ಎಲ್ಲರಿಗೂ ಮನೆ, ಶಂಕರ್​ನಾಗ್ ಇದ್ದಿದ್ದರೆ ಗುಡಿಸಲುಗಳೇ ಇರುತ್ತಿರಲಿಲ್ಲ, ಶಂಕರ್​ನಾಗ್ ಐಡಿಯಾ ಬಿಚ್ಚಿಟ್ಟ ಸಿಹಿ-ಕಹಿ ಚಂದ್ರು

Weekend With Ramesh: ರಾಜ್ಯದ ಬಡಜನರಿಗೆ ಮನೆಕಟ್ಟಿಸಿಕೊಡುವ ಶಂಕರ್ ನಾಗ್ ಅವರ ಆ ಅದ್ಭುತ ಐಡಿಯಾದ ಬಗ್ಗೆ ವೀಕೆಂಡ್ ವಿತ್ ರಮೇಶ್​ನಲ್ಲಿ ಸಿಹಿ-ಕಹಿ ಚಂದ್ರು ಮಾತನಾಡಿದರು. ಶಂಕರ್​ನಾಗ್ ಇದ್ದಿದ್ದರೆ ರಾಜ್ಯದಲ್ಲಿ ಗುಡಿಸಲುಗಳೇ ಇರುತ್ತಿರಲಿಲ್ಲವೇನೋ...

ಎಲ್ಲರಿಗೂ ಮನೆ, ಶಂಕರ್​ನಾಗ್ ಇದ್ದಿದ್ದರೆ ಗುಡಿಸಲುಗಳೇ ಇರುತ್ತಿರಲಿಲ್ಲ, ಶಂಕರ್​ನಾಗ್ ಐಡಿಯಾ ಬಿಚ್ಚಿಟ್ಟ ಸಿಹಿ-ಕಹಿ ಚಂದ್ರು
ಶಂಕರ್ ನಾಗ್-ಸಿಹಿ ಕಹಿ ಚಂದ್ರು
Follow us
ಮಂಜುನಾಥ ಸಿ.
|

Updated on: Apr 29, 2023 | 10:57 PM

ವೀಕೆಂಡ್ ವಿತ್ ರಮೇಶ್​ (Weekend With Ramesh) ಸೀಸನ್ ಐದರ ಈ ವಾರಾಂತ್ಯದ ಮೊದಲ ಅತಿಥಿಯಾಗಿ ನಟ, ನಿರ್ಮಾಪಕ, ಆರ್​ಜೆ, ಆಹಾರ ಪ್ರೇಮಿ ಸಿಹಿ-ಕಹಿ ಚಂದ್ರು (Sihi Kahi Chandru) ಆಗಮಿಸಿದ್ದರು. ಹಾಸ್ಯಮಯ ವ್ಯಕ್ತಿತ್ವದ ಸಿಹಿ-ಕಹಿ ಚಂದ್ರು ತಮ್ಮ ಜೀವನದ ಹಲವು ಘಟನೆಗಳನ್ನು ಮೆಲುಕು ಹಾಕಿದರು, ಜೀವನದಲ್ಲಿ ತಮಗೆ ಸಿಕ್ಕ ಗುರುಗಳು, ಸ್ನೇಹಿತರುಗಳನ್ನು ನೆನಪಿಸಿಕೊಂಡು ಅವರಿಗೆ ಧನ್ಯವಾದ ಸಲ್ಲಿಸಿದರು. ಅವರಲ್ಲಿ ಒಬ್ಬರು ನಟ, ನಿರ್ದೇಶಕ ಮಹಾನ್ ಚೇತನ್ ಶಂಕರ್​ನಾಗ್ (Shankar Nag) ಒಬ್ಬರು. ಕರ್ನಾಟಕದಲ್ಲಿನ ಸ್ಲಂಗಳನ್ನು, ಗುಡಿಸಲುಗಳನ್ನು ನಿರ್ಮೂಲನೆ ಮಾಡಲು ಶಂಕರ್​ನಾಗ್ ಮಾಡಿದ್ದ ಅದ್ಭುತ ಐಡಿಯಾವನ್ನು ಸಿಹಿ-ಕಹಿ ಚಂದ್ರು ವೀಕೆಂಡ್​ ವಿತ್ ರಮೇಶ್​ನಲ್ಲಿ ಬಿಚ್ಚಿಟ್ಟರು.

ಶಂಕರ್​ನಾಗ್ ಪರಿಚಯ ತಮಗೆ ಆಗಿದ್ದು ಹೇಗೆ ಎಂಬುದರಿಂದ ಮಾತು ಆರಂಭಿಸಿದ ಸಿಹಿ-ಕಹಿ ಚಂದ್ರು, ”ನಾನು ಕಾಲೇಜು ಪ್ರೆಸಿಡೆಂಟ್ ಆಗಿದ್ದಾಗ ಶಂಕರ್​ನಾಗ್ ಅವರನ್ನು ಕಾಲೇಜಿಗೆ ಅತಿಥಿಯಾಗಿ ಆಹ್ವಾನಿಸಲು ಹೋಗಿದ್ದೆ ಆಗ ಅವರು ಪುಸ್ತಕವೊಂದನ್ನು ಕೊಟ್ಟು ಓದಿಕೊಂಡು ಬಂದು ಚರ್ಚಿಸುವಂತೆ ಹೇಳಿದರು. ನನಗೆ ಅರ್ಥವಾಗದಾಗ ಅವರೇ ಅದನ್ನು ಹೇಗೆ ಓದಬೇಕು ಎಂದು ಹೇಳಿಕೊಟ್ಟರು, ಅದಾದ ಮೇಲೆ ಓದಿ ಅವರೊಟ್ಟಿಗೆ ಚರ್ಚಿಸಿದೆ, ಆಗ ಅವರು ನಮ್ಮ ಕಾಲೇಜಿಗೆ ಬರಲು ಒಪ್ಪಿಕೊಂಡು ಅತಿಥಿಯಾಗಿ ಬಂದರು” ಎಂದು ಶಂಕರ್​ನಾಗ್ ಅವರೊಟ್ಟಿಗಿನ ಮೊದಲ ಭೇಟಿಯನ್ನು ಸ್ಮರಿಸಿದರು.

ಅದಾದ ಬಳಿಕ ತಮ್ಮ ಗುರುಗಳ ನೆರವಿನಿಂದ ನೋಡಿಸ್ವಾಮಿ ನಾವಿರೋದೆ ಹೀಗೆ ನಾಟಕದ ರಿಹರ್ಸಲ್​ಗೆ ಹೋಗುತ್ತಿದ್ದುದಾಗಿಯೂ ಆ ಬಳಿಕ ಅಲ್ಲಿ ಶಂಕರ್​ ನಾಗ್ ಅವರು ತಮ್ಮನ್ನು ಗುರುತಿಸಿ ಮಾಲ್ಗುಡಿ ಡೇಸ್​ ತಂಡಕ್ಕೆ ಸೇರಿಸಿಕೊಂಡ ವಿಷಯ ಹೇಳಿದರು. ಮಾಲ್ಗುಡಿ ಡೇಸ್​ನಲ್ಲಿ ಹಲವು ನಟರಿಗೆ ಧ್ವನಿ ನೀಡುತ್ತಿದ್ದರಂತೆ ಚಂದ್ರು, ಶಂಕರ್​ನಾಗ್ ಅವರು ಹೇಗೆ ಪಟ-ಪಟನೆ ಕೆಲಸ ಮಾಡುತ್ತಿದ್ದರು ಎಂಬುದನ್ನು ನೆನಪು ಮಾಡಿಕೊಂಡರು ಚಂದ್ರು.

ಅದಾದ ಬಳಿಕ ಅವರೊಟ್ಟಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ದೊರೆಯಿತು. ಒಮ್ಮೆ ಅವರೊಟ್ಟಿಗೆ ನರಸಿಂಹ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದೆ. ಇಬ್ಬರಿಗೂ ಸ್ವಲ್ಪ ಬಿಡುವಿತ್ತು ಕೂಡಲೇ ಬಾರೋ ಹೊಸ ಮನೆ ಕಟ್ಟಿಸಿದ್ದೀನಿ ನಿನಗೆ ತೋರಿಸುತ್ತೀನಿ ಎಂದು ಅವರ ಮೆಟೊಡೋರ್​ನಲ್ಲಿ ಕೂಡಿಸಿಕೊಂಡು ಕರೆದುಕೊಂಡು ಹೋದರು. ಅದಾಗಲೇ ದೊಡ್ಡ ನಟರಾಗಿದ್ದ ಅವರು ಯಾವುದೋ ದೊಡ್ಡ ಮನೆ ಕಟ್ಟಿದ್ದಾರೆ ಎಂದುಕೊಂಡು ಹೋಗಿ ನೋಡಿದರೆ ಅಲ್ಲಿ ಸಣ್ಣ ಮನೆ ಇತ್ತು. ಒಂದು ಕೋಣೆಯ ಸರಳವಾದ ಮನೆ ನನಗೆ ಆಶ್ಚರ್ಯವಾಯಿತು ಎಂದು ನೆನಪು ಮಾಡಿಕೊಂಡರು.

ಮುಂದುವರೆದು, ”ಈ ಮನೆಯನ್ನು ಬರೀ ಎರಡು ದಿನದಲ್ಲಿ ಕಟ್ಟಿದ್ದೀವಿ, ರೆಡಿಮೇಡ್ ಬ್ಲಾಕ್ಸ್​ಗಳನ್ನು ಬಳಸಿ ಕಟ್ಟಿರುವ ಮನೆ ಇದು. ಬ್ಲಾಕ್​ಗಳನ್ನು ಇಟ್ಟು ರೂಫಿಂಗ್, ಫ್ಲೋರಿಂಗ್ ಹಾಕಿದರೆ ಮುಗಿಯಿತು. ಇದು ಜರ್ಮಿಯ ತಂತ್ರಜ್ಞಾನ. ಇದನ್ನು ಕಟ್ಟಲು ಖರ್ಚಾಗಿರುವುದು ಹದಿನೈದು ಸಾವಿರ ರೂಪಾಯಿ ಅಷ್ಟೆ. ಇಂಥಹಾ ಸರಳ ಮನೆಯನ್ನು ರಾಜ್ಯದ ಎಲ್ಲಕಡೆ ಕಟ್ಟಿಸಬೇಕು ಅಂದುಕೊಂಡಿದ್ದೇನೆ. ಈ ತಂತ್ರಜ್ಞಾನ ಬಳಸಿ ಮನೆ ಕಟ್ಟಿಸಿದರೆ ರಾಜ್ಯದಲ್ಲಿರುವ ಸ್ಲಂಗಳೆಲ್ಲ ನಿರ್ಮೂಲನೆ ಆಗುತ್ತವೆ, ಗುಡಿಸಲು ವಾಸ ಎಂಬುದೇ ಇರಲ್ಲ. ಈ ಮನೆ ಕಟ್ಟಿಸಲು ಸರ್ಕಾರದಿಂದ ಹತ್ತುಸಾವಿರ ಸಬ್ಸಿಡಿ ಕೊಡಿಸಲು ಪ್ರಯತ್ನ ಮಾಡುತ್ತಿದ್ದೀನಿ ಎಂದರು ” ಎಂದು ಶಂಕರ್​ನಾಗ್ ಅವರಿಗಿದ್ದ ದೂರದೃಷ್ಟಿ, ಬಡವರ ಪರವಾಗಿ ಕಾಳಜಿ, ತಂತ್ರಜ್ಞಾನ ಬಗೆಗಿನ ಪ್ರೀತಿ, ಕುತೂಹಲಗಳನ್ನು ಒಂದೇ ಉದಾಹರಣೆ ಮೂಲಕ ಚಂದ್ರು ಸಾದರ ಪಡಿಸಿದರು.

ಅವರು ಅಂದು ಆಡಿದ ಮಾತು ನಾನು ಜೀವನದಲ್ಲಿ ಮರೆಯುವಂತಿಲ್ಲ, ಆಗಿನ ಕಾಲಕ್ಕೆ ಅವರದ್ದು ಅದೆಂಥ ಯೋಚನೆ, ಆ ಯೋಜನೆ ಬಂದಿದ್ದರೆ ನಿಜವಾಗಿಯೂ ನಮ್ಮದು ಗುಡಿಸಲು ಮುಕ್ತ ರಾಜ್ಯವಾಗಿಬಿಟ್ಟಿರುತ್ತಿತ್ತು. ಶಂಕರ್​ನಾಗ್ ಇದ್ದಿದ್ದೇ ಹಾಗೆ ಸದಾ ಸಕ್ರಿಯ, ಕೆಲಸ ಮಾಡುವಾಗಲೂ ಚಟ-ಪಟ ಎನ್ನುತ್ತಾ ಕೆಲಸ ಮಾಡುತ್ತಿದ್ದರು ಎಂದ ಚಂದ್ರು, ಶಂಕರ್​ನಾಗ್ ಅವರು ನನ್ನ ಪಾಲಿನ ಗುರು ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ