Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಶಾ ನರಸಪ್ಪ ಮನೆ ಬಳಿ ಹಣಕಳೆದುಕೊಂಡವರ ಗಲಾಟೆ, 1 ಕೋಟಿಗೂ ಹೆಚ್ಚು ವಂಚನೆ ಶಂಕೆ

Nisha Narasappa: ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ಲಕ್ಷಾಂತರ ಹಣ ವಂಚನೆ ಮಾಡಿದ್ದ ನಿಶಾ ನರಸಪ್ಪ ಅವರ ವಿರುದ್ಧ ಇನ್ನಷ್ಟು ದೂರುಗಳು ದಾಖಲಾಗಿವೆ.

ನಿಶಾ ನರಸಪ್ಪ ಮನೆ ಬಳಿ ಹಣಕಳೆದುಕೊಂಡವರ ಗಲಾಟೆ, 1 ಕೋಟಿಗೂ ಹೆಚ್ಚು ವಂಚನೆ ಶಂಕೆ
ನಿಶಾ ನರಸಪ್ಪ
Follow us
ಮಂಜುನಾಥ ಸಿ.
|

Updated on: Jul 16, 2023 | 3:51 PM

ಮಾಸ್ಟರ್ ಆನಂದ್ (Master Anand) ಪುತ್ರಿ, ಬಾಲಕಲಾವಿದೆ ವಂಶಿಕಾ (Vamshika) ಹೆಸರು ಹೇಳಿಕೊಂಡು ಲಕ್ಷಾಂತರ ಹಣ ವಂಚನೆ ಮಾಡಿರುವ ಪ್ರಕರಣ ಕೆಲವು ದಿನಗಳ ಹಿಂದಷ್ಟೆ ಬೆಳಕಿಗೆ ಬಂದು, ನಿಶಾ ಹೆಸರಿನ ಯುವತಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಪ್ರಕರಣ ಬಯಲಾದ ಬಳಿಕ ನಿಶಾ ನರಸಪ್ಪ ಮಾಡಿದ್ದ ಇನ್ನೂ ಹಲವು ವಂಚನೆಗಳು ಬಯಲಿಗೆ ಬಂದಿದ್ದು, ನಿಶಾಗೆ ಹಣ ಕೊಟ್ಟು ಕಳೆದುಕೊಂಡ ಹಲವರು ನಿಶಾ ನರಸಪ್ಪ ಮನೆಯ ಬಳಿ ಹೋಗಿ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಸುಮಾರು ಎರಡು ಕೋಟಿ ರೂಪಾಯಿ ವಂಚನೆಯನ್ನು ನಿಶಾ ನರಸಪ್ಪ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ನಿಶಾ ವಿರುದ್ಧ ದೂರು ದಾಖಲಾಗಿ ಸದಾಶಿವ ನಗರ ಪೊಲೀಸರು ನಿಶಾರನ್ನು ಬಂಧಿಸಿದ ಬಳಿಕ ನಿಶಾರಿಂದ ಮೋಸ ಹೋದ ಹಲವರು ಠಾಣೆಗೆ ಭೇಟಿ ನೀಡಿದ್ದಾರೆ. ಇನ್ನು ಕೆಲವರು ನಿಶಾ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ನಿಶಾರ ಕುಟುಂಬದವರೊಡನೆ ವಾಗ್ವಾದ ನಡೆಸಿದ್ದು ಹಣ ಮರಳಿಸುವಂತೆ ಒತ್ತಾಯಿಸಿದ್ದಾರೆ.

ನಿಶಾರ ಬಂಧನದ ಬಳಿಕ, ಈ ಯುವತಿ ಹಲವಾರು ಪೋಷಕರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇವೆಂಟ್ ಮಾಡುವ ಹೆಸರಲ್ಲಿ ಹಣ ಪಡೆದುಕೊಂಡು, ಆ ಬಳಿಕ ಮಕ್ಕಳನ್ನು ಟಿವಿ ಶೋಗೆ ಆಯ್ಕೆ ಮಾಡಿಸುವುದಾಗಿ, ಫ್ಯಾಷನ್ ಶೋಗೆ ಆಯ್ಕೆ ಮಾಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣವನ್ನು ನಿಶಾ ಹಲವರಿಂದ ಪಡೆದುಕೊಂಡಿದ್ದಾರೆ. ನಿಶಾರಿಂದ ಮೋಸ ಹೋದ ಕೆಲವರು ಈ ಹಿಂದೆ ಸಹ ಪೊಲೀಸರಿಗೆ ದೂರು ನೀಡಿದ್ದರು. ಇನ್ನು ಕೆಲವರು ನಿಶಾರ ಮನೆಗೆ ಹೋಗಿ ಗಲಾಟೆ ಸಹ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಕೆಲವು ಚಿತ್ರಗಳು, ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.

ಇದನ್ನೂ ಓದಿ:ವಂಶಿಕಾ ಹೆಸರಿನಲ್ಲಿ ವಂಚನೆ ಎಸಗಿದ ಆರೋಪಿ ನಿಶಾ ನರಸಪ್ಪ ವಿರುದ್ಧ ದಾಖಲಾದ ಮತ್ತಷ್ಟು ದೂರುಗಳು

ನಿಶಾ ಮೇಲೆ ಈ ಹಿಂದೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ಹಾಗೂ ಯಶವಂತಪುರ ಪೊಲೀಸ್ ಠಾಣೆಗಳಲ್ಲಿಯೂ ದೂರುಗಳು ದಾಖಲಾಗಿವೆ. ನಿಶಾ ತಮ್ಮ ಸಹೋದರನಿಂದ ಇಬ್ಬರಿಗೆ ಜೀವ ಬೆದರಿಕೆ ಹಾಕಿದ ಕುರಿತಾಗಿಯೂ ದೂರು ದಾಖಲಾಗಿತ್ತು. ಆದರೆ ಈಗ ವಂಶಿಕಾ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದ ಬಳಿಕವಷ್ಟೆ ನಿಶಾರ ಬಂಧನವಾಗಿದೆ. ವಂಚನೆ ಹಣದಿಂದ ಐಶಾರಾಮಿ ಜೀವನ್ನು ನಿಶಾ ನರಸಪ್ಪ ಕಳೆಯುತ್ತಿದ್ದರು, ದುಬಾರಿ ಇನ್ನೋವಾ ಕಾರನ್ನು ಸಹ ನಿಶಾ ಖರೀದಿಸಿದ್ದರು.

ಮಾಸ್ಟರ್ ಆನಂದ್ ಪುತ್ರಿ ವಂಶಿಕಾರನ್ನು ಇವೆಂಟ್ ಒಂದಕ್ಕೆ ಕರೆದುಕೊಂಡು ಬರುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ ನಿಶಾ ಹಣ ಪಡೆದಿದ್ದರಂತೆ. ಈ ವಿಷಯ ತಿಳಿದು ಮಾಸ್ಟರ್ ಆನಂದ್ ಹಾಗೂ ಅವರ ಪತ್ನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಶಾರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್