AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಗ್ನಪ್ರೇಮ ಒಂದು ಸಲ ಆದ್ರೆ ಹೇಳಬಹುದು’; ‘ವೀಕೆಂಡ್ ವಿತ್ ರಮೇಶ್​’ನಲ್ಲಿ ಸಿಹಿ-ಕಹಿ ಚಂದ್ರು ಬ್ರೇಕಪ್ ಸ್ಟೋರಿ

ವೀಕೆಂಡ್ ವಿತ್ ರಮೇಶ್ ಎಪಿಸೋಡ್​ನಲ್ಲಿ ಹಳೆಯ ಘಟನೆ ನೆನಪಿಸಿಕೊಳ್ಳಲಾಗುತ್ತದೆ. ಅದೇ ರೀತಿ ಸಿಹಿ-ಕಹಿ ಚಂದ್ರು ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಾಗಿದೆ.

‘ಭಗ್ನಪ್ರೇಮ ಒಂದು ಸಲ ಆದ್ರೆ ಹೇಳಬಹುದು’; ‘ವೀಕೆಂಡ್ ವಿತ್ ರಮೇಶ್​’ನಲ್ಲಿ ಸಿಹಿ-ಕಹಿ ಚಂದ್ರು ಬ್ರೇಕಪ್ ಸ್ಟೋರಿ
ಸಿಹಿ-ಕಹಿ ಚಂದ್ರು
ರಾಜೇಶ್ ದುಗ್ಗುಮನೆ
|

Updated on: May 01, 2023 | 12:01 PM

Share

ಮುಖ್ಯಾಂಶಗಳು

  • ವೀಕೆಂಡ್ ವಿತ್ ರಮೇಶ್ ಎಪಿಸೋಡ್​ನಲ್ಲಿ ಹಳೆಯ ಘಟನೆ ನೆನಪಿಸಿಕೊಳ್ಳಲಾಗುತ್ತದೆ
  • ಕಾಲೇಜು ದಿನದ ಗೆಳೆಯರು ಬಂದು ಹಳೆ ಸ್ಟೋರಿಯನ್ನು ಹೇಳುತ್ತಾರೆ
  • ಅದೇ ರೀತಿ ಸಿಹಿ-ಕಹಿ ಚಂದ್ರು ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಾಗಿದೆ

ಸಿಹಿ-ಕಹಿ ಚಂದ್ರು ಅವರು ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರ (Weekend With Ramesh) ಅತಿಥಿಯಾಗಿ ಬಂದಿದ್ದಾರೆ. ಕಳೆದ ವೀಕೆಂಡ್​ನಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ. ಇಡೀ ಎಪಿಸೋಡ್ ಸಖತ್ ಫನ್ ಆಗಿತ್ತು. ಸಿಹಿ-ಕಹಿ ಚಂದ್ರು (Sihi Kahi Chandru) ಅವರು ಸದಾ ಹಸನ್ಮುಖಿ. ತೆರೆಮೇಲೆ ಹಾಗೂ ತೆರೆಹಿಂದೆ ಅವರು ಎಲ್ಲರನ್ನೂ ನಗಿಸುತ್ತಾರೆ. ವಿವಿಧ ತಿನಿಸು ತಿನ್ನೋದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅವರು ಕಾಲೇಜು ದಿನಗಳಲ್ಲಿ ಭಗ್ನಪ್ರೇಮಿ ಆಗಿದ್ದರಂತೆ! ಈ ವಿಚಾರವನ್ನು ಅವರ ಗ್ಯಾಂಗ್ ಸದಸ್ಯರು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಸಿಹಿ-ಕಹಿ ಚಂದ್ರು ಮಾತನಾಡಿದ್ದಾರೆ.

ವೀಕೆಂಡ್ ವಿತ್ ರಮೇಶ್ ಎಪಿಸೋಡ್​ನಲ್ಲಿ ಹಳೆಯ ಘಟನೆ ನೆನಪಿಸಿಕೊಳ್ಳಲಾಗುತ್ತದೆ. ಕಾಲೇಜು ದಿನದ ಗೆಳೆಯರು ಬಂದು ಹಳೆ ಸ್ಟೋರಿಯನ್ನು ಹೇಳುತ್ತಾರೆ. ಅದೇ ರೀತಿ ಸಿಹಿ-ಕಹಿ ಚಂದ್ರು ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಾಗಿದೆ. ‘ಕಾಲೇಜು ದಿನಗಳಲ್ಲಿ ಭಗ್ನಪ್ರೇಮಿಯಾಗಿ ಸಕ್ಕರೆ ಬೈಲಿನ ಕಲ್ಲಿನ ಬಂಡೆಮೇಲೆ ಬಿಯರ್ ಬಾಟಲಿ ಖಾಲಿ ಮಾಡಿದ್ದೆ’ ಎಂದು ಸಿಹಿ-ಕಹಿ ಚಂದ್ರು ಬಗ್ಗೆ ಗೆಳೆಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಾಧಕರ ಕುರ್ಚಿಯಲ್ಲಿ ಸಿಹಿ-ಕಹಿ ಚಂದ್ರು, ಎಪಿಸೋಡ್​ ಪೂರಾ ಸಿಹಿಯೇ

ಸಿಹಿ-ಕಹಿ ಚಂದ್ರು ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಅವರು ಈ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದಾರೆ. ‘ಭಗ್ನಪ್ರೇಮಿ ಒಂದು ಸಲ ಆದ್ರೆ ಹೇಳಬಹುದು. ಸಾಕಷ್ಟು ಬಾರಿ ಆಗಿದ್ದೇನೆ. ಪ್ರೇಮ ಮಾಡಿದ್ರೆ ಆಗಲ್ಲ ಅಂದ್ಕೊಂಡೆ. ಪ್ರೇಮ ಭಗ್ನ ಆದ್ರೆ ಕುಡಿಯಬಾರದು ಎಂದು ನಿರ್ಧರಿಸಿದೆ’ ಎಂದರು ಸಿಹಿ-ಕಹಿ ಚಂದ್ರು. ‘ಹಾಗಿದ್ರೆ ಒಂದು ಬಿಯರ್ ಬಾಟಲ್ ಅಲ್ಲ, ಕ್ರೇಟ್ ಖಾಲಿ ಆಗಿರಬೇಕು’ ಎಂದು ಕಾಲೆಳೆದರು ರಮೇಶ್ ಅರವಿಂದ್.

ಇದನ್ನೂ ಓದಿ:ಎಲ್ಲರಿಗೂ ಮನೆ, ಶಂಕರ್​ನಾಗ್ ಇದ್ದಿದ್ದರೆ ಗುಡಿಸಲುಗಳೇ ಇರುತ್ತಿರಲಿಲ್ಲ, ಶಂಕರ್​ನಾಗ್ ಐಡಿಯಾ ಬಿಚ್ಚಿಟ್ಟ ಸಿಹಿ-ಕಹಿ ಚಂದ್ರು 

ದೂರದರ್ಶನದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಿಂದಲೇ ಪ್ರಸಾರವಾದ ಕನ್ನಡದ ಧಾರಾವಾಹಿಯಲ್ಲಿ ಸಿಹಿ-ಕಹಿಯಲ್ಲಿ ಚಂದ್ರು ನಟಿಸಿದರು. ಅಲ್ಲೇ ಗೀತಾ ಅವರ ಪರಿಚಯವಾಗಿ ಅದು ಪ್ರೇಮವಾಗಿ ಮದುವೆಯೂ ಆಯಿತು. ಅದಾದ ಬಳಿಕ ಒಂದರ ಹಿಂದೊಂದು ಸಿನಿಮಾಗಳು ಸಿಗಲು ಆರಂಭವಾದವು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More