Sign In

By signing in or creating an account, you agree with Associated Broadcasting Company's Terms & Conditions and Privacy Policy.

Aparoopa Movie: ‘ಅಪರೂಪ’ದ ಕಥೆ ಹೇಳ್ತಾರೆ ‘ಅರಸು’ ಡೈರೆಕ್ಟರ್​ ಮಹೇಶ್​ ಬಾಬು; ಫ್ಯಾಮಿಲಿಗೂ ಪ್ರೇಮಿಗಳಿಗೂ ಮನರಂಜನೆಯ ಭರವಸೆ

ಅನುಭವಿ ನಿರ್ದೇಶಕ ಮಹೇಶ್​ ಬಾಬು ಅವರು ‘ಅಪರೂಪ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾದ ವಿಶೇಷತೆಗಳ ಬಗ್ಗೆ ಅವರು ಮಾತನಾಡಿದ್ದಾರೆ.

Aparoopa Movie: ‘ಅಪರೂಪ’ದ ಕಥೆ ಹೇಳ್ತಾರೆ ‘ಅರಸು’ ಡೈರೆಕ್ಟರ್​ ಮಹೇಶ್​ ಬಾಬು; ಫ್ಯಾಮಿಲಿಗೂ ಪ್ರೇಮಿಗಳಿಗೂ ಮನರಂಜನೆಯ ಭರವಸೆ
ಮಹೇಶ್​ ಬಾಬು, ಸುಘೋಷ್​, ಹೃತಿಕಾ
Follow us
ಮದನ್​ ಕುಮಾರ್​
|

Updated on: Jul 13, 2023 | 4:17 PM

‘ಅರಸು’, ‘ಆಕಾಶ್‌’, ‘ಅಜಿತ್‌’, ‘ಅತಿರಥ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ ಮಹೇಶ್​ ಬಾಬು (Mahesh Babu) ಅವರ ಈಗೊಂದು ಅಪರೂಪದ ಕಹಾನಿಯನ್ನು ಜನರ ಮುಂದೆ ಇಡುತ್ತಿದ್ದಾರೆ. ಅವರು ನಿರ್ದೇಶನ ಮಾಡಿರುವ ಹೊಸ ಸಿನಿಮಾದ ಶೀರ್ಷಿಕೆಯೇ ‘ಅಪರೂಪ’. ಈ ಸಿನಿಮಾದಲ್ಲಿ ಹೊಸ ಕಲಾವಿದರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಸುಘೋಷ್​ ಮತ್ತು ಹೃತಿಕಾ ಅವರು ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಕೆ.ಆರ್​. ಮಹೇಶ್​ ನಿರ್ಮಾಣದ ‘ಅಪರೂಪ’ ಸಿನಿಮಾ (Aparoopa Movie) ಜುಲೈ 14ರಂದು ಬಿಡುಗಡೆ ಆಗಲಿದೆ. ಈ ಪ್ರಯುಕ್ತ ‘ಟಿವಿ9 ಕನ್ನಡ ಡಿಜಿಟಲ್​’ ಜೊತೆ ಮಹೇಶ್​ ಬಾಬು ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಸಿನಿಮಾಗಳಲ್ಲಿ ಪ್ರೇಕ್ಷಕರು ಲವ್​ ಸ್ಟೋರಿ ಬಯಸುತ್ತಾರೆ. ‘ಅಪರೂಪ’ ಚಿತ್ರದ ಕಥೆ ಹುಟ್ಟಿದ್ದು ಹೇಗೆ?

ನಮ್ಮ ತಂಡದ ಮನು ಕಲ್ಹಾಡಿ ಅವರ ಒನ್​ ಲೈನ್​ ಕತೆ ಹೇಳಿದರು. ಅದು ಇಷ್ಟವಾಯ್ತು. ಅದಕ್ಕೆ ಹೊಸ ರೂಪ ನೀಡಿದಾಗ ಸಿನಿಮಾಗೆ ಸೂಕ್ತ ಎನಿಸಿತು. ಹೊಸ ಕಲಾವಿದರಿಗೆ ಈ ಕಥೆ ಸ್ಯೂಟ್​ ಆಯಿತು. ಅಹಂ ಕುರಿತಾದ ಕಥೆ ಇದು. ಇದರಲ್ಲಿ ಲವ್​, ಸೆಂಟಿಮೆಂಟ್​, ಫೀಲಿಂಗ್ಸ್​ ಕೂಡ ಇವೆ. ಆದರೆ ಯಾವುದನ್ನೂ ಬಲವಂತಕ್ಕೆ ತುರುಕಿಲ್ಲ. ಯಾವುದಕ್ಕೆ ಎಷ್ಟು ಮಹತ್ವ ನೀಡಬೇಕೋ ಅಷ್ಟು ನೀಡಿದ್ದೇವೆ. ಒಟ್ಟಿನಲ್ಲಿ ಸಿನಿಮಾ ರಿಚ್​ ಆಗಿ ಮೂಡಿಬಂದಿದೆ.

ಈ ಸಿನಿಮಾದಲ್ಲಿ ಹೊಸ ಕಲಾವಿದರು ಹೇಗೆ ನಟಿಸಿದ್ದಾರೆ?

ಅದನ್ನು ಜನರು ನೋಡಿ ಹೇಳಬೇಕು. ಹೊಸಬರು ಎಂದಾಗ ಸಣ್ಣ ಪುಟ್ಟ ತಪ್ಪುಗಳು ಇರಬಹುದು. ಹಾಗಿದ್ದರೂ ನಟ ಸುಘೋಷ್​ ಮತ್ತು ನಟಿ ಹೃತಿಕಾ ಅವರು ಚೆನ್ನಾಗಿ ನಟಿಸಿದ್ದಾರೆ. ಡ್ಯಾನ್ಸ್​ ಮುಂತಾದ ತರಬೇತಿ ಪಡೆದುಕೊಂಡು ನಟಿಸಿದ್ದರಿಂದ ಅವರು ಉತ್ತಮ ಪರ್ಫಾರ್ಮೆನ್ಸ್​ ನೀಡಿದ್ದಾರೆ. ಜನರ ಪ್ರತಿಕ್ರಿಯೆ ತಿಳಿಯಲು ಕಾದಿದ್ದೇನೆ.

ನೀವು ಮತ್ತೆ ಮತ್ತೆ ಹೊಸಬರ ಜೊತೆ ಸಿನಿಮಾ ಮಾಡಲು ಕಾರಣ?

ನಾನು ಎಲ್ಲರ ಜೊತೆಗೂ ಸಿನಿಮಾ ಮಾಡಿದ್ದೇನೆ. ಹೊಸಬರು-ಹಳಬರು ಎಂಬ ಭೇದ ಇಲ್ಲ. ಸ್ಟಾರ್​ ನಟರು ನನ್ನ ಜೊತೆ ಚೆನ್ನಾಗಿಯೇ ಇದ್ದಾರೆ. ಆದರೆ ಅವರು ಬ್ಯುಸಿ. ಸ್ಟಾರ್​ ನಟರ ಕಾಲ್​ಶೀಟ್​ ಸಿಗಲು 3 ವರ್ಷ ಆಗಬಹುದು. ಅಲ್ಲಿಯತನಕ ಕಾಯಲು ನಿರ್ಮಾಪಕರು ಸಿದ್ಧರಿಲ್ಲ. ಹಾಗಾಗಿ ಹೊಸಬರ ಜೊತೆ ಸಿನಿಮಾ ಮಾಡುತ್ತೇನೆ. ಯಾರಿಗೂ ಸುಳ್ಳು ಭರವಸೆ ನೀಡಿ ಸಿನಿಮಾ ಮಾಡಬಾರದು. ಇರುವ ವಿಚಾರವನ್ನು ತಿಳಿಸಿ ಪಾರದರ್ಶಕವಾಗಿ ಕೆಲಸ ಮಾಡಬೇಕು. ಹೊಸ ನಿರ್ಮಾಪಕರಿಗೆ ಏನೇನೋ ಆಸೆ ತೋರಿಸಿ ಯಾಮಾರಿಸಬಾರದು. ಅದರಿಂದ ಚಿತ್ರರಂಗಕ್ಕೆ ಕಳಂಕ.

ಇದನ್ನೂ ಓದಿ: Meera Jasmine: ‘ಅರಸು’ ಚಿತ್ರದ ನಟಿ ಮೀರಾ ಜಾಸ್ಮಿನ್​ ಗ್ಲಾಮರಸ್​ ಫೋಟೋ ಕಂಡು ಅಭಿಮಾನಿಗಳಿಗೆ ಅಚ್ಚರಿ

‘ಅರಸು’ ಸಿನಿಮಾ ಕಾಲಕ್ಕೂ ಈಗಿನ ಕಾಲಕ್ಕೂ ಸಾಕಷ್ಟು ಬದಲಾವಣೆ ಆಗಿದೆಯಲ್ಲ?

ಹೌದು, ತುಂಬ ಬದಲಾಗಿದೆ. ಈಗ ಕೆಲವರು ಕಥೆ ಕೇಳಲು ಕೂಡ ಸಿದ್ಧರಿಲ್ಲ. ಬೇರೆ ಯಾವುದೋ ಭಾಷೆಯ ಸಿನಿಮಾದ ರೆಫರೆನ್ಸ್ ನೀಡುವ ನಿರ್ಮಾಪಕರು ಇದ್ದಾರೆ. ಹಾಗಂತ ಅದನ್ನು ತಪ್ಪು ಎಂದು ಹೇಳಲ್ಲ. ಅದು ಅವರ ದೃಷ್ಟಿಕೋನ. ಅಂತಿಮವಾಗಿ ಚಿತ್ರರಂಗದಲ್ಲಿ ಸಕ್ಸಸ್​ ಮುಖ್ಯ. ಅದಕ್ಕೆ ಉತ್ತಮವಾದ ಕಂಟೆಂಟ್​ ಬೇಕು. ಕಂಟೆಂಟ್​ ಹೇಗಿದೆ ಎಂಬುದನ್ನು ತಿಳಿಯಲು ಜನರು ಚಿತ್ರಮಂದಿರಕ್ಕೆ ಬರಬೇಕು.

ಹೊಸಬರ ಸಿನಿಮಾಗೆ ಒಟಿಟಿ ಮಾರುಕಟ್ಟೆ ಹೇಗಿದೆ?

ಒಟಿಟಿಯವರು ಬಿಸ್ನೆಸ್​ ನೋಡುತ್ತಾರೆ. ಅದು ಸಹಜ ಕೂಡ. ಹೊಸಬರ ಸಿನಿಮಾ ಚಿತ್ರಮಂದಿರಲ್ಲಿ ಉತ್ತಮ ರೀತಿಯಲ್ಲಿ ಪರ್ಫಾರ್ಮ್​ ಮಾಡಿದರೆ ಖಂಡಿತವಾಗಿಯೂ ಆ ಚಿತ್ರಕ್ಕೆ ಒಟಿಟಿಯಲ್ಲಿ ಡಿಮ್ಯಾಂಡ್​ ಬರುತ್ತದೆ.

ನಿಮ್ಮ ಮುಂದಿನ ಪ್ರಾಜೆಕ್ಟ್​?

ಮಾತುಕಥೆಗಳು ಜಾರಿಯಲ್ಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವರಮಹಾಲಕ್ಷ್ಮಿ ಹಬ್ಬದ ಸಂಬರ್ಧದಲ್ಲಿ ಅನೌನ್ಸ್​ ಮಾಡುತ್ತೇವೆ.​

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ