Weekend With Ramesh: ವೀಕೆಂಡ್ ವಿತ್ ರಮೇಶ್​ಗೆ ಬಂದ ಹೊಸ ಸಾಧಕ, ಯಾರು ಗೆಸ್ ಮಾಡಬಲ್ಲಿರಾ?

Weekend With Ramesh: ವೀಕೆಂಡ್ ವಿತ್ ರಮೇಶ್​ ಶೋನ ಈ ವಾರದ ಅತಿಥಿ ಯಾರು ಗುರುತಿಸಬಲ್ಲಿರಾ? ಇವರು ಕನ್ನಡ ಚಿತ್ರರಂಗದ ಜನಪ್ರಿಯ ಹೀರೋ.

Weekend With Ramesh: ವೀಕೆಂಡ್ ವಿತ್ ರಮೇಶ್​ಗೆ ಬಂದ ಹೊಸ ಸಾಧಕ, ಯಾರು ಗೆಸ್ ಮಾಡಬಲ್ಲಿರಾ?
ನೆನಪಿರಲಿ ಪ್ರೇಮ್
Follow us
ಮಂಜುನಾಥ ಸಿ.
|

Updated on: May 02, 2023 | 5:42 PM

ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಈ ವರೆಗೆ ಹಲವು ಸಾಧಕರು ಕೆಂಪು ಕುರ್ಚಿ ಏರಿ ತಮ್ಮ ಜೀವನದ ಮಹತ್ವದ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ಪ್ರತಿ ವಾರವು ಯಾರಾದರೂ ಒಬ್ಬರು ಅಥವಾ ಇಬ್ಬರು ಅತಿಥಿಗಳನ್ನು ಅಥವಾ ಸಾಧಕರನ್ನು ಗುರುತಿಸಿ ಕರೆತರುತ್ತಿದ್ದಾರೆ ವೀಕೆಂಡ್ ವಿತ್ ರಮೇಶ್ ತಂಡ. ಅಂತೆಯೇ ಈ ಬಾರಿಯೂ ಹೊಸ ಸಾಧಕರು ಕುರ್ಚಿ ಅಲಂಕರಿಸಲಿದ್ದು, ಈ ಸಾಧಕರು ಯಾರು ಗುರುತಿಸಬಲ್ಲಿರಾ?

ಈ ವಾರಾಂತ್ಯಕ್ಕೆ ಸಾಧಕರ ಕುರ್ಚಿ ಏರಲಿರುವ ಸಾಧಕನ ಚಿತ್ರವನ್ನು ಮಸಕು ಮಾಡಿ ಜೀ ಕನ್ನಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಾರದ ಸಾಧಕನನ್ನು ಗುರುತಿಸಿ ಎಂದು ಪ್ರೇಕ್ಷಕರಿಗೆ ಸವಾಲೆಸೆದಿದೆ. ಬಹುತೇಕ ನೆಟ್ಟಿಗರು ಸರಿಯಾಗಿಯೇ ಗುರುತಿಸಿದ್ದಾರೆ. ಈ ವಾರ ಸಾಧಕರ ಕುರ್ಚಿ ಏರುತ್ತಿರುವುದು ಕನ್ನಡ ಚಿತ್ರರಂಗದ ಜನಪ್ರಿಯ ನಟ ನೆನಪಿರಲಿ ಪ್ರೇಮ್ (Prem).

2004 ರಿಂದಲೂ ಚಿತ್ರರಂಗದಲ್ಲಿರುವ ಪ್ರೇಮ್ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಕೇವಲ ಆಸಕ್ತಿ, ಶ್ರಮ ಹಾಗೂ ಪ್ರತಿಭೆಯಿಂದ ಚಿತ್ರರಂಗಕ್ಕೆ ಕಾಲಿಟ್ಟವರು. ನಟಿಸಿದ ಎರಡನೇ ಸಿನಿಮಾ ಭಾರಿ ದೊಡ್ಡ ಹಿಟ್ ಆಗುವ ಮೂಲಕ ಆರಂಭದಲ್ಲಿ ಚಿತ್ರರಂಗದಲ್ಲಿ ದೊಡ್ಡ ಯಶಸ್ಸನ್ನು ಗಳಿಸಿಕೊಂಡ ಪ್ರೇಮ್ ಆ ನಂತರ ಸತತ ಸೋಲುಗಳನ್ನು ಸಹ ಅನುಭವಿಸಿದರು. ಹಲವು ಏರಿಳಿತಗಳಿಂದ ಕೂಡಿದ ನೆನಪಿರಲಿ ಪ್ರೇಮ್​ರ ಜೀವನ ಜರ್ನಿ ಈ ವಾರಾಂತ್ಯಕ್ಕೆ ವೀಕೆಂಡ್ ವಿತ್ ರಮೇಶ್​ನಲ್ಲಿ ಅನಾವರಣವಾಗಲಿದೆ.

ಇದನ್ನೂ ಓದಿ:‘ಭಗ್ನಪ್ರೇಮ ಒಂದು ಸಲ ಆದ್ರೆ ಹೇಳಬಹುದು’; ‘ವೀಕೆಂಡ್ ವಿತ್ ರಮೇಶ್​’ನಲ್ಲಿ ಸಿಹಿ-ಕಹಿ ಚಂದ್ರು ಬ್ರೇಕಪ್ ಸ್ಟೋರಿ

ನೆನಪಿರಲಿ ಪ್ರೇಮ್, ಚಿತ್ರರಂಗಕ್ಕೆ ಬರುವ ಹಾದಿಯಲ್ಲಿ ಅನುಭವಿಸಿದ ಕಷ್ಟಗಳು, ಸಿಕ್ಕ ಗೆಳೆಯರು, ಬೆಂಬಲಿಸಿದವರು, ಕೆಳಕ್ಕೆ ನೂಕಿದವರು, ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಆದ ಬದಲಾವಣೆಗಳು, ನಟನಾ ವೃತ್ತಿಯಲ್ಲಾದ ಏರಿಳಿತಗಳು ಅದಕ್ಕೆ ಕಾರಣಗಳು. ಕುಟುಂಬ, ಈಗ ಮಗಳು ಚಿತ್ರರಂಗ ಪ್ರವೇಶಿಸುತ್ತಿರುವುದು ಇನ್ನೂ ಹಲವು ವಿಷಯಗಳ ಬಗ್ಗೆ ಪ್ರೇಮ್ ಮಾತನಾಡಲಿದ್ದಾರೆ. ದುನಿಯಾ ವಿಜಯ್, ಗಣೇಶ್, ನಂದ ಕಿಶೋರ್ ಇನ್ನೂ ಪ್ರೇಮ್​ರ ಗೆಳೆಯರು ವಿಡಿಯೋ ಮೂಲಕ ಮಾತನಾಡಲಿದ್ದಾರೆ.

ವೀಕೆಂಡ್ ವಿತ್ ರಮೇಶ್​ನಲ್ಲಿ ಈವರೆಗೆ ರಮ್ಯಾ, ಪ್ರಭುದೇವ, ವೈದ್ಯ ಮಂಜುನಾಥ್, ಡಾಲಿ ಧನಂಜಯ್, ದತ್ತಣ್ಣ, ಮಂಡ್ಯ ರಮೇಶ್, ಸಿಹಿ-ಕಹಿ ಚಂದ್ರು, ಗುರುರಾಜ ಕರಜಗಿ, ಅವಿನಾಶ್ ಅವರುಗಳು ಆಗಮಿಸಿ ಸಾಧಕರ ಕುರ್ಚಿಯ ಮೇಲೆ ಕುಳಿತಿದ್ದಾರೆ. ಇದೀಗ ನೆನಪಿರಲಿ ಪ್ರೇಮ್ ಮೊದಲ ಬಾರಿಗೆ ಸಾಧಕರ ಕುರ್ಚಿ ಏರಲು ತಯಾರಾಗಿದ್ದು, ಈ ವಾರ ಇವರೊಬ್ಬರೇ ಅತಿಥಿಯಾಗಿರಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ