New Play : ‘ಕಾಂತ ಮತ್ತು ಕಾಂತ’ ರಂಗದ ಮೇಲೆ ಮೊಟ್ಟಮೊದಲ ಬಾರಿಗೆ ಒಟ್ಟಿಗೇ ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು
Mukyamantri Chandru - Sihikahi Chandru : ಇಬ್ಬರು ನಟರು. ವಯಸ್ಸಾಗಿದೆ. ಆದರೆ ಅಹಂ ಬಿಟ್ಟಿಲ್ಲ. ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯ ಜೋಡಿ. ಕಾರಣಾಂತರಗಳಿಂದ ಹದಿನಾರು ವರ್ಷಗಳಿಂದ ಜೊತೆಗೆ ನಟಿಸಿಲ್ಲ. ಈಗ ಅಂತಹದೊಂದು ಅವಕಾಶ ಬಂದಿದೆ. ಅವಕಾಶ? ಹಳೆಯ ವೈಷಮ್ಯಗಳನ್ನು ಮರೆತು ಕೊನೆಯ ಬಾರಿ ರಂಗದ ಮೇಲೆ ಒಂದಾಗಬೇಕು. ಆದರೆ ಅದು ಸಾಧ್ಯವೇ? ಅಹಂಗಳನ್ನು ಅಷ್ಟು ಸುಲಭದಲ್ಲಿ ಕೊಡವಿಕೊಳ್ಳಲು ಸಾಧ್ಯವೇ?
Kannada Play – Kantha Kantha : ‘‘ಒಬ್ಬರನ್ನೊಬ್ಬರು ಮೀರಿದಂತೆ ನಟಿಸಿರುವ ಮುಖ್ಯಮಂತ್ರಿ ಹಾಗೂ ಸಿಹಿಕಹಿ ಚಂದ್ರುರವರ ಜುಗಲ್ ಬಂದಿ, ಸೂರಿಯವರ ಛಾಪು ಹೊತ್ತ ರಚನಾತ್ಮಕ ಶೈಲಿ ಮತ್ತು ಚಟಪಟಿಸುವ ಒಂದೆರಡು ಪದಗಳ ಸಂಭಾಷಣೆ ಮುದಕೊಡುತ್ತವೆ. ಹಾಗೆಯೇ ನಮಗೆ ತೀರಾ ಹತ್ತಿರವಾಗುವ ಕಾರಣ ಈ ಹಾಸ್ಯದ ಪರಿ ನಾವು ನಮ್ಮ ಆತ್ಮೀಯ ಗೆಳೆಯರ ಬಳಗದಲ್ಲಿ ಆಡಿರುವ ಇಲ್ಲ ಕೇಳಿರುವ ಮಾತುಗಳೇ. ಹಾಸ್ಯ ಲೇಪನದ ಜೊತೆಗೆ ಹಿರಿ ವಯಸ್ಸಿನವರ ಬದುಕಿನಲ್ಲಿ ಸಾಮಾನ್ಯವಾಗಿರುವ ಸಂದರ್ಭಗಳ, ಸಂಘರ್ಷಗಳ ಸಾಲು ಸಾಲುಗಳು ಪ್ರೇಕ್ಷಕರ ಮನ ಮಿಡಿಸುತ್ತವೆ. ಸೂರಿಯವರ ಹಿಂದಿನ ಸಂಕ್ರಮಣ ಮತ್ತು ನಾ ತುಕಾರಾಮ್ ಅಲ್ಲ ನಾಟಕಗಳ ನೆನಪು ಮರುಕಳಿಸುತ್ತವೆ.” ಬಿ. ಸಿ. ಎಸ್. ಅಯ್ಯಂಗಾರ್, ನಾಟಕಪ್ರಿಯ
ಇಬ್ಬರು ನಟರು. ವಯಸ್ಸಾಗಿದೆ. ಆದರೆ ಅಹಂ ಬಿಟ್ಟಿಲ್ಲ. ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯ ಜೋಡಿ. ಕಾರಣಾಂತರಗಳಿಂದ ಹದಿನಾರು ವರ್ಷಗಳಿಂದ ಜೊತೆಗೆ ನಟಿಸಿಲ್ಲ. ಈಗ ಅಂತಹದೊಂದು ಅವಕಾಶ ಬಂದಿದೆ. ಅವಕಾಶ? ಹಳೆಯ ವೈಷಮ್ಯಗಳನ್ನು ಮರೆತು ಕೊನೆಯ ಬಾರಿ ರಂಗದ ಮೇಲೆ ಒಂದಾಗಬೇಕು. ಆದರೆ ಅದು ಸಾಧ್ಯವೇ? ಅಹಂಗಳನ್ನು ಅಷ್ಟು ಸುಲಭದಲ್ಲಿ ಕೊಡವಿಕೊಳ್ಳಲು ಸಾಧ್ಯವೇ? ಕೊನೆಗೂ ಒಂದು ಪುಟ್ಟ ದೃಶ್ಯವಾದರೂ ಸಾಧ್ಯವಾದೀತೇ? ಜುಗಲ್ಬಂದಿ ಸಾಧ್ಯವಾದೀತೇ?
ರಂಗದ ಮೇಲೆ ಮೊಟ್ಟ ಮೊದಲ ಬಾರಿಗೆ ಒಟ್ಟಿಗೇ ಮುಖ್ಯಮಂತ್ರಿ ಚಂದ್ರು ಮತ್ತು ಸಿಹಿಕಹಿ ಚಂದ್ರು.
ಬೆಂಗಳೂರಿನಲ್ಲಿ ನಾಟಕಗಳು ಎಲ್ಲೇ ನಡೆಯಲಿ, ಅಲ್ಲಿ ಹಾಜರಿರುತ್ತಾರೆ ಬಿ.ಸಿ.ಎಸ್. ಅಯ್ಯಂಗಾರ್. ಮೊದಲ ಪ್ರದರ್ಶನವನ್ನು ನೋಡಿದ ಅವರು, “ಕಾಂತ ಮತ್ತು ಕಾಂತ ನನಗೆ ಖುಷಿಕೊಟ್ಟ ನಾಟಕಗಳ ಹೂಗುಚ್ಛದಲ್ಲಿ ಒಂದ ಚಿಕ್ಕ ಚೊಕ್ಕದಾದ ಹೂ ಎನಿಸಿತು. ನಾನು ವಿಮರ್ಶಕನಲ್ಲ. ನನ್ನ ದೃಷ್ಟಿಯಲ್ಲಿ ಪ್ರೇಕ್ಷಕರನ್ನು ಮೊದಲ ದೃಶ್ಯದಿಂದ ಕೊನೆಯವರೆಗೆ ಹಿಡಿದಿಡುವ ಮತ್ತು ಮತ್ತೆ ಮತ್ತೆ ನೋಡಲು ಬಯಸುವ ಇಚ್ಛೆಯನ್ನು ಹುಟ್ಟು ಹಾಕುವ ನಾಟಕಗಳು ಉತ್ತಮ ಎನಿಸುತ್ತವೆ. ಇಂತಹ ನಾಟಕಗಳನ್ನು ನಾನು ಮತ್ತೆ ಮತ್ತೆ ನೋಡುವ, ಜೊತೆಯಲ್ಲೇ ನನ್ನ ಸ್ನೇಹಿತರಿಗೆ ನೋಡಲು ಪ್ರೋತ್ಸಾಹಿಸುವ ಹಾಗೂ ರಂಗಭೂಮಿಗೆ ನನ್ನ ಪುಟ್ಟ ಕೊಡುಗೆ ನೀಡುವ ಪ್ರಯತ್ನ ನನಗೆ ಅಂಟಿಕೊಂಡಿದೆ.
ಒಬ್ಬರನ್ನೊಬ್ಬರು ಮೀರಿದಂತೆ ನಟಿಸಿರುವ ಮುಖ್ಯಮಂತ್ರಿ ಹಾಗೂ ಸಿಹಿಕಹಿ ಚಂದ್ರುರವರ ಜುಗಲ್ ಬಂದಿ, ಸೂರಿಯವರ ಛಾಪು ಹೊತ್ತ ರಚನಾತ್ಮಕ ಶೈಲಿ ಮತ್ತು ಚಟಪಟಿಸುವ ಒಂದೆರಡು ಪದಗಳ ಸಂಭಾಷಣೆ ಮುದಕೊಡುತ್ತವೆ. ಹಾಗೆಯೇ ನಮಗೆ ತೀರಾ ಹತ್ತಿರವಾಗುವ ಕಾರಣ ಈ ಹಾಸ್ಯದ ಪರಿ ನಾವು ನಮ್ಮ ಆತ್ಮೀಯ ಗೆಳೆಯರ ಬಳಗದಲ್ಲಿ ಆಡಿರುವ ಇಲ್ಲ ಕೇಳಿರುವ ಮಾತುಗಳೇ. ಹಾಸ್ಯ ಲೇಪನದ ಜೊತೆಗೆ ಹಿರಿ ವಯಸ್ಸಿನವರ ಬದುಕಿನಲ್ಲಿ ಸಾಮಾನ್ಯವಾಗಿರುವ ಸಂದರ್ಭಗಳ, ಸಂಘರ್ಷಗಳ ಸಾಲು ಸಾಲುಗಳು ಪ್ರೇಕ್ಷಕರ ಮನ ಮಿಡಿಸುತ್ತವೆ. ಸೂರಿಯವರ ಹಿಂದಿನ ಸಂಕ್ರಮಣ ಮತ್ತು ನಾ ತುಕಾರಾಮ್ ಅಲ್ಲ ನಾಟಕಗಳ ನೆನಪು ಮರುಕಳಿಸುತ್ತವೆ.” ಎನ್ನುತ್ತಾರೆ.
ಪೂರ್ಣಪ್ರಮಾಣದಲ್ಲಿ ರಂಗಪ್ರದರ್ಶನಗಳು ಮರುಜೀವ ಪಡೆದುಕೊಳ್ಳುವುದು ಇನ್ನು ಕನಸಿನ ಮಾತೇ! ಇಡೀ ರಂಗಸಮುದಾಯ ಇಂಥ ತೀವ್ರ ಚಡಪಡಿಕೆಯಲ್ಲಿದ್ದಾಗಲೇ ಅಪಾಯಕ್ಕೆ ಎದುರಾಗಿ ಚಲಿಸಿದ್ದು, ಸಂಚರಿಸಲು ಪ್ರಯತ್ನಿಸಿದ್ದು ಸಂಕೇತ್ ನಾಟಕ ತಂಡ, ‘ಜನಶತ್ರು’ ವಿನ ಮೂಲಕ. “ಕೊರೋನ ರಂಗ ಕೊರೋನವಾಗಿ ರೂಪಾಂತರಗೊಂಡು ರಂಗಭೂಮಿಯನ್ನು ಐಸಿಯುನಲ್ಲಿ ಇಟ್ಟಿತು. ಛಲದಂಕಮಲ್ಲರಂತೆ ಸೂರಿ, ಮುಖ್ಯಮಂತ್ರಿ ಚಂದ್ರು ಹಾಗೂ ಸಿಹಿಕಹಿ ಚಂದ್ರು ಮುನ್ನುಗ್ಗಿ ವಿಸಿಯೂ ಅಂದರು. ರಂಗಭೂಮಿಗೆ ಮರುಜೀವ ಕೊಟ್ಟರು. ಕಾಂತ ಮತ್ತು ಕಾಂತ ನಿಮಗೆ ಶರಣು.” ಎನ್ನುತ್ತಾರೆ ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ.
ನಾಟಕ : ಕಾಂತ ಮತ್ತು ಕಾಂತ ತಂಡ : ಸಂಕೇತ್ ನಾಟಕ ರಚನೆ, ವಿನ್ಯಾಸ ಮತ್ತು ನಿರ್ದೇಶನ: ಎಸ್. ಸುರೇಂದ್ರನಾಥ್ ಅವಧಿ : 90 ನಿಮಿಷಗಳು ದಿನಾಂಕ, ಸಮಯ : ನವೆಂಬರ್ 13, ಮಧ್ಯಾಹ್ನ 3.30 ಮತ್ತು ಸಂಜೆ 7 ಸ್ಥಳ : ರಂಗಶಂಕರ, ಜೆ.ಪಿ. ನಗರ, ಬೆಂಗಳೂರು ಟಿಕೆಟ್ ಲಿಂಕ್ : BookMyShow
*
ಇದನ್ನೂ ಓದಿ : New Year Resolution | ಇನ್ನು ಇರುವಷ್ಟು ಕಾಲ ಇರುವಂತೆಯೇ ಇರಬೇಕೆಂದು ಅಂದುಕೊಂಡಿದ್ದೇನೆ: ಕತೆಗಾರ ಎಸ್.ಸುರೇಂದ್ರನಾಥ್
Published On - 9:09 am, Sat, 6 November 21