- Kannada News Photo gallery Team India cricketer Shubman Gill will lend his voice to Indian Spider-Man
Shubman Gill: ಬಣ್ಣದ ಲೋಕಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ ಶುಭ್ಮನ್ ಗಿಲ್
ಅಕ್ರಾಸ್ ದಿ ಸ್ಪೈಡರ್-ವರ್ಸ್‌ನಲ್ಲಿ ಭಾರತೀಯ ಸ್ಪೈಡರ್‌ಮ್ಯಾನ್‌ನ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಅನುಭವವನ್ನು ಶುಬ್‌ಮನ್ ಗಿಲ್ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
Updated on:May 08, 2023 | 4:25 PM

ಬಾಲಿವುಡ್ ಮತ್ತು ಕ್ರಿಕೆಟ್ ಅಂಗಳಕ್ಕೆ ಹಿಂದಿನಿಂದಲೂ ಭಾರೀ ನಂಟು. ಕ್ರಿಕೆಟಿಗರ ಜೊತೆ ಬಾಲಿವುಡ್ ನಟಿಯರು ಡೇಟಿಂಗ್, ಲವ್ ಅಫೇರ್. ಜೊತೆಗೆ ಕ್ರಿಕೆಟಿಗರು ಬಾಲಿವುಡ್ನಲ್ಲಿಯೂ ಎಂಟ್ರಿಕೊಡುವುದುಂಟು. ಇದೀಗಾ ಟೀಮ್ ಇಂಡಿಯಾದ ಯುವ ಆಟಗಾರ ಶುಭ್ಮನ್ ಗಿಲ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ಅನಿಮೇಟೆಡ್ ಸಿನಿಮಾ ಸ್ಪೈಡರ್ ಮ್ಯಾನ್ಗೆ ಶುಭ್ಮನ್ ಗಿಲ್ ಧ್ವನಿಯಾಗಲಿದ್ದಾರೆ. ಕ್ರಿಕೆಟ್ ಹೊರತಾಗಿ ಇದೀಗಾ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ

ಅಕ್ರಾಸ್ ದಿ ಸ್ಪೈಡರ್-ವರ್ಸ್‌ನಲ್ಲಿ ಭಾರತೀಯ ಸ್ಪೈಡರ್‌ಮ್ಯಾನ್‌ನ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಅನುಭವವನ್ನು ಶುಬ್‌ಮನ್ ಗಿಲ್ ಸ್ವತಹ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಹವಾ ಸೃಷ್ಟಿಸಿದ್ದ ಯುವ ಆಟಗಾರ ಶುಭ್ಮನ್ ಗಿಲ್. ಇದೀಗಾ ಬಣ್ಣದ ಲೋಕಕ್ಕೆ ಕಾಲಿಟ್ಟಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಸ್ಪೈಡರ್ ಮ್ಯಾನ್ ಚಿತ್ರದ ಹಿಂದಿ ಮತ್ತು ಪಂಜಾಬಿ ಆವೃತ್ತಿಗಳಲ್ಲಿ ಮುಖ್ಯ ನಾಯಕನಿಗೆ ಶುಭಮನ್ ಗಿಲ್ ಧ್ವನಿ ನೀಡಿದ್ದಾರೆ. ಈ ಅನಿಮೇಟೆಡ್ ಚಿತ್ರದ ಟ್ರೇಲರ್ ಜೂನ್ 2 ರಂದು ಬಿಡುಗಡೆಯಾಗಲಿದೆ ಎಂದು ಸೋನಿ ಪಿಕ್ಚರ್ಸ್ನ ಅಧಿಕೃತ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಶುಭಮನ್ ಗಿಲ್ ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಇರುವುದಾಗಿ ಹೇಳಿಕೊಂಡಿರುವುದು ಭಾರೀ ಸುದ್ದಿಯಾಗಿತ್ತು.
Published On - 4:25 pm, Mon, 8 May 23
























