂದ, ಅಥಣಿ, ರಾಯಭಾಗ, ಚಿಕ್ಕೋಡಿ, ಸವದತ್ತಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಶನಿವಾರ ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಭಾನುವಾರ ಆನೇಕಲ್, ಮಾಲೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಭಾನುವಾರ ರಾತ್ರಿ ಬೆಂಗಳೂರಿನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.
ಮೋದಿ ಪ್ರವಾಸ ಹಿನ್ನೆಲೆ ಸಿದ್ದರಾಮಯ್ಯ ಪ್ರಚಾರ ರದ್ದು
ಮೇ 2ರಂದು ಪ್ರಚಾರ ಕಾರ್ಯಕ್ರಮಕ್ಕಾಗಿ ಸಿದ್ದರಾಮಯ್ಯ ಗಂಗಾವತಿಗೆ ತೆರಳಬೇಕಾಗಿತ್ತು. ಜಕ್ಕೂರು ಹೆಲಿಪ್ಯಾಡ್ ಬಳಿ ಟೇಕಫ್ಗಾಗಿ ಕಾದು ಕುಳಿತ್ತಿದ್ದರು. ಒಂದು ಗಂಟೆಗಳ ಕಾಲ ಕಾದು ಕುಳಿತು ಟೇಕಪ್ಗಾಗಿ ನಿರೀಕ್ಷಿಸಿದ್ದರು. ಆದರೆ ಪ್ರಧಾನಿ ಹೊಸಪೇಟೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಅನ್ನು ಗಂಗಾವತಿಯಲ್ಲಿ ಇಳಿಸಲು ಅನುಮತಿ ನಿರಾಕರಿಸಲಾಗಿತ್ತು.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ