ಹೇಗಿತ್ತು ಅಂದಿನ ಮಲ್ಲೇಶ್ವರ? ‘ವೀಕೆಂಡ್ ವಿತ್ ರಮೇಶ್​’ ಕಾರ್ಯಕ್ರಮದಲ್ಲಿ ಎಳೆಎಳೆಯಾಗಿ ವಿವರಿಸಿದ ನಾ. ಸೋಮೇಶ್ವರ

N Someswara: ವೈದ್ಯರಾಗಿ, ಲೇಖಕರಾಗಿ, ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕರಾಗಿ ಗಮನ ಸೆಳೆದಿದ್ದಾರೆ. ಅವರು ಈ ಬಾರಿಯ ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್​ಗೆ ಆಗಮಿಸಿದ್ದಾರೆ. ಅವರು ತಮ್ಮ ಬಾಲ್ಯದ ಅನುಭವ ಹಂಚಿಕೊಂಡಿದ್ದಾರೆ.

ಹೇಗಿತ್ತು ಅಂದಿನ ಮಲ್ಲೇಶ್ವರ? ‘ವೀಕೆಂಡ್ ವಿತ್ ರಮೇಶ್​’ ಕಾರ್ಯಕ್ರಮದಲ್ಲಿ ಎಳೆಎಳೆಯಾಗಿ ವಿವರಿಸಿದ ನಾ. ಸೋಮೇಶ್ವರ
ರಮೇಶ್​-ಸೋಮೇಶ್ವರ
Follow us
ರಾಜೇಶ್ ದುಗ್ಗುಮನೆ
|

Updated on: May 12, 2023 | 10:31 AM

ಬೆಂಗಳೂರು ಇಂದು ಮಹಾನಗರ ಆಗಿ ಬೆಳೆದಿದೆ. ಎಲ್ಲಿ ನೋಡಿದರೂ ಟ್ರಾಫಿಕ್​. ಕೆಂಪು ದೀಪ ಹಸಿರಾಗಲಿ ಎಂದು ಕಾಯುವ ವಾಹನ ಸವಾರರು. ಧೂಳು, ಕಲುಷಿತ ವಾಯು ಸರ್ವೇ ಸಾಮಾನ್ಯ ಎಂಬಂತಾಗಿದೆ. ಅಲ್ಲಲ್ಲಿ ಮರಗಳು ಇವೆಯಾದರೂ ಬೆಂಗಳೂರಿನ ಕಲುಷಿತ ಗಾಳಿಯನ್ನು ಸಂಪೂರ್ಣವಾಗಿ ಶುದ್ಧವಾಗಿಸಲು ಅವುಗಳಿಂದ ಸಾಧ್ಯವಿಲ್ಲ. ಆದರೆ, ಕೆಲವು ದಶಕಗಳ ಹಿಂದೆ ಬೆಂಗಳೂರು ಈ ರೀತಿ ಇರಲಿಲ್ಲ. ಅದೊಂದು ಹಳ್ಳಿಯಾಗಿತ್ತು. ಈ ಬಗ್ಗೆ ನಾ ಸೋಮೇಶ್ವರ (N. Someswara) ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರಲ್ಲಿ ಅವರು ಈ ವಾರದ ಅತಿಥಿ ಆಗಿದ್ದಾರೆ. ಅವರು ಸಾಧಕರ ಸೀಟ್​ನಲ್ಲಿ ಕುಳಿತಿದ್ದಾರೆ. ವೈದ್ಯರಾಗಿ, ಲೇಖಕರಾಗಿ, ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕರಾಗಿ ಗಮನ ಸೆಳೆದಿದ್ದಾರೆ. ಅವರು ಈ ಬಾರಿಯ ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್​ಗೆ ಆಗಮಿಸಿದ್ದಾರೆ. ಅವರು ತಮ್ಮ ಬಾಲ್ಯದ ಅನುಭವ ಹಂಚಿಕೊಂಡಿದ್ದಾರೆ.

ನಾ. ಸೋಮೇಶ್ವರ ಅವರು 1955ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿಸಿದರು. ಅಂದು ಬೆಂಗಳೂರು ಯಾವ ರೀತಿಯಲ್ಲಿತ್ತು ಎಂಬುದನ್ನು ‘ವೀಕೆಂಡ್ ವಿತ್ ರಮೇಶ್​’ ಎಪಿಸೋಡ್​ನಲ್ಲಿ ಅವರು ವಿವರಿಸಿದ್ದಾರೆ. ‘ಮಲ್ಲೇಶ್ವರದಲ್ಲಿ ಪ್ರಶಾಂತ ರಸ್ತೆ ಇತ್ತು. ಮಳೆ ಬಂತು ಎಂದರೆ ಕಾಗೆ ಬಂಗಾರ ಹುಡುಕಿಕೊಂಡು ಹೋಗುತ್ತಿದ್ವಿ. ಈಡುಗಾಯಿ ಒಡೆಯೋದನ್ನು ಕಾಯುತ್ತಿದ್ದೆವು. ಮೀನು ಎಂದು ಹಿಡಿದುಕೊಂಡು ಬರುತ್ತಿದೆ. ಮರುದಿನ ಅದು ಕಪ್ಪೆ ಆಗಿರುತ್ತಿತ್ತು. ಅನೇಕ ನೆನಪುಗಳ ಸಾಲು ಬರ್ತಿದೆ’ ಎಂದು ನಾ. ಸೋಮೇಶ್ವರ ಅವರು ವಿವರಿಸಿದ್ದಾರೆ.

View this post on Instagram

A post shared by Zee Kannada (@zeekannada)

‘ವಿಶಾಲ ರಸ್ತೆ, ಪ್ರಶಾಂತ ವಾತಾವರಣದ ಆಗಿನ‌ ಮಲ್ಲೇಶ್ವರದ ಚಿತ್ರಣ ಕಟ್ಟಿಕೊಟ್ಟ ನಾ.ಸೋಮೇಶ್ವರ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಭಾನುವಾರ ರಾತ್ರಿ 9ಕ್ಕೆ’ ಎಂದು ಈ ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ.

ಇದನ್ನೂ ಓದಿ: Weekend With Ramesh: ವೀಕೆಂಡ್ ವಿತ್ ರಮೇಶ್​ಗೆ ಬಂದ ಹೊಸ ಸಾಧಕ, ಯಾರು ಗೆಸ್ ಮಾಡಬಲ್ಲಿರಾ?

ಈ ವಾರ ಸೋಮೇಶ್ವರ ಮಾತ್ರವಲ್ಲದೆ ಡ್ಯಾನ್ಸ್ ಕೊರಿಯೋಗ್ರಫರ್ ಆಗಿರುವ ಚಿನ್ನಿ ಪ್ರಕಾಶ್ ಮಾಸ್ಟರ್ ಕೂಡ ಬರುತ್ತಿದ್ದಾರೆ. ಇಬ್ಬರನ್ನೂ ಈ ವಾರದ ಎಪಿಸೋಡ್​ನಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಒಳ್ಳೊಳ್ಳೆಯ ಸಾಧಕರನ್ನು ಕರೆಸುತ್ತಿದ್ದೀರಾ ಎನ್ನುವ ಮಾತು ಕೇಳಿ ಬಂದಿದೆ. ಮೊದಲ ಎಪಿಸೋಡ್​ಗೆ ರಮ್ಯಾ ಆಗಮಿಸಿದ್ದರು. ಅವರು ಇಂಗ್ಲಿಷ್​ನಲ್ಲಿ ಮಾತನಾಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ, ಈಗ ಶೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ