- Kannada News Photo gallery Cricket photos ICC ODI Rankings Pakistans Reign As No 1 Team Lasts For Just 48 Hours
ODI rankings: 48 ಗಂಟೆಗಳೊಳಗೆ ನಂ.1 ಪಟ್ಟ ಕಳೆದುಕೊಂಡ ಪಾಕಿಸ್ತಾನ; ಭಾರತಕ್ಕೆ ಯಾವ ಸ್ಥಾನ?
ODI rankings: ತವರಿನಲ್ಲಿ ಏಕದಿನ ಸರಣಿ ವಶಪಡಿಸಿಕೊಂಡಿರುವ ಪಾಕಿಸ್ತಾನ 2 ದಿನಗಳ ಹಿಂದೆ ಏಕದಿನ ರ್ಯಾಂಕಿಂಗ್ನಲ್ಲಿ ನಂ.1 ಪಟ್ಟಕ್ಕೇರಿತ್ತು.
Updated on: May 08, 2023 | 4:03 PM

ಸದ್ಯ ವಿಶ್ವದ ಇತರ ತಂಡಗಳ ಆಟಗಾರರು ಐಪಿಎಲ್ನಲ್ಲಿ ಬ್ಯುಸಿಯಾಗಿದ್ದರೆ, ಪಾಕಿಸ್ತಾನ ಮಾತ್ರ ಕಿವೀಸ್ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡ ಪಾಕಿಸ್ತಾನಕ್ಕೆ ಕೇವಲ 48 ಗಂಟೆಗಳೊಳಗೆ ಕೊಂಚ ಹಿನ್ನಡೆಯುಂಟಾಗಿದೆ.

ತವರಿನಲ್ಲಿ ಏಕದಿನ ಸರಣಿ ವಶಪಡಿಸಿಕೊಂಡಿರುವ ಪಾಕಿಸ್ತಾನ 2 ದಿನಗಳ ಹಿಂದೆ ಏಕದಿನ ರ್ಯಾಂಕಿಂಗ್ನಲ್ಲಿ ನಂ.1 ಪಟ್ಟಕ್ಕೇರಿತ್ತು. ಆದರೆ ಕೊನೆಯ ಏಕದಿನ ಪಂದ್ಯದಲ್ಲಿ ಕಿವೀಸ್ ಅದ್ಭುತ ಜಯ ಸಾಧಿಸುವ ಮೂಲಕ ಪಾಕ್ ತಂಡದ ನಂ.1 ಪಟ್ಟವನ್ನು ಕಸಿದುಕೊಂಡಿದೆ.

ಸದ್ಯ ಕಿವೀಸ್ ವಿರುದ್ಧ ಅಂತಿಮ ಪಂದ್ಯದಲ್ಲಿ ಸೋತ ಪಾಕ್ ಮೊದಲ ಸ್ಥಾನದಿಂದ ಕುಸಿದು 112 ರೇಟಿಂಗ್ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

ಪಾಕ್ ಮೂರನೇ ಸ್ಥಾನಕ್ಕೆ ಕುಸಿಯುವ ಮೂಲಕ ಆಸ್ಟ್ರೇಲಿಯಾ 113 ರೇಟಿಂಗ್ನೊಂದಿಗೆ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ಐಪಿಎಲ್ ನಡೆಯುತ್ತಿರುವುದರಿಂದ ಟೀಂ ಇಂಡಿಯಾ ಯಾವುದೇ ಏಕದಿನ ಸರಣಿ ಆಡದಿದ್ದರೂ, ರ್ಯಾಂಕಿಂಗ್ನಲ್ಲಿ 113 ರೇಟಿಂಗ್ನೊಂದಿಗೆ 2ನೇ ಸ್ಥಾನವನ್ನು ಪಡೆದುಕೊಂಡಿದೆ.

ಇನ್ನುಳಿದಂತೆ ಇಂಗ್ಲೆಂಡ್, ನ್ಯೂಜಿಲೆಂಡ್, ಸೌತ್ ಆಫ್ರಿಕಾ ಕ್ರಮವಾಗಿ 4,5,6 ನೇ ಸ್ಥಾನದಲ್ಲಿವೆ.



















