Narendra Modi: ಹನುಮನ ಜನಿಸಿದ ನಾಡಲ್ಲೇ ಮತ್ತೆ ಬಜರಂಗಬಲಿ ಘೋಷಣೆ; ಪ್ರಧಾನಿ ಮೋದಿ ತಂತ್ರಗಾರಿಕೆ ಏನು?

ಪ್ರತಿಪಕ್ಷ ಕಾಂಗ್ರೆಸ್​ನ ಟೀಕೆ, ಆರೋಪಗಳನ್ನೇ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಪೂರಕವಾಗಿ ಬಳಸಿಕೊಳ್ಳುವ ಕಲೆ ಕರಗತ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಹನುಮಂತ ಜನಿಸಿದ ನಾಡಿನಲ್ಲೇ ‘ಬಜರಂಗಬಲಿ’ ದಾಳ ಉರುಳಿಸಿದ್ದಾರೆ.

Narendra Modi: ಹನುಮನ ಜನಿಸಿದ ನಾಡಲ್ಲೇ ಮತ್ತೆ ಬಜರಂಗಬಲಿ ಘೋಷಣೆ; ಪ್ರಧಾನಿ ಮೋದಿ ತಂತ್ರಗಾರಿಕೆ ಏನು?
ಪ್ರಧಾನಿ ನರೇಂದ್ರ ಮೋದಿ
Follow us
|

Updated on: May 05, 2023 | 4:47 PM

ಬಳ್ಳಾರಿ: ಪ್ರತಿಪಕ್ಷ ಕಾಂಗ್ರೆಸ್​ನ ಟೀಕೆ, ಆರೋಪಗಳನ್ನೇ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಪೂರಕವಾಗಿ ಬಳಸಿಕೊಳ್ಳುವ ಕಲೆ ಕರಗತ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ಹನುಮಂತ ಜನಿಸಿದ ನಾಡಿನಲ್ಲೇ ‘ಬಜರಂಗಬಲಿ’ ದಾಳ ಉರುಳಿಸಿದ್ದಾರೆ. ಆ ಮೂಲಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಹೆಚ್ಚು ಮತ ಸೆಳೆಯುವ ತಂತ್ರಗಾರಿಕೆ ರೂಪಿಸಿದ್ದಾರೆ. ಇದಕ್ಕೆ ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದಿದ್ದ ಬಿಜೆಪಿ ಸಮಾವೇಶವೇ ಸಾಕ್ಷಿಯಾಗಿತ್ತು. ಈಗ ಮತ್ತೊಮ್ಮೆ ಬಳ್ಳಾರಿಯಲ್ಲಿಯೂ ಮೋದಿ ಅದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹನುಮಂತ ಜನಿಸಿದ ಸ್ಥಳ ಎಂದು ಪರಿಗಣಿಸಲಾಗುವ ಅಂಜನಾದ್ರಿಗೆ ಸನಿಹದಲ್ಲಿರುವ ಎರಡೂ ಪ್ರದೇಶಗಳ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮೋದಿ ‘ಬಜರಂಗಬಲಿ’ ವಿಚಾರ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್​ ಪಕ್ಷವು ಬಜರಂಗದಳ ನಿಷೇಧದ ಕುರಿತು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ ದಿನವೇ ಮೋದಿ, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದರು. ಅಲ್ಲಿ ಅವರು, ‘ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ. ಕಾಂಗ್ರೆಸ್​​ನ ಈ​ ಪ್ರಣಾಳಿಕೆಯಲ್ಲಿ ಹೊಸ ತಂತ್ರ ಅಡಗಿದೆ. ಕಾಂಗ್ರೆಸ್​​ನವರಿಗೆ ಹನುಮಂತನ ಕಂಡರೂ ಆಗಿಬರುವುದಿಲ್ಲ’ ಎಂದು ಕಾಂಗ್ರೆಸ್​ ಪ್ರಣಾಳಿಕೆಗೆ ತಿರುಗೇಟು ನೀಡಿದ್ದರು.

ಇದೀಗ ಮತ್ತೆ ‘ಬಜರಂಗಬಲಿ’ ಘೋಷಣೆ ಮಾಡಿ ಗಮನ ಸೆಳೆದಿದ್ದಾರೆ. ನಿರ್ದಿಷ್ಟ ಸಮುದಾಯದ ತುಷ್ಟೀಕರಣ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇರುವುದು ಎದ್ದು ಕಾಣುತ್ತಿದೆ. ನಾವು ಆ ಸಂಘಟನೆಯನ್ನು ನಿಷೇಧಿಸುತ್ತೇವೆ, ಇದನ್ನು ನಿಷೇಧಿಸುತ್ತೇವೆ ಎಂದು ಹೇಳುವ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದೆ. ನಾನು ಭಜರಂಗಬಲಿ ಘೋಷಣೆ ಮಾಡುತ್ತಿದ್ದಂತೆಯೇ ಅವರ ಬುಡ ಅಲುಗಾಡಲಾರಂಭಿಸಿದೆ. ಕಾಂಗ್ರೆಸ್ಸಿಗೆ ಭಯ ಉಂಟಾಗಿದೆ ಎಂದು ಮೋದಿ ಹೇಳಿದ್ದಾರೆ.

ಮೋದಿ ತಂತ್ರವೇನು?

ಆಂಜನೇಯನ ಜನ್ಮಸ್ಥಳ ವಿಚಾರ ಇತ್ತೀಚೆಗೆ ವಿವಾದಕ್ಕೆ ಸೃಷ್ಟಿಯಾಗಿತ್ತು. ಹಂಪಿಯ ಅಂಜನಾದ್ರಿಯನ್ನು ಹನುಮಂತ ಜನಿಸಿದ ನಾಡು ಎಂದು ಪರಿಗಣಿಸಲಾಗಿದ್ದರೆ, ಅತ್ತ ತಿರುಮಲದ ಅಂಜನಾದ್ರಿಯೇ ವಾಯುಪುತ್ರನ ಜನ್ಮಸ್ಥಾನ ಎಂದು ಕೆಲವು ಮಂದಿ ವಾದಿಸಿದ್ದರು. ಬಿಜೆಪಿ ನಾಯಕರು ಹಂಪಿಯ ಅಂಜನಾದ್ರಿಯೇ ಆಂಜನೇಯ ಹುಟ್ಟಿದ ಸ್ಥಳ ಎಂದು ಪ್ರತಿಪಾದಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಅಂಜನಾದ್ರಿಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಶೇಷ ಅನುದಾನವನ್ನೂ ಘೋಷಿಸಿದ್ದರು.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಬ್ಯಾನ್​ಗೆ ಒತ್ತಾಯಿಸುವ ಮೂಲಕ, ಕಾಂಗ್ರೆಸ್ ಭಯೋತ್ಪಾದಕರೊಟ್ಟಿಗೆ ನಿಂತಿದೆ: ಪ್ರಧಾನಿ ಮೋದಿ

ಈ ಎಲ್ಲ ಬೆಳವಣಿಗೆಗಳ ನಂತರ ಅಂಜನಾದ್ರಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ ಕಂಡುಬಂದಿತ್ತು. ಕೇರಳದ ಶಬರಿಮಲೆ ದೇಗುಲಕ್ಕೆ ಯಾತ್ರೆ ಮಾಡುವ ರೀತಿಯಲ್ಲೇ ಭಕ್ತರು ಅಂಜನಾದ್ರಿಗೂ ವ್ರತದೊಂದಿಗೆ ತೆರಳಲು ಆರಂಭಿಸಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಮೋದಿಗೆ ಕಾಂಗ್ರೆಸ್​​ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ ಅಂಶವೂ ಸರಿಯಾದ ಸಮಯದಲ್ಲೇ ಹೊಸ ಅಸ್ತ್ರ ಸಿಕ್ಕಂತೆ ಮಾಡಿತು. ಅದನ್ನವರು ಸೂಕ್ತ ಸಮಯದಲ್ಲೇ ಪ್ರಯೋಗ ಮಾಡಲು ಆರಂಭಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮೋದಿ ಮತ್ತೊಂದು ಅಸ್ತ್ರ ‘ದಿ ಕೇರಳ ಸ್ಟೋರಿ’ ಸಿನಿಮಾ

ಕಾಂಗ್ರೆಸ್​​ ತುಷ್ಟೀಕರಣ ನೀತಿ ಹಾಗೂ ಅಲ್ಪಸಂಖ್ಯಾತರ ಓಲೈಕೆ ವಿರುದ್ಧ ಮೋದಿ ಬಳಸಿದ ಮತ್ತೊಂದು ಪ್ರಬಲ ಅಸ್ತ್ರ ಇಂದು (ಮೇ 05) ಬಿಡುಗಡೆ ಆಗಿರುವ ವಿವಾದಾತ್ಮಕ ‘ದಿ ಕೇರಳ ಸ್ಟೋರಿ‘ ಸಿನಿಮಾ. ಇದರ ಬಗ್ಗೆ ಉಲ್ಲೇಖಿಸಿರುವ ಮೋದಿ, ಸಿನಿಮಾವು ಸುಂದರ ರಾಜ್ಯ ಕೇರಳದಲ್ಲಿ ನಡೆದಿರುವ ಕರಾಳ ಘಟನೆಗಳನ್ನು ಆಧರಿಸಿದೆ. ಆದರೆ ಕಾಂಗ್ರೆಸ್​ನವರು ಆ ಸಿನಿಮಾವನ್ನು ನಿಷೇಧಿಸಲು ಒತ್ತಾಯಿಸುವ ಮೂಲಕ ಭಯೋತ್ಪಾದಕರ ಜೊತೆಗೆ ನಿಂತಿದ್ದಾರೆ ಎಂದು ಟೀಕಿಸಿದ್ದಾರೆ. ಈ ಮೂಲಕ ಕಾಂಗ್ರೆಸ್​ ತೋರುವ ಪ್ರತಿರೋಧಗಳನ್ನೇ ತಮ್ಮ ಮತಬೇಟೆಯ ಅಸ್ತ್ರಗಳನ್ನಾಗಿಸಿಕೊಳ್ಳುತ್ತಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್