Weekend With Ramesh: ಸಾಧಕರ ಕುರ್ಚಿಯಲ್ಲಿ ಸಿಹಿ-ಕಹಿ ಚಂದ್ರು, ಎಪಿಸೋಡ್​ ಪೂರಾ ಸಿಹಿಯೇ

Weekend With Ramesh: ವೀಕೆಂಡ್ ವಿತ್ ರಮೇಶ್​ಗೆ ಅತಿಥಿಯಾಗಿ ಆಗಮಿಸಿದ್ದ ಸಿಹಿ-ಕಹಿ ಚಂದ್ರು ಜೀವನದ ಹಲವು ಸಿಹಿ ಘಟನೆಗಳನ್ನು ನೆನಪು ಮಾಡಿಕೊಂಡರು. ಕಹಿ ನೆನಪುಗಳನ್ನು ಮನದಲ್ಲೇ ಇರಿಸಿಕೊಂಡರು. ಹೇಗಿತ್ತು ಎಪಿಸೋಡ್?

Weekend With Ramesh: ಸಾಧಕರ ಕುರ್ಚಿಯಲ್ಲಿ ಸಿಹಿ-ಕಹಿ ಚಂದ್ರು, ಎಪಿಸೋಡ್​ ಪೂರಾ ಸಿಹಿಯೇ
ವೀಕೆಂಡ್ ವಿತ್ ರಮೇಶ್​ನಲ್ಲಿ ಸಿಹಿ ಕಹಿ ಚಂದ್ರು
Follow us
|

Updated on: Apr 30, 2023 | 8:00 AM

ವೀಕೆಂಡ್ ವಿತ್ ರಮೇಶ್​ನ (Weekend With Ramesh) ಈ ವಾರಾಂತ್ಯದ ಮೊದಲ ಅತಿಥಿಯಾಗಿ ನಟ, ನಿರ್ಮಾಪಕ, ಕತೆಗಾರ, ನಾಟಕಕಾರ, ಯಶಸ್ವಿ ಆರ್​ಜೆ, ಆಹಾರ ಪ್ರಿಯ, ಟೆಲಿವಿಷನ್ ತಾರೆ ಸಿಹಿ ಕಹಿ ಚಂದ್ರು (Sihi Kahi Chandru) ಆಗಮಿಸಿದ್ದರು. ವೀಕೆಂಡ್ ವಿತ್ ರಮೇಶ್​ಗೆ ಬಂದ ಬಹುತೇಕರು ಜೀವನದಲ್ಲಿ ಅನುಭವಿಸಿದ, ಅನುಭವಿಸದ ಕಷ್ಟಗಳನ್ನೆಲ್ಲ ರೋಚಕವಾಗಿ ಹೇಳಿ ಸಿಂಪತಿ ಗಿಟ್ಟಿಸಿಕೊಂಡಿರುವುದನ್ನು ಪ್ರೇಕ್ಷಕರು ನೋಡುತ್ತಲೇ ಬಂದಿದ್ದಾರೆ. ಆದರೆ ಅಪರೂಪಕ್ಕೆ ಸಿಹಿ-ಕಹಿ ಚಂದ್ರು ಅವರ ಇಂದಿನ ಎಪಿಸೋಡ್​ನಲ್ಲಿ ಅಂಥಹಾ ಗೋಳಿನ ಕತೆಗಳೇ ಇರಲಿಲ್ಲ, ತಮ್ಮ ಜೀವನದ ಸಿಹಿಯನ್ನಷ್ಟೆ ಚಂದ್ರು ಇಂದು ಹಂಚಿದರು, ಕಹಿಯನ್ನು ಅವರೇ ಇಟ್ಟುಕೊಂಡರು.

ಬೆಂಗಳೂರಿನ ರಾಜಾರಾಜಿನಗರದಲ್ಲೇ ಎ.ಚಂದ್ರು ಆಗಿ ಹುಟ್ಟಿದ ಸಿಹಿ-ಕಹಿ ಚಂದ್ರು ಎಳವೆಯಲ್ಲಿ ಬಹಳ ತುಂಟ ಹಾಗೂ ಬಾಲ್ಯದಿಂದಲೇ ಮಹಾನ್ ತಿಂಡಿಪೋತ. ಶೋನಲ್ಲಿ ಅವರ ತಾಯಿಯವರು ನೆನಪಿಸಿಕೊಂಡಂತೆ, ಒಮ್ಮೆ ಅಮ್ಮನ ಮೇಲೆ ಸವಾಲು ಹಾಕಿ 25 ಚಪಾತಿಗಳನ್ನು ತಿಂದಿದ್ದರಂತೆ, ನನಗೆ ಕೈನೋವಾಯಿತು ಇನ್ನು ಚಪಾತಿ ಮಾಡಲಾರೆ ಎಂದು ಕಣ್ಣೀರು ಹಾಕಿದ ಬಳಿಕ ತಿನ್ನುವುದು ಬಿಟ್ಟರಂತೆ ಚಂದ್ರು. ಎಷ್ಟು ತುಂಟರಾಗಿದ್ದರೊ ಅಷ್ಟೆ ಓದಿನಲ್ಲಿ ಜಾಣರೂ ಆಗಿದ್ದ ಚಂದ್ರು ಕಾಲೇಜಿನ ವರೆಗೆ ಒಳ್ಳೆಯ ಅಂಕಗಳನ್ನೇ ತೆಗೆದುಕೊಂಡವರು. ದ್ವಿತೀಯ ಪಿಯುಸಿಯಲ್ಲಿ 91% ಬಂದು ತಮ್ಮಿಷ್ಟದ ಟೆಕ್ಸ್​ಟೈಲ್ಸ್ ಎಂಜಿನಿಯರಿಂಗ್ ಸಿಗದೇ ಇದ್ದಾಗ ಬೇಸರ ಮಾಡಿಕೊಂಡು ಕೇವಲ 100 ರು ಇಟ್ಟುಕೊಂಡು ರಾಜ್ಯ ಪರ್ಯಟನೆ ಮಾಡಿದ್ದರಂತೆ. ವಾಪಸ್ ಬೆಂಗಳೂರಿಗೆ ಬಂದಾಗ ಅವರ ಬಳಿ ಹತ್ತು ರುಪಾಯಿ ಉಳಿದಿದ್ದತಂತೆ.

ಎಂಇಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ನಾಟಕಗಳತ್ತ ಆಕರ್ಷಿತರಾಗಿ ನಾಟಕ ಮಾಡುತ್ತಿದ್ದ ಚಂದ್ರು ಶಂಕರ್ ನಾಗ್ ಅವರೊಟ್ಟಿಗೆ ಮಾಲ್ಗುಡಿ ಡೇಸ್​ ಗಾಗಿ ಡಬ್ಬಿಂಗ್ ಹಾಗೂ ನಟನಾಗಿಯೂ ಕೆಲಸ ಮಾಡಿದ್ದಾರೆ. ಅದಾದ ಬಳಿಕ ಸಿನಿಮಾ ರಂಗದಲ್ಲಿ ಅವಕಾಶಗಳನ್ನು ಹುಡುಕುವಾಗ ಅವಕಾಶಗಳೇನೋ ಸಿಗುತ್ತಿತ್ತಂತೆ ಆದರೆ ತೀರ ಸಣ್ಣ-ಪುಟ್ಟ ಪಾತ್ರಗಳು, ನಟಿಸಿದರೂ ಸಂಭಾವನೆ ಇಲ್ಲ ಬರೀ ಊಟವನ್ನಷ್ಟೆ ಕೊಡುತ್ತಿದ್ದರಂತೆ. ಆ ಬಳಿಕ ಡಬ್ಬಿಂಗ್ ಕಾರ್ಯವನ್ನಾದರೂ ಮಾಡಿ ಹಣ ಮಾಡಲು ಮುಂದಾಗುವ ನಿರ್ಣಯ ಮಾಡಿ ಡಬ್ಬಿಂಗ್ ಮಾಡುವಾಗ ಭಾರ್ಗವ ಅವರು ಕರೆದು ವಿಷ್ಣುವರ್ಧನ್ ನಟನೆಯ ಹೃದಯ ಗೀತೆ ಸಿನಿಮಾದಲ್ಲಿ ವಿಲನ್ ರೋಲ್ ಕೊಟ್ಟಿದ್ದಲ್ಲದೆ ನಾಲ್ಕು ಸಾವಿರ ಸಂಬಳವನ್ನೂ ಕೊಟ್ಟರಂತೆ. ಅದೇ ಸಿಹಿ-ಕಹಿ ಚಂದ್ರು ಅವರ ಮೊತ್ತ ಮೊದಲ ದೊಡ್ಡ ಪ್ರಾಜೆಕ್ಟ್.

ಇದನ್ನೂ ಓದಿ: ಎಲ್ಲರಿಗೂ ಮನೆ, ಶಂಕರ್​ನಾಗ್ ಇದ್ದಿದ್ದರೆ ಗುಡಿಸಲುಗಳೇ ಇರುತ್ತಿರಲಿಲ್ಲ, ಶಂಕರ್​ನಾಗ್ ಐಡಿಯಾ ಬಿಚ್ಚಿಟ್ಟ ಸಿಹಿ-ಕಹಿ ಚಂದ್ರು

ಅದಾದ ಬಳಿಕ ದೂರದರ್ಶನದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಿಂದಲೇ ಪ್ರಸಾರವಾದ ಕನ್ನಡದ ಧಾರಾವಾಹಿ ಸಿಹಿ-ಕಹಿಯಲ್ಲಿ ಚಂದ್ರು ನಟಿಸಿದರು. ಅಲ್ಲೇ ಗೀತಾ ಅವರ ಪರಿಚಯವಾಗಿ ಅದು ಪ್ರೇಮವಾಗಿ ಮದುವೆಯೂ ಆಯಿತು. ಅದಾದ ಬಳಿಕ ಒಂದರ ಹಿಂದೊಂದು ಸಿನಿಮಾಗಳು ಸಿಗಲು ಆರಂಭವಾದವು. ಅದರಲ್ಲಿಯೂ ಫಣಿ ರಾಮಚಂದ್ರ ಹಾಗೂ ಸಾಯಿ ಕೃಷ್ಣ ಅವರಂತೂ ಹಲವು ಬಗೆಯ ಪಾತ್ರಗಳನ್ನು ಕೊಟ್ಟರು, ಸಾಯಿಕೃಷ್ಣ ಅವರಂತೂ ನನ್ನ ಗಾಡ್​ಫಾದರ್ ಎಂದರು ಚಂದ್ರು. ಹೀಗಿದ್ದಾಗ ಬರೀ ಹಾಸ್ಯಪಾತ್ರಗಳಲ್ಲಿ ನಟಿಸುತ್ತಾ ಇದ್ದರೆ ಆಗದು ಬೇರೆ ಏನನ್ನಾದರೂ ಮಾಡಬೇಕು ಎಂದುಕೊಂಡು ಪ್ರೊಡಕ್ಷನ್ ಹೌಸ್ ಆರಂಭಿಸಿ ಚಿತ್ರಕತೆ ಬರೆದುಕೊಡುವುದು, ಧಾರಾವಾಹಿಗಳನ್ನು ಚಾನೆಲ್​ಗಳಿಗೆ ಸೇಲ್ ಮಾಡಿಕೊಡುವುದು ಮಾಡಲು ಆರಂಭಿಸಿದ್ದಾರೆ. ಆ ತಂಡದಲ್ಲಿ ಚಂದ್ರು ಜೊತೆಗೆ ಪ್ರಕಾಶ್ ರೈ ಸಹ ಇದ್ದರಂತೆ. ಅದು ಚಂದ್ರುಗೆ ಚೆನ್ನಾಗಿ ಕೈ ಹಿಡಿದಿದೆ. ಆದರೆ ಒಮ್ಮೆ 60 ಲಕ್ಷ ಖರ್ಚು ಮಾಡಿ ಎಡಿಟಿಂಗ್ ಸೆಟ್ ತಂದಾಗ ಆಕಸ್ಮಿಕವಾಗಿ ಅಣ್ಣಾವ್ರ ಕಿಡ್ನಾಪ್ ಆಗಿ ಅವರಿಗೆ ದೊಡ್ಡ ಲಾಸ್ ಆಗಿಬಿಟ್ಟಿತಂತೆ. ಅದೇ ಸಮಯದಲ್ಲಿ ಹೈದರಾಬಾದ್​ನಿಂದ ಕರೆ ಬಂದು ಹಾಸ್ಯ ಧಾರಾವಾಹಿ ಮಾಡಿಕೊಡಲು ಕೇಳಿದ್ದಾರೆ. ಕೂಡಲೇ ಹೂ ಎಂದು ಒಪ್ಪಿಕೊಂಡ ಸಿಹಿ ಕಹಿ ಚಂದ್ರು, ಪ್ರತಿದಿನವೂ ಹೊಸ ಕತೆಯ ಪಾಪ ಪಾಂಡು ಪ್ರಾಜೆಕ್ಟ್ ಐಡಿಯಾ ಕಳಿಸಿದರಂತೆ. ಅಂದೇ ವಾಪಸ್ ಮೇಲ್ ಬಂತಂತೆ ಪ್ರಾಜೆಕ್ಟ್ ಅಪ್ರೂವ್ ಆಗಿದೆ ಎಂದು.

ಕೂಡಲೇ ಎಂಎಸ್​ ನರಸಿಂಹಮೂರ್ತಿ ಅವರನ್ನು ಭೇಟಿಯಾಗಿ ಡೈಲಾಗ್ ಬರೆಯಲು ಒಪ್ಪಿಸಿದ್ದಾರೆ ಚಂದ್ರು, ಅದಾದ ನಂತರದ್ದು ಇತಿಹಾಸ. ಪಾಪ ಪಾಂಡು, ಸಿಲ್ಲಿ ಲಲ್ಲಿ, ಪಾಂಡುರಂಗ ವಿಠಲ ಹೀಗೆ ಹಲವು ಧಾರಾವಾಹಿಗಳ ಸುಮಾರು 8000 ಕ್ಕೂ ಮೀರಿ ಎಪಿಸೋಡ್​ಗಳನ್ನು ಚಂದ್ರು ನಿರ್ಮಾಣ ಮಾಡಿದ್ದಾರೆ. ವಿಶೇಷವೆಂದರೆ ಆ 8000 ಎಪಿಸೋಡ್​ಗಳಿಗೂ ಸಂಭಾಷಣೆ ಬರೆದಿರುವುದು ಎಂಎಸ್​ಎನ್ ಅವರೇ! ಆ ಧಾರಾವಾಹಿಗಳಲ್ಲಿ ನಟಿಸಿದ ಹಲವರು ಆ ನಂತರ ದೊಡ್ಡ ಸ್ಟಾರ್​ಗಳಾಗಿ ಬದಲಾದರು.

ಹಿಂದೊಮ್ಮೆ ಆತ್ಮೀಯರ ಮನೆಯಲ್ಲಿ ನಡೆದ ಪಾಟ್​ಲಾಕ್ ಪಾರ್ಟಿಗೆ ಹೋಗಿದ್ದಾಗ ಬಾದಾಮ್ ಹಲ್ವಾ ಮಾಡಿಕೊಂಡು ಹೋಗಿದ್ದರಂತೆ ಚಂದ್ರು, ಅದು ಇಷ್ಟವಾಗಿ ಚಂದ್ರು ಅವರೇ ಕೊಟ್ಟ ಐಡಿಯಾ ಆಧರಿಸಿ ಅಡುಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅದು ದೊಡ್ಡ ಯಶಸ್ವಿಯೂ ಆಯಿತು. ಆದರೆ ಜನ ಚಂದ್ರು ಅವರನ್ನು ನಟನಾಗಿ ಗುರುತಿಸುವುದಕ್ಕಿಂತಲೂ ಹೆಚ್ಚಾಗಿ ಅಡುಗೆ ಭಟ್ಟನಾಗಿ ಗುರುತಿಸಲು ಆರಂಭಿಸದ ಮೇಲೆ ಆ ಶೋ ಅನ್ನು ನಿಲ್ಲಿಸಿಬಿಟ್ಟರಂತೆ. ಆದರೆ ಈಗ ಮತ್ತೆ ಪ್ರಾರಂಭಿಸಿದ್ದಾರೆ.

ಹೀಗೆ ಬಹತೇಕ ತಮ್ಮ ಜೀವನದ ಸಿಹಿ ಘಟನೆಗಳನ್ನೇ ಚಂದ್ರು ನೆನಪಿಸಿಕೊಂಡರು, ನಗುತ್ತಲೇ ಘಟನೆಗಳನ್ನು ನಿರೂಪಣೆ ಮಾಡಿದರು ಶೋಗೆ ಬಂದವರನ್ನು ನಗಿಸಿದರು. ಸೆಂಟಿಮೆಂಟ್ ಇಲ್ಲದೆ ಸಿಂಪತಿಗಳಿಸಿಕೊಳ್ಳುವ ಪ್ರಯತ್ನಗಳಿಲ್ಲದೆ ನಗು-ನಗುತ್ತಲೇ ಜೀವನದ ಘಟನೆಗಳನ್ನು ಸ್ಮರಿಸಿಕೊಳ್ಳುತ್ತಾ, ಜೀವನ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು ಸಿಹಿ-ಕಹಿ ಚಂದ್ರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ