ಶಂಕರ್​ನಾಗ್ ನೆನೆದು ಕಣ್ಣೀರು ಹಾಕಿದ ‘ಕೆಜಿಎಫ್’ ಕಲಾವಿದ ಕೃಷ್ಣ ರಾವ್

ಶಂಕರ್​ ನಾಗ್​ ನಿಧನ ಹೊಂದಿ ಕೆಲವು ದಶಕಗಳೇ ಕಳೆದಿವೆ. ಆದಾಗ್ಯೂ, ಕೃಷ್ಣ ರಾವ್ ಅವರ ಮನದಲ್ಲಿ ಇರುವ ನೋವು ಇನ್ನೂ ಕಡಿಮೆ ಆಗಿಲ್ಲ.

TV9kannada Web Team

| Edited By: Rajesh Duggumane

May 29, 2022 | 7:35 AM

ಶಂಕರ್​​ನಾಗ್ ಅವರು (Shankar Nag) ಮಾಡಿದ ಕೆಲಸ ಅನೇಕರಿಗೆ ಮಾದರಿ. ನಿರ್ದೇಶಕನಾಗಿ, ನಟನಾಗಿ ಅವರು ಭೇಷ್ ಎನಿಸಿಕೊಂಡಿದ್ದರು. ಅವರಿಂದ ಸಾಕಷ್ಟು ವಿಚಾರವನ್ನು ಅನೇಕರು ಕಲಿತಿದ್ದಾರೆ. 40ಕ್ಕೂ ಅಧಿಕ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರು ಕೃಷ್ಣ ರಾವ್ (Krishna Rao). ‘ಕೆಜಿಎಫ್’ ಸಿನಿಮಾದಲ್ಲಿ ಅಂಧ ತಾತನ ಪಾತ್ರ ಮಾಡುವ ಮೂಲಕ ಜನಮನ್ನಣೆ ಪಡೆದ ಕೃಷ್ಣ ರಾವ್ ಅವರು ಶಂಕರ್​ನಾಗ್​ ಬಗ್ಗೆ ಮಾತನಾಡಿದ್ದಾರೆ. ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಶಂಕರ್ ನಾಗ್​ ಅವರನ್ನು ಕೃಷ್ಣ ರಾವ್ ಹತ್ತಿರದಿಂದ ಕಂಡಿದ್ದರು. ಅವರ ಕೆಲಸವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಶಂಕರ್​ ನಾಗ್​ ನಿಧನ ಹೊಂದಿ ಕೆಲವು ದಶಕಗಳೇ ಕಳೆದಿವೆ. ಆದಾಗ್ಯೂ, ಕೃಷ್ಣ ರಾವ್ ಅವರ ಮನದಲ್ಲಿ ಇರುವ ನೋವು ಇನ್ನೂ ಕಡಿಮೆ ಆಗಿಲ್ಲ. ಆ ನೋವನ್ನು ಟಿವಿ9 ಕನ್ನಡದ ಜತೆಗೆ ಅವರು ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada