AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿದ್ದೀರಾ? ನರೇಶ್ ಕೊಟ್ಟರು ಉತ್ತರ

Naresh-Pavitra Lokesh: ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾಹವಾಗಿದ್ದಾರೆಯೇ? ನರೇಶ್ ಅವರೇ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿದ್ದೀರಾ? ನರೇಶ್ ಕೊಟ್ಟರು ಉತ್ತರ
ನರೇಶ್-ಪವಿತ್ರಾ
ಮಂಜುನಾಥ ಸಿ.
|

Updated on: May 12, 2023 | 9:00 AM

Share

ತೆಲುಗಿನ ಜನಪ್ರಿಯ ನಟ ನರೇಶ್ (Naresh) ಹಾಗೂ ನಟಿ ಪವಿತ್ರಾ ಲೋಕೇಶ್ (Pavithra Lokesh) ನಟನೆಯ ‘ಮಳ್ಳಿ ಪೆಳ್ಳಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಹುವಾಗಿ ಚರ್ಚೆಯಾಗಿತ್ತು. ಪವಿತ್ರಾ ಅವರೊಟ್ಟಿಗೆ ಆತ್ಮೀಯ ನಂಟು ಹೊಂದಿರುವ ನರೇಶ್ ವಿರುದ್ಧ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಧ್ಯಮಗಳ ಮುಂದೆ ಹಲವು ಆರೋಪಗಳನ್ನು ಮಾಡಿದ್ದರು. ನರೇಶ್ ಒಬ್ಬ ಲಂಪಟ, ಪವಿತ್ರಾ ಲೋಕೇಶ್ ತಮ್ಮ ಸಂಸಾರ ಒಡೆದಿದ್ದಾರೆ ಎಂದೆಲ್ಲ ದೂರಿದ್ದರು. ನರೇಶ್, ಪವಿತ್ರಾ ಸಹ ರಮ್ಯಾರ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದರು.

ರಮ್ಯಾ ರಘುಪತಿ, ತಮ್ಮ ವಿರುದ್ಧ ಆರೋಪಗಳನ್ನು ಮಾಡಿದ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಜೀವನದಲ್ಲಿ ಆದ ಘಟನೆಗಳನ್ನೇ ಮುಖ್ಯವಾಗಿರಿಸಿಕೊಂಡು ಮಳ್ಳಿ ಪೆಳ್ಳಿ ಹೆಸರಿನ ಸಿನಿಮಾ ನಿರ್ಮಿಸಿರುವ ನರೇಶ್, ಸಿನಿಮಾದಲ್ಲಿ ಸ್ವತಃ ನಟಿಸಿದ್ದಾರೆ. ನಾಯಕಿಯಾಗಿ ಪವಿತ್ರಾ ಲೋಕೇಶ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಟ್ರೈಲರ್ ಮೇ 11 ರಂದು ಬಿಡುಗಡೆ ಆಗಿದ್ದು, ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಹಾಗೂ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಮತ್ತೆ ಮಾತನಾಡಿದ್ದಾರೆ ನರೇಶ್.

‘ನೀವು ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿದ್ದೀರಾ?’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ನರೇಶ್, ”ಕೆಲವರು ತಾಳಿ ಕಟ್ಟಿ ಮದುವೆ ಮಾಡಿಕೊಳ್ಳುತ್ತಾರೆ. ಕೆಲವರು ಉಂಗುರ ಬದಲಾಯಿಸಿಕೊಂಡು ಮದುವೆ ಎನ್ನುತ್ತಾರೆ. ಇನ್ನು ಕೆಲವರು ಧರ್ಮ ಬದಲಾಯಿಸಿಕೊಂಡು ಮದುವೆಯಾಗುತ್ತಾರೆ. ನನ್ನ ದೃಷ್ಟಿಯಲ್ಲಿ ಮದುವೆ ಎನ್ನುವುದು ಎರಡು ಮನಸ್ಸುಗಳ ಮಿಲನ. ನಮ್ಮಿಬ್ಬರ ಮನಸ್ಸು ಸಂದಿಸಿವೆ. ನಮ್ಮದು ಹೃದಯಗಳ ಒಕ್ಕೂಟ’ ಎಂದಿದ್ದಾರೆ. ಆ ಮೂಲಕ ಶಾಸ್ತ್ರಬದ್ಧವಾಗಿ ಅಥವಾ ಕಾನೂನು ಬದ್ಧವಾಗಿ ತಾವು ಮದುವೆಯಾಗಿಲ್ಲ ಆದರೆ ಮಾನಸಿಕವಾಗಿ ಮದುವೆಯಾಗಿದ್ದೇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ:Matte Maduve: ಮೇ 26ರಂದು ‘ಮತ್ತೆ ಮದುವೆ’ ಆಗಲಿದ್ದಾರೆ ನರೇಶ್​-ಪವಿತ್ರಾ ಲೋಕೇಶ್

ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಧಿಕೃತವಾಗಿ ಮದುವೆ ಆಗಲು ಪ್ರಸ್ತುತ ಸಾಧ್ಯವಿಲ್ಲ. ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ಇನ್ನೂ ವಿಚ್ಛೇದನ ನೀಡಿಲ್ಲ ಹೀಗಾಗಿ ಈಗಲೇ ಪವಿತ್ರಾರನ್ನು ಮದುವೆ ಆಗಲು ನರೇಶ್​ಗೆ ಕಾನೂನು ತೊಡಕಿದೆ. ಹಾಗಾಗಿ ನರೇಶ್, ತಮ್ಮ ಹಾಗೂ ಪವಿತ್ರಾರ ‘ಮಾನಸಿಕ ಮದುವೆ’ಯನ್ನು ನಿಜ ಮದುವೆಯಾಗಿ ಪರಿವರ್ತಿಸಿಕೊಂಡಿಲ್ಲ.

ಕೆಲ ತಿಂಗಳ ಹಿಂದೆ ನರೇಶ್, ತಮ್ಮ ಹಾಗೂ ಪವಿತ್ರಾ ಲೋಕೇಶ್​ರ ಮದುವೆ ಶಾಸ್ತ್ರದ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಮನೆಯೊಂದರಲ್ಲಿ ನರೇಶ್ ಹಾಗೂ ಪವಿತ್ರಾ ವಧು-ವರರ ಕಾಸ್ಟ್ಯೂಮ್​ನಲ್ಲಿ ಸಪ್ತಪದಿ ತುಳಿಯುತ್ತಿರುವ ವಿಡಿಯೋ ಅದಾಗಿತ್ತು. ಆ ವಿಡಿಯೋ ಚರ್ಚೆಗೆ ಕಾರಣವಾಗಿತ್ತು. ನರೇಶ್ ಹಾಗೂ ಪವಿತ್ರಾ ನಿಜಕ್ಕೂ ಮದುವೆಯಾದರೆ? ರಮ್ಯಾ ರಘುಪತಿಗೆ ವಿಚ್ಛೇದನ ನೀಡುವ ಮುನ್ನವೇ ಮದುವೆ ಆಗಲು ಹೇಗೆ ಸಾಧ್ಯ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿದ್ದವು ಆದರೆ ಆ ಬಳಿಕ ಅದು ಸಿನಿಮಾಕ್ಕಾಗಿ ಆಗಿರುವ ಮದುವೆ ಎಂಬುದು ತಿಳಿದುಬಂತು.

ಇದೀಗ ತಮ್ಮ ಹಾಗೂ ಪವಿತ್ರಾರ ಸಂಬಂಧ, ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಆರೋಪಗಳು, ನಡೆದ ಘಟನೆಗಳನ್ನೇ ಆದರಿಸಿ ಮಳ್ಳಿ ಪಳ್ಳಿ ಎಂಬ ಸಿನಿಮಾವನ್ನು ನರೇಶ್ ನಿರ್ಮಿಸಿದ್ದಾರೆ. ಸಿನಿಮಾಕ್ಕೆ ಎಂಎಸ್ ರಾಜು ಆಕ್ಷನ್-ಕಟ್ ಹೇಳಿದ್ದಾರೆ. ಸಿನಿಮಾದ ಟ್ರೈಲರ್ ಹಾಗೂ ಟೀಸರ್ ಬಿಡುಗಡೆ ಆಗಿದ್ದು, ಸಿನಿಮಾ ಮೇ 26 ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ