AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anupam Kher Birthday: ‘ಘೋಸ್ಟ್​’ ನಟ ಅನುಪಮ್​ ಖೇರ್​ಗೆ ಜನ್ಮದಿನದ ಸಡಗರ; 68ನೇ ವಯಸ್ಸಲ್ಲೂ ಫುಲ್​ ಆ್ಯಕ್ಟೀವ್​

Happy Birthday Anupam Kher: ಹಲವು ಸಿನಿಮಾಗಳು ಅನುಪಮ್​ ಖೇರ್​ ಕೈಯಲ್ಲಿವೆ. ಆ ಪೈಕಿ ಶ್ರೀನಿ ನಿರ್ದೇಶನದ ‘ಘೋಸ್ಟ್​’, ಕಂಗನಾ ರಣಾವತ್​ ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿವೆ.

Anupam Kher Birthday: ‘ಘೋಸ್ಟ್​’ ನಟ ಅನುಪಮ್​ ಖೇರ್​ಗೆ ಜನ್ಮದಿನದ ಸಡಗರ; 68ನೇ ವಯಸ್ಸಲ್ಲೂ ಫುಲ್​ ಆ್ಯಕ್ಟೀವ್​
ಅನುಪಮ್ ಖೇರ್
ಮದನ್​ ಕುಮಾರ್​
|

Updated on:Mar 07, 2023 | 10:39 AM

Share

ಭಾರತೀಯ ಚಿತ್ರರಂಗದ ಖ್ಯಾತ ನಟ ಅನುಪಮ್​ ಖೇರ್​ ಅವರಿಗೆ ಇಂದು (ಮಾರ್ಚ್​ 7) ಹುಟ್ಟುಹಬ್ಬದ (Anupam Kher Birthday) ಸಂಭ್ರಮ. 68ನೇ ವರ್ಷಕ್ಕೆ ಕಾಲಿಟ್ಟಿರುವ ಅವರಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಬಾಲಿವುಡ್​ನಲ್ಲಿ ಅನುಪಮ್​ ಖೇರ್​ (Anupam Kher) ಅವರ ಸಾಧನೆ ದೊಡ್ಡದು. ಹಲವು ವರ್ಷಗಳಿಂದ ಅವರು ಸಕ್ರಿಯರಾಗಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇಂದಿಗೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಕನ್ನಡದ ‘ಘೋಸ್ಟ್​’ (Ghost Movie) ಚಿತ್ರದಲ್ಲಿ ಅನುಪಮ್ ಖೇರ್​ ಅವರು ನಟಿಸುತ್ತಿದ್ದಾರೆ. ಶ್ರೀನಿ ನಿರ್ದೇಶನದ ಈ ಚಿತ್ರತಂಡದಿಂದಲೂ ಅನುಪಮ್​ ಖೇರ್​ಗೆ ವಿಶ್​ ಮಾಡಲಾಗಿದೆ.

ದೆಹಲಿಯ ‘ನ್ಯಾಷನಲ್​ ಸ್ಕೂಲ್​ ಆಫ್​ ಡ್ರಾಮಾ’ದಲ್ಲಿ ನಟನೆ ಕಲಿತುಬಂದ ಅನುಪಮ್​ ಖೇರ್​ ಅವರು ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಬೆಳೆದುನಿಂತರು. ಬಾಲಿವುಡ್​ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್​ ಮುಂತಾದ ಭಾಷೆಯ ಸಿನಿಮಾಗಳಲ್ಲೂ ನಟಿಸಿ ಫೇಮಸ್​ ಆದರು. 1982ರಿಂದಲೂ ಅವರು ಸಕ್ರಿಯರಾಗಿದ್ದಾರೆ. ಇಂದಿಗೂ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
Breast Cancer: ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್;​ ಎಮೋಷನಲ್​ ವಿಡಿಯೋ ಹಂಚಿಕೊಂಡ ಅನುಪಮ್​ ಖೇರ್​
Image
‘ದಿ ಕಾಶ್ಮೀರ್​ ಫೈಲ್ಸ್​’ ನಟನ ಅಚ್ಚರಿಯ ಬದಲಾವಣೆ; ಹೇಗಿದ್ದ ಅನುಪಮ್​ ಖೇರ್​ ಹೇಗಾದ್ರು ನೋಡಿ
Image
ಹೃತಿಕ್​ ರೋಷನ್​ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್​ ಖೇರ್​ ಫಿಟ್ನೆಸ್​; ಇಲ್ಲಿದೆ ಫೋಟೋ
Image
ಖ್ಯಾತ ನಟ ಅನುಪಮ್​ ಖೇರ್​​ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ಪ್ರದಾನ

ಇದನ್ನೂ ಓದಿ: Breast Cancer: ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್;​ ಎಮೋಷನಲ್​ ವಿಡಿಯೋ ಹಂಚಿಕೊಂಡ ಅನುಪಮ್​ ಖೇರ್​

ತಮ್ಮದೇ ನಟನಾ ಶಾಲೆಯನ್ನು ಅನುಪಮ್​ ಖೇರ್​ ನಡೆಸುತ್ತಿದ್ದಾರೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇವರ ಶಾಲೆಯಲ್ಲಿ ಅಭಿನಯದ ಪಾಠ ಕಲಿತಿದ್ದಾರೆ. ಇನ್ನು, ಸೋಶಿಯಲ್​ ಮೀಡಿಯಾದಲ್ಲೂ ಅನುಪಮ್ ಖೇರ್​ ಅವರು ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ಸಿನಿಮಾ ಮತ್ತು ದಿನಚರಿ ಬಗ್ಗೆ ಆಗಾಗ ಅವರು ಅಪ್​ಡೇಟ್​ ನೀಡುತ್ತಾ ಇರುತ್ತಾರೆ.

ಇದನ್ನೂ ಓದಿ: Emergency: ನಟ ಅನುಪಮ್​ ಖೇರ್​ಗೆ ‘ಎಮರ್ಜೆನ್ಸಿ’ ಚಿತ್ರದಲ್ಲೊಂದು ಮುಖ್ಯ ಪಾತ್ರ; ಇಲ್ಲಿದೆ ಫಸ್ಟ್​ ಲುಕ್​

2022ರಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತೆರೆ ಕಂಡಿತು. ಈ ಚಿತ್ರದಲ್ಲಿ ಅನುಪಮ್​ ಖೇರ್​ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರೇಕ್ಷಕರಿಗೆ ಆ ಪಾತ್ರ ಸಖತ್​ ಇಷ್ಟ ಆಯಿತು. ಅನುಪಮ್​ ಖೇರ್​ ಅವರ ವೃತ್ತಿ ಜೀವನದ ಬಹುದೊಡ್ಡ ಸಿನಿಮಾವಾಗಿ ‘ದಿ ಕಾಶ್ಮೀರ್​ ಫೈಲ್ಸ್​’ ಹೊರಹೊಮ್ಮಿತು. ಆ ಚಿತ್ರದ ಯಶಸ್ಸಿನ ಬಳಿಕ ಅವರ ಡಿಮ್ಯಾಂಡ್​ ಹೆಚ್ಚಾಯಿತು.

ಇದನ್ನೂ ಓದಿ: Alia Bhatt: ಆಲಿಯಾ ಭಟ್​ಗೆ ಅನುಪಮ್​ ಖೇರ್​ ಮೆಚ್ಚುಗೆ; ಕಂಗನಾ ಪ್ರತಿಕ್ರಿಯೆ ತಿಳಿಯಲು ಕಾದಿರುವ ನೆಟ್ಟಿಗರು

ಸಿನಿಮಾ ಮಾತ್ರವಲ್ಲದೇ ಬೇರೆ ಕಾರಣಗಳಿಂದಲೂ ಅನುಪಮ್​ ಖೇರ್​ ಅವರು ಸುದ್ದಿ ಆಗುತ್ತಾರೆ. ದೇಶದಲ್ಲಿನ ಅನೇಕ ಬೆಳವಣಿಗೆಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ಅದರಿಂದ ಕೆಲವೊಮ್ಮೆ ವಿವಾದ ಆಗಿದ್ದು ಕೂಡ ಉಂಟು. ನರೇಂದ್ರ ಮೋದಿ ಸರ್ಕಾರದ ಪರವಾಗಿ ಅವರು ಮೊದಲಿನಿಂದಲೂ ಧ್ವನಿ ಎತ್ತುತ್ತಿದ್ದಾರೆ.

ಹಲವು ಸಿನಿಮಾಗಳು ಅನುಪಮ್​ ಖೇರ್​ ಕೈಯಲ್ಲಿವೆ. ಆ ಪೈಕಿ ಶ್ರೀನಿ ನಿರ್ದೇಶನದ ‘ಘೋಸ್ಟ್​’, ಕಂಗನಾ ರಣಾವತ್​ ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:39 am, Tue, 7 March 23

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More