Aparoopa: ಜುಲೈ 14ರಂದು ಬಿಡುಗಡೆ ಆಗಲಿದೆ ‘ಅರಸು’ ನಿರ್ದೇಶಕರ ‘ಅಪರೂಪ’ ಸಿನಿಮಾ

ಪ್ರೇಮಕಥೆಗಳನ್ನು ತೆರೆಗೆ ತರುವಲ್ಲಿ ನಿರ್ದೇಶಕ ಮಹೇಶ್​ ಬಾಬು ಫೇಮಸ್​. ಈಗ ಅವರು ‘ಅಪರೂಪ’ ಸಿನಿಮಾದ ಮೂಲಕ ಒಂದು ಡಿಫರೆಂಟ್​ ಕಥೆಯನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ.

Aparoopa: ಜುಲೈ 14ರಂದು ಬಿಡುಗಡೆ ಆಗಲಿದೆ ‘ಅರಸು’ ನಿರ್ದೇಶಕರ 'ಅಪರೂಪ' ಸಿನಿಮಾ
ಸುಘೋಷ್‌, ಹೃತಿಕಾ
Follow us
ಮದನ್​ ಕುಮಾರ್​
|

Updated on: Jun 30, 2023 | 4:29 PM

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಮಹೇಶ್​ ಬಾಬು (Director Mahesh Babu) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ನಟನೆಯ ‘ಅರಸು’ ಮತ್ತು ‘ಆಕಾಶ್‌’ ಚಿತ್ರಗಳಿಗೆ ನಿರ್ದೇಶನ ಮಾಡಿದ ಅವರು ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದರು. ಆ ಸಿನಿಮಾಗಳ (Kannada Movie) ಬಗ್ಗೆ ಫ್ಯಾನ್ಸ್​ ಈಗಲೂ ಮಾತನಾಡುತ್ತಾರೆ. ಇನ್ನು ಹೊಸಬರ ಜೊತೆಗೂ ಸಿನಿಮಾ ಮಾಡುವ ಮೂಲಕ ಮಹೇಶ್​ ಬಾಬು ಅವರು ಸೈ ಎನಿಸಿಕೊಂಡಿದ್ದಾರೆ. ‘ಅಜಿತ್‌’, ‘ಅತಿರಥ’ ಮುಂತಾದ ಸಿನಿಮಾಗಳಿಗೆ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ಹೊಸ ಸಿನಿಮಾ ಮೂಡಿಬಂದಿದೆ. ಇದರ ಹೆಸರು ‘ಅಪರೂಪ’ (Aparoopa). ಇಂಥ ವಿಶೇಷವಾದ ಟೈಟಲ್​ನಲ್ಲಿ ಸಿನಿಮಾ ಸಿದ್ಧವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಲವ್​ ಸ್ಟೋರಿಗಳನ್ನು ತೆರೆಗೆ ತರುವಲ್ಲಿ ನಿರ್ದೇಶಕ ಮಹೇಶ್​ ಬಾಬು ಫೇಮಸ್​. ಈಗ ಅವರು ‘ಅಪರೂಪ’ ಸಿನಿಮಾದ ಮೂಲಕ ಒಂದು ಡಿಫರೆಂಟ್​ ಆದ ಕಥೆಯನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ. ಜುಲೈ 14ರಂದು ‘ಅಪರೂಪ’ ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೂಲಕ ನಟ ಸುಘೋಷ್‌ ಮತ್ತು ನಟಿ ಹೃತಿಕಾ ಅವರು ಕನ್ನಡ ಚಿತ್ರರಂಗಕ್ಕೆ ಹೀರೋ-ಹೀರೋಯಿನ್​ ಆಗಿ ಎಂಟ್ರಿ ನೀಡುತ್ತಿದ್ದಾರೆ.

‘ಅಪರೂಪ’ ಸಿನಿಮಾದ ಕಥೆ ಏನು?

ಸಿನಿಮಾ ಎಂದಮೇಲೆ ವಿಲನ್​ ಇರಲೇಬೇಕು. ‘ಅಪರೂಪ’ ಸಿನಿಮಾದಲ್ಲಿ ಅಹಂಕಾರವೇ ವಿಲನ್​! ನಾಯಕ ಮತ್ತು ನಾಯಕಿ ನಡುವಿನ ಅಹಂ ಎಂಬುದೇ ಈ ಕಥೆಯಲ್ಲಿ ವಿಲನ್‌ ಆಗುತ್ತದೆ. ಅದರಿಂದ ಯಾವೆಲ್ಲ ತೊಂದರೆಗಳು ಉಂಟಾಗುತ್ತವೆ ಎಂಬುದನ್ನು ‘ಅಪರೂಪ’ ಚಿತ್ರದಲ್ಲಿ ತೋರಿಸಲಾಗಿದೆ. ಆ ಕಾರಣದಿಂದ ಹೊಸ ಕಲಾವಿದರ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಚಿತ್ರರಂಗದಲ್ಲಿ ಬಿರಾದಾರ್ ಹೊಸ ಸಾಧನೆ; ವೈಜನಾಥ್​ ನಟನೆಯ 500ನೇ ಸಿನಿಮಾ ‘90 ಬಿಡಿ ಮನೀಗ್ ನಡಿ’ ಈ ವಾರ ತೆರೆಗೆ

ನಟ ಸುಘೋಷ್ ಅವರು ಮೂಲತಃ ಮಂಡ್ಯದವರು. ಚಿಕ್ಕ ವಯಸ್ಸಿನಿಂದಲೇ ಬಣ್ಣದ ಲೋಕದ ಕನಸು ಕಟ್ಟಿಕೊಂಡಿದ್ದ ಅವರು ಮಹೇಶ್ ನಿರ್ದೇಶನದ ‘ಅತಿರಥ’ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದರು. ಅವರ ಅಭಿನಯ ನೋಡಿದ ಮಹೇಶ್​ ಬಾಬು ಅವರು ‘ಅಪರೂಪ’ ಸಿನಿಮಾದಲ್ಲಿ ಹೀರೋ ಆಗುವ ಚಾನ್ಸ್​ ನೀಡಿದ್ದಾರೆ. ಡ್ಯಾನ್ಸ್​ನಲ್ಲಿಯೂ ಸುಘೋಷ್​ ಪಳಗಿದ್ದಾರೆ. ಈಗಾಗಲೇ ‘ಲವ್ ಗೆ ನೋ ನೋ..’ ಎಂಬ ಗೀತೆ ವೈರಲ್ ಆಗಿದೆ. ಅಶೋಕ್, ಅವಿನಾಶ್, ಕುರಿ ಪ್ರತಾಪ್, ಅರುಣಾ ಬಾಲರಾಜ್, ದಿನೇಶ್ ಮಂಗಳೂರು, ಕಡ್ಡಿಪುಡಿ‌ ಚಂದ್ರು, ವಿಜಯ್ ಚೆಂಡೂರು, ಮೋಹನ್ ಜುನೇಜಾ ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 6 ಸಾವಿರ ಕಾಲೇಜು ವಿದ್ಯಾರ್ಥಿಗಳು ಮೆಚ್ಚಿದ ‘ನಮಸ್ತೆ ಗೋಷ್ಟ್​​’ ಸಿನಿಮಾ; ರಿಲೀಸ್​ಗೂ ಮುನ್ನ ಹೊಸ ಪ್ರಯತ್ನ

‘ಸುಗ್ಗಿ ಸಿನಿಮಾಸ್’ ಬ್ಯಾನರ್ ಮೂಲಕ ‘ಅಪರೂಪ’ ಸಿನಿಮಾ ತಯಾರಾಗಿದೆ. ಈ ಚಿತ್ರವನ್ನು ‘ಕೆಆರ್​ಜಿ ಸ್ಟುಡಿಯೋಸ್’ ವಿತರಣೆ ಮಾಡಲಿದೆ. ಪ್ರಜ್ವಲ್‌ ಪೈ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಮಾನ್ ಮಲ್ಲಿಕ್, ಅನಿರುದ್ಧ್ ಶಾಸ್ತ್ರೀ, ಸಂಗೀತಾ ರವೀಂದ್ರನಾಥ್, ಪ್ರಜ್ವಲ್ ಪೈ ಹಾಗೂ ಪುನೀತ್ ರಾಜ್​ಕುಮಾರ್ ಅವರು ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಸೂರ್ಯಕಾಂತ್‌ ಅವರು ಛಾಯಾಗ್ರಹಣ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ