Updated on:Jun 27, 2023 | 10:33 AM
ಹಿರಿಯ ನಟ, ರಾಷ್ಟ್ರಪ್ರಶಸ್ತಿ ವಿಜೇತ ವೈಜನಾಥ್ ಬಿರಾದಾರ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ, ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ.
ಬಿರಾದಾರ್ ಹೆಸರಲ್ಲಿ ಹೊಸ ದಾಖಲೆ ಸೇರ್ಪಡೆ ಆಗಿದೆ. ಈ ವಾರ ಅವರ ನಟನೆಯ 500ನೇ ಸಿನಿಮಾ ರಿಲೀಸ್ ಆಗುತ್ತಿದೆ. ಈ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ ಅವರು.
‘90 ಬಿಡಿ ಮನೀಗ್ ನಡಿ’ ಅನ್ನೋದು ಬಿರಾದಾರ್ ಅವರ 500ನೇ ಸಿನಿಮಾ. ಈ ಚಿತ್ರ ಗುರುವಾರ (ಜೂನ್ 29) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಾಗರಾಜ್ ಅರೆಹೊಳೆ ಹಾಗೂ ಉಮೇಶ್ ಬಾದರದಿನ್ನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಅಮ್ಮ ಟಾಕೀಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ತಾರಾಬಳಗ ದೊಡ್ಡದಾಗಿದೆ. ಬಿರಾದಾರ್ ಜೊತೆ ಪ್ರೀತು ಪೂಜಾ, ಕರಿಸುಬ್ಬು, ಅಭಯ್, ನೀತಾ, ವಿವೇಕ್ ಹೊಸಕೋಟೆ, ಆರ್.ಡಿ ಬಾಬು, ಮುರುಳಿ, ಧರ್ಮ, ಪ್ರಶಾಂತ್ ಸಿದ್ದಿ, ಮುಂತಾದವರು ನಟಿಸಿದ್ದಾರೆ.
ವೆಂಕಟೇಶ್ ಯುಡಿವಿ ಸಂಕಲನ, ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೀರ್ ಸಮರ್ಥ್ ಹಿನ್ನೆಲೆ ಸಂಗೀತ, ರಾಕಿ ರಮೇಶ್ ಸಾಹಸ ನಿರ್ದೇಶನ ಇದೆ. ಶಿವು ಭೇರಗಿ ಹಾಗೂ ಕಿರಣ್ ಶಂಕರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
500 ಚಿತ್ರಗಳಲ್ಲಿ ನಟಿಸೋದು ಎಂದರೆ ಅದು ಸಣ್ಣ ವಿಚಾರ ಅಲ್ಲವೇ ಅಲ್ಲ. ಅವರ ಚಿತ್ರ ಯಶಸ್ಸು ಕಾಣಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
Published On - 10:32 am, Tue, 27 June 23