AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mumbaikar: ‘ಜಿಯೋ ಸಿನಿಮಾ’ಒಟಿಟಿಯಲ್ಲಿ ಉಚಿತವಾಗಿ ಲಭ್ಯವಾಗಲಿದೆ ವಿಜಯ್​ ಸೇತುಪತಿ ನಟನೆಯ ಹೊಸ ಸಿನಿಮಾ ‘ಮುಂಬೈಕರ್​’

Vijay Sethupathi: ‘ಮುಂಬೈಕರ್​’ ಚಿತ್ರದಲ್ಲಿ ವಿಜಯ್​ ಸೇತುಪತಿ ಜೊತೆಗೆ ವಿಕ್ರಾಂತ್​ ಮೆಸ್ಸಿ ಕೂಡ ನಟಿಸಿದ್ದಾರೆ. ಜೂನ್​ 2ರಿಂದ ‘ಮುಂಬೈಕರ್​’ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

Mumbaikar: ‘ಜಿಯೋ ಸಿನಿಮಾ’ಒಟಿಟಿಯಲ್ಲಿ ಉಚಿತವಾಗಿ ಲಭ್ಯವಾಗಲಿದೆ ವಿಜಯ್​ ಸೇತುಪತಿ ನಟನೆಯ ಹೊಸ ಸಿನಿಮಾ ‘ಮುಂಬೈಕರ್​’
ವಿಜಯ್​ ಸೇತುಪತಿ
ಮದನ್​ ಕುಮಾರ್​
|

Updated on: May 25, 2023 | 6:14 PM

Share

ನಟ ವಿಜಯ್​ ಸೇತುಪತಿ (Vijay Sethupathi) ಅವರು ದಕ್ಷಿಣ ಭಾರತದಲ್ಲಿ ಸಖತ್​ ಫೇಮಸ್​ ಆಗಿದ್ದಾರೆ. ಈಗ ಅವರು ಬಾಲಿವುಡ್​ಗೂ ಕಾಲಿಟ್ಟಿದ್ದಾರೆ. ಅವರು ನಟಿಸಿದ ಮೊದಲ ಹಿಂದಿ ಸಿನಿಮಾ ‘ಮುಂಬೈಕರ್​’ (Mumbaikar) ನೇರವಾಗಿ ಒಟಿಟಿ ಮೂಲಕ ಬಿಡುಗಡೆ ಆಗಲಿದೆ. ‘ಜೀಯೋ ಸಿನಿಮಾ’ದಲ್ಲಿ (Jio Cinema) ಈ ಚಿತ್ರ ಸ್ಟ್ರೀಮ್​ ಆಗಲಿದೆ. ಈ ಚಿತ್ರದಲ್ಲಿ ವಿಜಯ್​ ಸೇತುಪತಿ ಜೊತೆಗೆ ವಿಕ್ರಾಂತ್​ ಮೆಸ್ಸಿ ಕೂಡ ನಟಿಸಿದ್ದಾರೆ. ಜೂನ್​ 2ರಿಂದ ‘ಮುಂಬೈಕರ್​’ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಖ್ಯಾತ ಛಾಯಾಗ್ರಾಹಕ ಸಂತೋಷ್​ ಶಿವನ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ಇದು ತಮಿಳಿನ ‘ಮಾನಗರಂ’ ಸಿನಿಮಾದ ಹಿಂದಿ ರಿಮೇಕ್​. ಮೂಲ ಚಿತ್ರಕ್ಕೆ ಲೋಕೇಶ್​ ಕನಗರಾಜ್​ ಅವರು ನಿರ್ದೇಶನ ಮಾಡಿದ್ದರು.

ಹೈಪರ್​ ಲಿಂಕ್​ ರೀತಿಯ ಕಥಾಹಂದರ ‘ಮುಂಬೈಕರ್​’ ಸಿನಿಮಾದಲ್ಲಿದೆ. ‘ಜಿಯೋ ಸಿನಿಮಾ’ದಲ್ಲಿ ಈ ಚಿತ್ರ ರಿಲೀಸ್​ ಆಗಲಿದೆ ಎಂಬುದನ್ನು ತಿಳಿಸಲು ಹೊಸ ಟೀಸರ್​ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ವಿಜಯ್​ ಸೇತುಪತಿ ಜೊತೆ ನಟಿಸಿದ್ದಕ್ಕೆ ವಿಕ್ರಾಂತ್​ ಮೆಸ್ಸಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಸಂತೋಷ್​ ಶಿವನ್​ ಅವರ ಕೆಲಸವನ್ನು ವಿಕ್ರಾಂತ್​ ಮೆಸ್ಸಿ ಕೊಂಡಾಡಿದ್ದಾರೆ. ಒಟಿಟಿಯಲ್ಲಿ ಈ ಸಿನಿಮಾ ನೋಡಿದ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಮೊದಲ ಲಾಕ್​ ಡೌನ್​ ಬಳಿಕ ಪ್ರೇಕ್ಷಕರಲ್ಲಿ ಒಟಿಟಿ ಬಳಕೆ ಜಾಸ್ತಿ ಆಯಿತು. ಹಲವು ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಹೊಸ ಸಿನಿಮಾಗಳನ್ನು ಸ್ಟ್ರೀಮ್​ ಮಾಡುವ ಮೂಲಕ ಜನರನ್ನು ಸೆಳೆಯಲು ಎಲ್ಲ ಒಟಿಟಿಗಳು ಪ್ರಯತ್ನಿಸುತ್ತಿವೆ. ಈ ಸಾಲಿಗೆ ‘ಜಿಯೋ ಸಿನಿಮಾ’ ಕೂಡ ಸೇರ್ಪಡೆ ಆಗಿದೆ. ಇದರಲ್ಲಿ ಹಲವು ಸಿನಿಮಾಗಳು ಲಭ್ಯವಾಗಿವೆ. ಈಗ ಹೊಸದೊಂದು ಸಿನಿಮಾ ಸೇರ್ಪಡೆ ಆಗುತ್ತಿದೆ. ‘ವಿಕ್ರಮ್‌ ವೇದ’ ಸಿನಿಮಾದ ಪ್ರೀಮಿಯರ್‍ ನಂತರ, ಜಿಯೋ ಸಿನಿಮಾ ಥ್ರಿಲ್ಲಿಂಗ್ ಆ್ಯಕ್ಷನ್​ ಡ್ರಾಮಾ ‘ಇನ್‌ಸ್ಟೆಕ್ಟರ್ ಅವಿನಾಶ್‌’ ಚಿತ್ರದ ಪ್ರೀಮಿಯರ್​ ಮಾಡಿತು. ಪ್ರತಿಭಾವಂತ ನಟ ರಣದೀಪ್ ಹೂಡಾ ಅವರು ಆ ಸಿನಿಮಾದಲ್ಲಿ ಇನ್‌ಸ್ಟೆಕ್ಟರ್ ಅವಿನಾಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಮೇ 18ರಿಂದ ಈ ಸಿನಿಮಾ ಉಚಿತವಾಗಿ ಬಿತ್ತರ ಆಗುತ್ತಿದೆ.

ಇದನ್ನೂ ಓದಿ: ‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

ಲವ್​ ಯೂ ಅಭಿ:

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಿಕ್ರಮ್​ ರವಿಚಂದ್ರನ್​ ಮತ್ತು ಅದಿತಿ ಪ್ರಭುದೇವ ಅವರು ಇದೇ ಮೊದಲ ಬಾರಿಗೆ ವೆಬ್​ ಸಿರೀಸ್​ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಇವರಿಬ್ಬರು ಜೊತೆಯಾಗಿ ಒಂದು ವೆಬ್​ ಸರಣಿಯಲ್ಲಿ ನಟಿಸಿದ್ದಾರೆ. ‘ಲವ್​ ಯೂ ಅಭಿ’ ಎಂಬುದು ಇದರ ಶೀರ್ಷಿಕೆ. ‘ಜಿಯೋ ಸಿನಿಮಾ’ ಮೂಲಕ ಇದು ಪ್ರಸಾರ ಆಗುತ್ತಿದೆ. ಕನ್ನಡದಲ್ಲಿ ವೆಬ್ ಸಿರೀಸ್​ಗಳ ಸಂಖ್ಯೆ ಕಡಿಮೆ. ಆ ಕೊರತೆಯನ್ನು ನೀಗಿಸುವ ರೀತಿಯಲ್ಲಿ ‘ಲವ್​ ಯೂ ಅಭಿ’ ಸೇರ್ಪಡೆ ಆಗಿದೆ. ಅಂದಹಾಗೆ, ಇದನ್ನು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ವೀಕ್ಷಿಸಬಹುದು. ಮೇ 19ರಂದು ಈ ವೆಬ್​ ಸಿರೀಸ್​ ಬಿಡುಗಡೆ ಆಗಿದೆ. ಕಾಳಿ ವೇಲಾಯುಧಂ ನಿರ್ಮಾಣ ಮಾಡಿ, ನಿರ್ದೇಶಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!