- Kannada News Photo gallery Cricket photos IPL 2023 Yuzvendra Chahal scripts history equals Dwayne Bravos massive feat
IPL 2023: ಒಂದೆಜ್ಜೆ ಮುಂದಿಟ್ಟರೆ ವಿಶ್ವ ದಾಖಲೆ; ಬ್ರಾವೋ ರೆಕಾರ್ಡ್ ಸರಿಗಟ್ಟಿದ ಯುಜ್ವೇಂದ್ರ ಚಹಲ್!
IPL 2023: ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಪ್ರಮುಖ 4 ವಿಕೆಟ್ ಉರುಳಿಸಿದ ಚಹಲ್ ವಿಶ್ವದ ಶ್ರೀಮಂತ ಟಿ20 ಲೀಗ್‌ನಲ್ಲಿ ಡ್ವೇನ್ ಬ್ರಾವೋ ಅವರ ಐತಿಹಾಸಿಕ ಸಾಧನೆಯನ್ನು ಸರಿಗಟ್ಟಿದ್ದಾರೆ.
Updated on:May 08, 2023 | 3:31 PM

ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ ಎಸೆತದಲ್ಲಿ ಸೊಲನುಭವಿಸಿತ್ತಾದರೂ ತಂಡದ ಸ್ಟಾರ್ ಸ್ಪಿನ್ನರ್, ಸ್ಪಿನ್ ಮಾಂತ್ರಿಕ ಯುಜ್ವೇಂದ್ರ ಚಹಾಲ್ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಪ್ರಮುಖ 4 ವಿಕೆಟ್ ಉರುಳಿಸಿದ ಚಹಲ್ ವಿಶ್ವದ ಶ್ರೀಮಂತ ಟಿ20 ಲೀಗ್‌ನಲ್ಲಿ ಡ್ವೇನ್ ಬ್ರಾವೋ ಅವರ ಐತಿಹಾಸಿಕ ಸಾಧನೆಯನ್ನು ಸರಿಗಟ್ಟಿದ್ದಾರೆ.

ಚಹಲ್ ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದುವರೆಗೆ ಐಪಿಎಲ್ನಲ್ಲಿ 142 ಪಂದ್ಯಗಳನ್ನಾಡಿರುವ ಚಹಲ್ 183 ವಿಕೆಟ್ ಪಡೆದಿದ್ದಾರೆ.

ಇದರೊಂದಿಗೆ ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಡ್ವೇನ್ ಬ್ರಾವೋ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬ್ರಾವೋ ಕೂಡ ಐಪಿಎಲ್ನಲ್ಲಿ 183 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿರುವ ಟಾಪ್ 5 ಬೌಲರ್ಗಳನ್ನು ನೋಡುವುದಾದರೆ..

ಸದ್ಯ ಮುಂಬೈ ಪರ ಆಡುತ್ತಿರುವ ಪಿಯೂಷ್ ಚಾವ್ಲಾ 175 ಪಂದ್ಯಗಳಿಂದ 174 ವಿಕೆಟ್ ಉರುಳಿಸಿ 3ನೇ ಸ್ಥಾನದಲ್ಲಿದ್ದಾರೆ.

ಟೀಂ ಇಂಡಿಯಾದ ಮಾಜಿ ಅನುಭವಿ ಸ್ಪಿನ್ನರ್ ಅಮಿತ್ ಮಿತ್ರಾ ಕೂಡ ಮತ್ತೆ ಐಪಿಎಲ್ಗೆ ಎಂಟ್ರಿಕೊಟ್ಟಿದ್ದು, ಸದ್ಯ 160 ಪಂದ್ಯಗಳಿಂದ 172 ವಿಕೆಟ್ ಉರುಳಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಮತ್ತೊಬ್ಬ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 195 ಪಂದ್ಯಗಳಿಂದ 171 ವಿಕೆಟ್ ಪಡೆದಿದ್ದಾರೆ.
Published On - 3:30 pm, Mon, 8 May 23
























