ಶೀಘ್ರವೇ ಪೂರ್ಣಗೊಳ್ಳಲಿದೆ ‘ಜೊತೆ ಜೊತೆಯಲಿ’ ಧಾರಾವಾಹಿ’; ಕಾರಣ ಏನು?
Jothe Jotheyali Serial: ಕಥೆಯನ್ನು ಬದಲಿಸಿ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಅವರನ್ನು ಕರೆತರಲಾಯಿತು. ಈಗ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
ಮೇಘಾ ಶೆಟ್ಟಿ (Megha Shetty) ಹಾಗೂ ಹರೀಶ್ ರಾಜ್ ನಟನೆಯ ‘ಜೊತೆ ಜೊತೆಯಲಿ’ ಧಾರಾವಾಹಿ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದೆ. ಕಳೆದವರ್ಷ ಅನಿರುದ್ಧ ಜತ್ಕರ್ ಅವರು ಧಾರಾವಾಹಿಯಿಂದ ಹೊರ ನಡೆದರು. ಆ ಬಳಿಕ ಈ ಧಾರಾವಾಹಿಗೆ ಹರೀಶ್ ರಾಜ್ ಎಂಟ್ರಿ ಆಯಿತು. ಈಗ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಇದಕ್ಕೆ ಕಾರಣ ಕೂಡ ರಿವೀಲ್ ಆಗಿದೆ. ಈ ವಿಚಾರ ಕೇಳಿ ಈ ಧಾರಾವಾಹಿಯನ್ನು ಇಷ್ಟಪಡುವವರಿಗೆ ಬೇಸರ ಆಗಿದೆ. ‘ಜೊತೆ ಜೊತೆಯಲಿ’ ಧಾರಾವಾಹಿಯನ್ನು ಆರೂರು ಜಗದೀಶ್ (Arooru Jagadish) ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ.
‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಅನಿರುದ್ಧ್ ಅವರು ಹೊರಗುಳಿಯಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು. ಆಗಲೇ ಈ ಧಾರಾವಾಹಿ ಪೂರ್ಣಗೊಳ್ಳಲಿದೆ ಎನ್ನಲಾಗಿತ್ತು. ಆದರೆ, ಧಾರಾವಾಹಿ ಕಥೆಗೆ ನಿರ್ದೇಶಕರು ಟ್ವಿಸ್ಟ್ ನೀಡಿದರು. ಕಥೆಯನ್ನು ಬದಲಿಸಿ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಅವರನ್ನು ಕರೆತರಲಾಯಿತು. ಈಗ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
ಕಾರಣ ಏನು?
‘ಜೊತೆ ಜೊತೆಯಲಿ’ ಧಾರಾವಾಹಿಗೆ ಕಲಾವಿದರ ಡೇಟ್ಸ್ ತೊಂದರೆ ಆಗಿದೆ. ಈ ಕಾರಣಕ್ಕೆ ಆರೂರು ಜಗದೀಶ್ ಅವರು ಧಾರಾವಾಹಿ ಮುಗಿಸುವ ಆಲೋಚನೆಯಲ್ಲಿದ್ದಾರೆ ಎನ್ನುತ್ತಿವೆ ಮೂಲಗಳು. ಸದ್ಯ ಅವರು ಈ ವಿಚಾರದಲ್ಲಿ ವಾಹಿನಿಯವರ ಒಪ್ಪಿಗೆ ಪಡೆಯಬೇಕಿದೆ. ಅಲ್ಲಿ ಗ್ರೀನ್ಸಿಗ್ನಲ್ ಸಿಕ್ಕ ಬಳಿಕ ಅವರು ಧಾರಾವಾಹಿ ಕೊನೆಗೊಳಿಸಲಿದ್ದಾರೆ. ಡೇಟ್ಸ್ ಕೊಟ್ಟು ಶೂಟಿಂಗ್ ಬರದೇ ಇರುವುದು ತಂಡಕ್ಕೆ ಸಮಸ್ಯೆ ಆಗುತ್ತಿದೆ ಎನ್ನಲಾಗಿದೆ.
ಧಾರಾವಾಹಿ ಮುಗಿಸ್ತಾರೆ ಎಂದಿದ್ದ ಅನಿರುದ್ಧ
2022ರ ಆಗಸ್ಟ್ನಲ್ಲಿ ಅನಿರುದ್ಧ ಅವರು ಧಾರಾವಾಹಿಯಿಂದ ಹೊರ ಬಂದರು. ಇದು ಅನಿರುದ್ಧ ಅವರ ನಿರ್ಧಾರ ಆಗಿರಲಿಲ್ಲ. ಅವರಿಗೆ ಧಾರಾವಾಹಿಯನ್ನು ಅರ್ಧಕ್ಕೆ ಬಿಡಲು ಮನಸ್ಸು ಇರಲಿಲ್ಲ. ಆ ಸಂದರ್ಭದಲ್ಲಿ ಅವರು ಮಾತನಾಡಿದ್ದರು. ‘2-3 ತಿಂಗಳಲ್ಲಿ ಧಾರಾವಾಹಿ ಮುಗಿಸ್ತೀನಿ ಎಂದು ತಂಡದವರೇ ಹೇಳಿದ್ದರು’ ಎಂದು ಅನಿರುದ್ಧ ಅವರು ಮಾಹಿತಿ ಹಂಚಿಕೊಂಡಿದ್ದರು. ಆದರೆ, ಆ ರೀತಿ ಆಗಿರಲಿಲ್ಲ. ಕಥೆಗೆ ಹಲವು ಟ್ವಿಸ್ಟ್ ಕೊಟ್ಟು ಇಲ್ಲಿಯವರೆಗೆ ತರಲಾಗಿದೆ. ಈಗ ಧಾರಾವಾಹಿ ಪೂರ್ಣಗೊಳ್ಳಲಿದೆ.
‘ಜೊತೆ ಜೊತೆಯಲಿ’ ಮುಗಿದ ಬಳಿಕ ‘ಸೀತಾ ರಾಮ’?
‘ಸೀತಾ ರಾಮ’ ಹೆಸರಿನ ಧಾರಾವಾಹಿ ಪ್ರಸಾರ ಕಾಣಲು ರೆಡಿ ಆಗಿದೆ. ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ‘ಜೊತೆ ಜೊತೆಯಲಿ’ ಕೊನೆಗೊಂಡ ಬಳಿಕ ‘ಸೀತಾ ರಾಮ’ ಪ್ರಸಾರ ಕಾಣಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ