Updated on: Jun 27, 2023 | 9:30 AM
ನಟಿ ದಿವ್ಯಾ ಉರುಡುಗ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋಸ್ ವೈರಲ್ ಆಗಿದೆ.
ಬಿಗ್ ಬಾಸ್ಗೆ ಕಾಲಿಟ್ಟ ಬಳಿಕ ಅನೇಕರ ಜನಪ್ರಿಯತೆ ಹೆಚ್ಚುತ್ತದೆ. ಅದೇ ರೀತಿ ದಿವ್ಯಾ ಉರುಡುಗ ಅವರ ಖ್ಯಾತಿ ಕೂಡ ಹೆಚ್ಚಿದೆ. ಎರಡು ಬಾರಿ ಅವರು ಬಿಗ್ ಬಾಸ್ಗೆ ಕಾಲಿಟ್ಟಿದ್ದರು.
ಈಗ ದಿವ್ಯಾ ಉರುಡುಗ ಅವರು ಹೊಸ ಫೋಟೋಶೂಟ್ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಇದರ ಜೊತೆಗೆ ಎರಡು ಪ್ರಶ್ನೆ ಇಟ್ಟಿದ್ದಾರೆ.
ದಿವ್ಯಾ ಉರುಡುಗ ಅವರು ಅರವಿಂದ್ ಕೆಪಿಯನ್ನು ಪ್ರೀತಿಸುತ್ತಿದ್ದಾರೆ. ಇವರ ಮದುವೆ ಯಾವಾಗ ಅನ್ನೋದು ಅಭಿಮಾನಿಗಳ ಮೊದಲ ಪ್ರಶ್ನೆ.
ದಿವ್ಯಾ ಹಾಗೂ ಅರವಿಂದ್ ಕೆಪಿ ಒಟ್ಟಾಗಿ ‘ಅರ್ದಂಬರ್ಧ ಪ್ರೇಮ ಕಥೆ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ ದಿನಾಂಕಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಈ ಎರಡೂ ಪ್ರಶ್ನೆಗೆ ದಿವ್ಯಾ ಕಡೆಯಿಂದ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ದಿವ್ಯಾ ಹೊಸ ಅಪ್ಡೇಟ್ ನೀಡಲಿ ಎಂದು ಫ್ಯಾನ್ಸ್ ಕಾದಿದ್ದಾರೆ.
ಹೊಸ ಫೋಟೋಶೂಟ್ನಲ್ಲಿ ಮಿಂಚಿದ ದಿವ್ಯಾ ಉರುಡುಗ