Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವಿತ್ರಾ ಲೋಕೇಶ್ ಜೊತೆಗಿನ ಲಿಪ್​ಲಾಕ್ ಬಗ್ಗೆ ವಿವರಣೆ ನೀಡಿದ ನರೇಶ್: ಆ ದೃಶ್ಯದ ಹಿನ್ನೆಲೆ ಏನು?

Naresh-Pavitra Lokesh: ಮಳ್ಳಿ ಪೆಳ್ಳಿ ಸಿನಿಮಾದಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಲಿಪ್​ಲಾಕ್ ದೃಶ್ಯವೊಂದಿದೆ. ಈ ದೃಶ್ಯದ ಹಿನ್ನೆಲೆಯನ್ನು ನಟ ನರೇಶ್ ವಿವರಿಸಿದ್ದಾರೆ.

ಪವಿತ್ರಾ ಲೋಕೇಶ್ ಜೊತೆಗಿನ ಲಿಪ್​ಲಾಕ್ ಬಗ್ಗೆ ವಿವರಣೆ ನೀಡಿದ ನರೇಶ್: ಆ ದೃಶ್ಯದ ಹಿನ್ನೆಲೆ ಏನು?
ನರೇಶ್-ಪವಿತ್ರಾ
Follow us
ಮಂಜುನಾಥ ಸಿ.
|

Updated on:May 25, 2023 | 8:52 PM

ತೆಲುಗು ನಟ ನರೇಶ್ (Naresh) ಹಾಗೂ ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಜೂನ್-ಜುಲೈ ತಿಂಗಳಲ್ಲಿ ಇವರ ಸಂಬಂಧದ ಜೋರು ಚರ್ಚೆಗಳು ನಡೆದಿದ್ದವು. ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿ, ನರೇಶ್ ಹಾಗೂ ಪವಿತ್ರಾ ವಿರುದ್ಧ ಮಾಧ್ಯಮಗಳ ಮುಂದೆ ಹರಿಹಾಯ್ದು, ಅವರದ್ದು ಅಕ್ರಮ ಸಂಬಂಧ ಎಂದಿದ್ದರು. ಅದಕ್ಕೆ ನರೇಶ್ ಹಾಗೂ ಪವಿತ್ರಾ ಸಹ ಸ್ಪಷ್ಟನೆಗಳನ್ನು ನೀಡಿದ್ದರು. ಇದೀಗ ಇವರಿಬ್ಬರು ಮುಖ್ಯ ಪಾತ್ರದಲ್ಲಿ ನಟಿಸಿರುವ ಮಳ್ಳಿ ಪೆಳ್ಳಿ (ಮತ್ತೆ ಮದುವೆ) (Malli Pelli) ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಟ್ರೈಲರ್​ನಲ್ಲಿನ ನರೇಶ್-ಪವಿತ್ರಾ ಲಿಪ್​ಲಾಕ್ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗಿನ ಸಿನಿಮಾಗಳಲ್ಲಿ ಲಿಪ್​ಲಾಕ್ ಸಾಮಾನ್ಯ. ಮೊದಲು ಬಾಲಿವುಡ್​ಗಷ್ಟೆ ಸೀಮಿತವಾಗಿದ್ದ ಲಿಪ್ ಲಾಕ್ ದೃಶ್ಯಗಳು ಈಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಬಂದಿವೆ. ಆದರೆ ಮಳ್ಳಿ ಪೆಳ್ಳಿ ಸಿನಿಮಾದಲ್ಲಿ ನರೇಶ್ ಹಾಗೂ ಪವಿತ್ರಾ ಅಂಥಹಾ ಹಿರಿಯ ನಟರು ಲಿಪ್ ಲಾಕ್ ಮಾಡಿರುವ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ನರೇಶ್, ಆ ದೃಶ್ಯ ನಡೆದಿದ್ದು ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ.

”ಎಲ್ಲರೂ ನೋಡಿರುವಂತೆ ಟ್ರೈಲರ್​ನಲ್ಲಿ ಒಂದು ಲಿಪ್ ಲಾಕ್ ದೃಶ್ಯವಿದೆ. ಅದು ಲಿಪ್ ಲಾಕ್ ಸಹ ಅಲ್ಲ. ಲಿಪ್ ಪೆಕ್ ಎನ್ನಬಹುದಷ್ಟೆ. ಅದರ ಬಗ್ಗೆ ಹಲವರು ಪ್ರಶ್ನೆ ಮಾಡಿದರು. ಮೊದಲಿಗೆ ಆ ಲಿಪ್​ಲಾಕ್ ವಿಡಿಯೋ ಮಾತ್ರವೇ ಬಿಟ್ಟಿದ್ದೆವು. ಆ ವಿಡಿಯೋ ನಿಜವಾ? ಸಿನಿಮಾಕ್ಕಾಗಿ ಮಾಡಿದ್ದಾ? ಎಂಬ ಅನುಮಾನಗಳು ಹಲವರಿಗಿದ್ದವು. ಇದೆಲ್ಲ ಬೇಕಿತ್ತಾ? ಎಂದು ಕೂಡ ಮಾತನಾಡಿಕೊಂಡರು. ಆದರೆ ಆ ದೃಶ್ಯ ಮೊದಲಿಗೆ ಸಿನಿಮಾದಲ್ಲಿರಲಿಲ್ಲ” ಎಂದಿದ್ದಾರೆ ನರೇಶ್.

ಶೂಟಿಂಗ್ ನಡೆಯಬೇಕಾದರೆ ಯೂಟ್ಯೂಬ್​ಗಳಲ್ಲಿ ಇತರೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬಗ್ಗೆ ಏನೇನೋ ಸುದ್ದಿಗಳನ್ನು ಹಾಕುತ್ತಿದ್ದರು. ಅದು ಬಹಳ ಬೇಜಾರಾಗಿತ್ತು. ಇದನ್ನು ಗಮನಿಸಿದ ನಿರ್ದೇಶಕ ರಾಜು, ಇವರಿಗೆಲ್ಲ ಒಂದು ಮೆಸೇಜ್ ಕೊಡೋಣ ಎಂದರು. ಪವಿತ್ರಾ ಲೋಕೇಶ್ ಸಹ ಸರಿ ಕೊಡೋಣ, ಏನು ಮಾಡುತ್ತೀರೋ ಮಾಡಿ ಎಂದು ಬಿಟ್ಟರು. ಹಾಗಾಗಿ ಅವರು ಈ ಲಿಪ್ ಲಾಕ್ ದೃಶ್ಯದ ಐಡಿಯಾದ ಮಾಡಿದರು. ಆದರೆ ದೃಶ್ಯದಲ್ಲಿ ನಟಿಸಲು ಪವಿತ್ರಾಗೆ ಇಷ್ಟವಿರಲ್ಲಿಲ್ಲ” ಎಂದು ವಿವರಿಸಿದ್ದಾರೆ ನರೇಶ್.

ಇದನ್ನೂ ಓದಿ:ಪವಿತ್ರಾ ಲೋಕೇಶ್ ಹಾಗೂ ತಮ್ಮ ಸಂಬಂಧದ ಬಗ್ಗೆ ಸತ್ಯ ನುಡಿದ ನಟ ನರೇಶ್

ಬಳಿಕ ನಾನು, ನಿರ್ದೇಶಕ ರಾಜು ಪವಿತ್ರಾ ಅವರನ್ನು ಕೂರಿಸಿಕೊಂಡು ಸುಮಾರು ಮೂರು ಗಂಟೆಗಳ ಕಾಲ ಮಾತನಾಡಿ ಒಪ್ಪಿಸಿದೆವು. ಅದಾದ ಬಳಿಕ ಕೊನೆಗೆ ಕ್ಯಾಮೆರಾ ಆನ್ ಮಾಡಿದಾಗಲಂತೂ ಪವಿತ್ರಾ ಬಹಳ ಕಷ್ಟಪಟ್ಟರು. ಹತ್ತಿರಕ್ಕೆ ಬರುವುದು ಹಿಂದೆ ಹೋಗುವುದು ಮಾಡುತ್ತಲೇ ಇದ್ದರು. ಸುಮಾರು 9 ಟೇಕ್​ಗಳಾದರೂ ಶಾಟ್ ಓಕೆ ಆಗಲಿಲ್ಲ. ಕೊನೆಗೆ ತಾಳ್ಮೆ ಕಳೆದುಕೊಂಡ ನಿರ್ದೇಶಕ ರಾಜು, ಏನಮ್ಮ ಈಗ ನೀನು ಕಿಸ್ ಮಾಡುತ್ತೀಯೋ ಇಲ್ಲ ನರೇಶ್​ಗೆ ನಾನೇ ಕಿಸ್ ಮಾಡಲಾ ಎಂದರು ಆಗ ಪವಿತ್ರಾ ಕಿಸ್ ಮಾಡಿದರು ಎಂದು ವಿವರಿಸಿದ್ದಾರೆ.

ಮಳ್ಳಿ ಪೆಳ್ಳಿ ಸಿನಿಮಾ, ನರೇಶ್ ಹಾಗೂ ಪವಿತ್ರಾರ ಬಾಳಿನಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನು ಇರಿಸಿಕೊಂಡೇ ಮಾಡಲಾಗಿದೆ. ನರೇಶ್​ರ ಮೂರು ಮದುವೆಗಳು, ಪವಿತ್ರಾ ಹಾಗೂ ನರೇಶ್ ಪ್ರೇಮಕತೆಗಳೇ ಸಿನಿಮಾದ ಕತೆ. ಸಿನಿಮಾವು ಮೇ 26ಕ್ಕೆ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:50 pm, Thu, 25 May 23

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..