Ghost Movie: ಶಿವರಾಜ್​ಕುಮಾರ್ ಜನ್ಮದಿನಕ್ಕಾಗಿ ಗುಡ್​ ನ್ಯೂಸ್​ ನೀಡಿದ ‘ಘೋಸ್ಟ್​’; ಈ ಬಾರಿಯ ಆಚರಣೆ ‘ಬಿಗ್​ ಡ್ಯಾಡಿ’ ಜೊತೆ

Big Daddy Video: ‘ಬಿಗ್​ ಡ್ಯಾಡಿ’ ವಿಡಿಯೋವನ್ನು ಜುಲೈ 12ರಂದು ರಿಲೀಸ್​ ಮಾಡಲಾಗುವುದು. ಆ ಮೂಲಕ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸುವ ಕೆಲಸ ಆಗಲಿದೆ.

Ghost Movie: ಶಿವರಾಜ್​ಕುಮಾರ್ ಜನ್ಮದಿನಕ್ಕಾಗಿ ಗುಡ್​ ನ್ಯೂಸ್​ ನೀಡಿದ ‘ಘೋಸ್ಟ್​’; ಈ ಬಾರಿಯ ಆಚರಣೆ ‘ಬಿಗ್​ ಡ್ಯಾಡಿ’ ಜೊತೆ
ಶಿವರಾಜ್​ಕುಮಾರ್​
Follow us
ಮದನ್​ ಕುಮಾರ್​
|

Updated on: Jun 30, 2023 | 1:21 PM

‘ಸೆಂಚುರಿ ಸ್ಟಾರ್​’ ಶಿವರಾಜ್​ಕುಮಾರ್​ (Shivarajkumar) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಿರ್ದೇಶಕ ಎಂ.ಜಿ. ಶ್ರೀನಿವಾಸ್​ ಜೊತೆ ಅವರು ‘ಘೋಸ್ಟ್​’ ಸಿನಿಮಾ (Ghost Movie) ಮಾಡುತ್ತಿದ್ದಾರೆ. ಸಂದೇಶ್​ ಎನ್​. ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಬಗ್ಗೆ ಬಹಳ ಹೈಪ್​ ಸೃಷ್ಟಿ ಆಗಿದೆ. ಈ ಸಿನಿಮಾದ ಪ್ರತಿ ಪೋಸ್ಟರ್​ ಕೂಡ ಗಮನ ಸೆಳೆಯುತ್ತಿದೆ. ತುಂಬ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಜೊತೆ ಅನೇಕ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಶಿವಣ್ಣನ ಬರ್ತ್​ಡೇ (Shivarajkumar Birthday) ಪ್ರಯುಕ್ತ ಜುಲೈ 12ರಂದು ಚಿತ್ರತಂಡದಿಂದ ಒಂದು ವಿಶೇಷ ವಿಡಿಯೋ ರಿಲೀಸ್​ ಆಗಲಿದೆ. ಆ ಮೂಲಕ ‘ಬಿಗ್​ ಡ್ಯಾಡಿ’ ಪರಿಚಯ ಮಾಡಿಸಲಾಗುವುದು!

ಶಿವರಾಜ್​ಕುಮಾರ್​ ಅವರ ಹುಟ್ಟುಹಬ್ಬವನ್ನು ಗ್ರ್ಯಾಂಡ್​ ಆಗಿ ಸೆಲೆಬ್ರೇಟ್​ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಅವರ ಉತ್ಸಾಹವನ್ನು ಹೆಚ್ಚಿಸುವ ರೀತಿಯಲ್ಲಿ ‘ಘೋಸ್ಟ್​’ ಸಿನಿಮಾ ತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಈ ಸಿನಿಮಾದ ‘ಬಿಗ್​ ಡ್ಯಾಡಿ’ ವಿಡಿಯೋವನ್ನು ಜುಲೈ 12ರಂದು ಬಿಡುಗಡೆ ಮಾಡಲಾಗುವುದು. ಆ ಮೂಲಕ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸುವ ಕೆಲಸ ಆಗಲಿದೆ. ಈ ವಿಡಿಯೋದಲ್ಲಿ ಶಿವರಾಜ್​ಕುಮಾರ್​ ಅವರ ಪಾತ್ರದ ಝಲಕ್​ ಕಾಣಿಸಲಿದೆ ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: Ghost Movie: ಶಿವರಾಜ್​ಕುಮಾರ್​ ನಟನೆಯ ‘ಘೋಸ್ಟ್​’ ಚಿತ್ರದ ಸೆಟ್​ಗೆ ಸಚಿವ ಮಧು ಬಂಗಾರಪ್ಪ ಭೇಟಿ; ಇಲ್ಲಿದೆ ಫೋಟೋ ಗ್ಯಾಲರಿ

ಕನ್ನಡ ಸೇರಿದಂತೆ 3 ಭಾಷೆಗಳಲ್ಲಿ ‘ಘೋಸ್ಟ್​’ ಸಿನಿಮಾ ಸಿದ್ಧವಾಗುತ್ತಿದೆ. ‘ಬಿಗ್​ ಡ್ಯಾಡಿ’ ವಿಡಿಯೋದ ರಿಲೀಸ್​ ದಿನಾಂಕದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಾಗಿನಿಂದ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಾಗಿದೆ. ಹಾಗಾಗಿ ಈ ವಿಡಿಯೋ ಸಲುವಾಗಿ ಫ್ಯಾನ್ಸ್​ ಕಾದಿದ್ದಾರೆ. ಶಿವರಾಜ್​ಕುಮಾರ್, ಜಯರಾಂ, ಸತ್ಯಪ್ರಕಾಶ್, ಅನುಪಮ್ ಖೇರ್, ದತ್ತಣ್ಣ, ಪ್ರಶಾಂತ್ ನಾರಾಯಣನ್, ಅಭಿಜಿತ್ ಸೇರಿದಂತೆ ಹಲವು ಕಲಾವಿದರು ‘ಘೋಸ್ಟ್​’ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ‘ಘೋಸ್ಟ್​’ ನಟ ಅನುಪಮ್​ ಖೇರ್​ಗೆ ಜನ್ಮದಿನದ ಸಡಗರ; 68ನೇ ವಯಸ್ಸಲ್ಲೂ ಫುಲ್​ ಆ್ಯಕ್ಟೀವ್​

‘ಸಂದೇಶ್ ಪ್ರೊಡಕ್ಷನ್ಸ್’ ಲಾಂಛನದಲ್ಲಿ ‘ಘೋಸ್ಟ್​’ ಸಿನಿಮಾ ಮೂಡಿಬರುತ್ತಿದೆ. ಈ ಹಿಂದೆ ಅನೇಕ ಸದಭಿರುಚಿಯ ಸಿನಿಮಾಗಳನ್ನು ನೀಡಿರುವ ಬ್ಯಾನರ್​ನಲ್ಲಿ ಈ ಚಿತ್ರ ಸಿದ್ಧ ಆಗುತ್ತಿರುವುದರಿಂದ ಹೈಪ್​ ಹೆಚ್ಚಾಗಿದೆ. ರಾಷ್ಟ್ರಪ್ರಶಸ್ತಿ ಪರಸ್ಕೃತ ಸಂದೇಶ್ ನಾಗರಾಜ್ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ನಿರ್ದೇಶಕ ಶ್ರೀನಿ ಅವರು ಈಗಾಗಲೇ ‘ಘೋಸ್ಟ್’ ಸಿನಿಮಾದ ಶೂಟಿಂಗ್​ ಮುಗಿಸಿದ್ದಾರೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ