‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾಕ್ಕೆ ರಮ್ಯಾ ಪಡೆಯಲಿರುವ ಸಂಭಾವನೆ ಎಷ್ಟು?

Hostel hudugaru bekagiddare: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಕ್ಕೆ ರಮ್ಯಾ ಪಡೆಯಲಿರುವ ಸಂಭಾವನೆ ಎಷ್ಟು? ಒಪ್ಪಂದದಂತೆ ಸಂಭಾವನೆ ಸಿಗಲಿದೆಯೇ?

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಕ್ಕೆ ರಮ್ಯಾ ಪಡೆಯಲಿರುವ ಸಂಭಾವನೆ ಎಷ್ಟು?
ರಮ್ಯಾ-ಹಾಸ್ಟೆಲ್
Follow us
ಮಂಜುನಾಥ ಸಿ.
|

Updated on: Jul 20, 2023 | 9:56 PM

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ (Hostel hudugaru bekagiddare) ಸಿನಿಮಾ ಚಿತ್ರೀಕರಣ ಆರಂಭವಾದಾಗಿನಿಂದಲೂ ಸುದ್ದಿಯಲ್ಲಿದೆ. ಆರಂಭದಲ್ಲಿ ನೆಗೆಟಿವ್ ಪ್ರೊಮೋಷನ್​ಗಳ ಮೂಲಕ ಗಮನ ಸೆಳೆದಿದ್ದ ಸಿನಿಮಾ ಬಿಡುಗಡೆ ಹಂತದಲ್ಲಿ ನಿಜಕ್ಕೂ ಋಣಾತ್ಮಕತೆ ಎದುರಾದಂತಿದೆ. ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ರಮ್ಯಾ (Ramya), ಕೋರ್ಟ್ ಮೆಟ್ಟಿಲೇರಿ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ತಂದಿದ್ದರು. ಅದನ್ನೀಗ ನ್ಯಾಯಾಲಯ ತೆರವುಗೊಳಿಸಿದೆಯಾದರೂ ಪ್ರಕರಣ ಇನ್ನೂ ಮುಗಿದಿಲ್ಲ. ಈ ನಡುವೆ ಎರಡು ನಿಮಿಷದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಹಾಗೂ ಪ್ರೊಮೋಷನಲ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲು ರಮ್ಯಾಗೆ ಚಿತ್ರತಂಡ ನೀಡಲು ಒಪ್ಪಿದ್ದ ಸಂಭಾವನೆ ಗಮನ ಸೆಳೆಯುತ್ತಿದೆ.

ಸಿನಿಮಾದಲ್ಲಿ ಹಾಗೂ ಪ್ರೊಮೋಷನಲ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲು ಹಾಗೂ ಸಿನಿಮಾದ ಪ್ರಚಾರ ಸಂಬಂಧಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕು ಮಾರಾಟದಿಂದ ಬರುವ ಮೊತ್ತದಲ್ಲಿ 5% ಮೊತ್ತವನ್ನು ಸಂಭಾವನೆಯಾಗಿ ನೀಡಲು ನಿರ್ಮಾಪಕರು ಒಪ್ಪಿಕೊಂಡಿದ್ದರು. ರಮ್ಯಾ, ಚಿತ್ರೀಕರಣದಲ್ಲಿ ಭಾಗಿಯಾಗುವ ಮುನ್ನ ಆಗಿದ್ದ ಒಪ್ಪಂದದಲ್ಲಿ ಈ ವಿಷಯ ಸ್ಪಷ್ಟವಾಗಿ ನಮೂದಾಗಿತ್ತು. ಅದರಂತೆಯೇ ರಮ್ಯಾ ಸಹ ಎರಡು ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:Hostel Hudugaru Bekagiddare: ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಬಿಡುಗಡೆಗೆ ಕೋರ್ಟ್​ ಅನುಮತಿ; ರಮ್ಯಾ ಹಾಕಿದ ಕೇಸ್​ನಲ್ಲಿ ನಿಟ್ಟುಸಿರು ಬಿಟ್ಟ ಚಿತ್ರತಂಡ

ಒಪ್ಪಂದದ ಪ್ರಕಾರವೇ ರಮ್ಯಾರ ಸಿಬ್ಬಂದಿಯ ಸಂಭಾವನೆ, ಚಿತ್ರೀಕರಣ ವೆಚ್ಚಗಳನ್ನು ಸಹ ಚಿತ್ರತಂಡ ನೋಡಿಕೊಂಡಿತ್ತು. ಆದರೆ ರಮ್ಯಾರ ಅನುಮತಿಗೆ ವಿರುದ್ಧವಾಗಿ ಈ ಸಿನಿಮಾ ಮೂಲಕ ರಮ್ಯಾ ಕಮ್​ಬ್ಯಾಕ್ ಮಾಡುತ್ತಿದ್ದಾರೆ ಎಂದು ಚಿತ್ರತಂಡ ಜಾಹೀರಾತು ಮಾಡಿದ್ದು ರಮ್ಯಾರ ಅಸಮಾಧಾನಕ್ಕೆ ಕಾರಣವಾಯ್ತು. ಅದರಂತೆ ರಮ್ಯಾ, ತಾವು ಈ ಸಿನಿಮಾದ ಭಾಗವಾಗಿರಲು ಸಾಧ್ಯವಿಲ್ಲವೆಂದು, ತಮ್ಮ ನಟನೆಯ ದೃಶ್ಯಗಳನ್ನು ಸಿನಿಮಾದಿಂದ ತೆಗೆಯಿರಿ ಆದರೆ ತಾವು ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುತ್ತೇನೆಂದು ತಿಳಿಸಿದ್ದರು. ಅದಕ್ಕೆ ನಿರ್ಮಾಪಕರು ಸಹ ಒಪ್ಪಿಕೊಂಡಿದ್ದರು. ಆದರೆ ಆ ಬಳಿಕ ರಮ್ಯಾ ನಟಿಸಿದ್ದ ಭಾಗ ಸೇರಿದ ಟ್ರೈಲರ್ ಬಿಡುಗಡೆ ಮಾಡಿದ್ದಲ್ಲದೆ, ರಮ್ಯಾರ ಭಾಗಗಳು ಒಳಗೊಂಡ ಸಿನಿಮಾಕ್ಕೆ ಸಿಬಿಎಫ್​ಸಿಯಿಂದ ಪ್ರಮಾಣ ಪತ್ರವನ್ನು ಸಹ ಪಡೆದುಕೊಂಡಿದ್ದಾರೆ.

ಇದೀಗ ಪ್ರಕರಣ ನ್ಯಾಯಾಲಯದಲ್ಲಿದ್ದು, ರಮ್ಯಾ ನಟಿಸಿರುವ ದೃಶ್ಯಗಳೂ ಒಳಗೊಂಡಂತೆಯೇ ಸಿನಿಮಾ ಬಿಡುಗಡೆ ಆಗಿರುವುದರಿಂದ ಒಪ್ಪಂದದ ಪ್ರಕಾರ ರಮ್ಯಾಗೆ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳ 5% ಲಾಭಾಂಶದ ಮೊತ್ತ ಸಿಗುತ್ತದೆಯೇ? ಅಥವಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗದೇ ಇರುವುದಕ್ಕೆ ಸಂಭಾವನೆ ಸಿಗದೇ ಹೋಗುತ್ತದೆಯೇ ಕಾದು ನೋಡಬೇಕಿದೆ.

ಅಂದಹಾಗೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ಬಹುತೇಕ ಹೊಸಬರೇ ಸೇರಿಕೊಂಡು ನಿರ್ಮಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನಿತಿನ್ ಕೃಷ್ಣಮೂರ್ತಿ, ನಿರ್ಮಾಣ ಮಾಡಿರುವುದು ಗುಲ್​ಮೊಹರ್ ಫಿಲಮ್ಸ್ ಮತ್ತು ವರುಣ್, ಸಿನಿಮಾಟೊಗ್ರಫಿ ಅರವಿಂದ್ ಕಶ್ಯಪ್ ಅವರದ್ದು. ಸಿನಿಮಾದಲ್ಲಿ ರಮ್ಯಾ ಮಾತ್ರವೇ ಅಲ್ಲದೆ ರಿಷಬ್ ಶೆಟ್ಟಿ, ಲೂಸಿಯಾ ಪವನ್, ದಿಗಂತ್ ಸಹ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಟೆಲ್ ಒಂದರಲ್ಲಿ ನಡೆಯುವ ಸರಣಿ ಘಟನಾವಳಿಗಳ ಕತೆಯನ್ನು ಸಿನಿಮಾ ಒಳಗೊಂಡಿದೆ. ನಾಳೆ ಅಂದರೆ ಜುಲೈ 21ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ