AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shane Warne: ಶೇನ್ ವಾರ್ನ್​ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ..?

Shane Warne: ಶೇನ್ ವಾರ್ನ್​ ನಿಧನರಾಗಿ ವರ್ಷಗಳ ಬಳಿಕ ಇಬ್ಬರು ಹೃದ್ರೋಗ ತಜ್ಞರು ನೀಡಿರುವ ಹೇಳಿಕೆಯು ಇದೀಗ ಮತ್ತೊಮ್ಮೆ ಕೋವಿಡ್ ಎಂಆರ್‌ಎನ್‌ಎ ಲಸಿಕೆಯ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

Shane Warne: ಶೇನ್ ವಾರ್ನ್​ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ..?
Shane Warne
TV9 Web
| Edited By: |

Updated on:Jun 22, 2023 | 3:25 PM

Share

ಮಾರ್ಚ್​ 4, 2022…ಹೃದಯಾಘಾತದಿಂದ ಖ್ಯಾತ ಕ್ರಿಕೆಟಿಗ ಶೇನ್ ವಾರ್ನ್ (Shane Warne)​ ನಿಧನರಾಗಿದ್ದಾರೆ ಎಂಬ ಶಾಕಿಂಗ್ ಸುದ್ದಿಯೊಂದು ಅಪ್ಪಳಿಸಿತ್ತು. 52 ವರ್ಷದ ಆಸೀಸ್ ಸ್ಪಿನ್ ಮಾಂತ್ರಿಕನ ದಿಢೀರ್ ನಿಧನಕ್ಕೆ ಹಲವರು ಹಲವು ಕಾರಣಗಳನ್ನು ನೀಡಿದ್ದರು. ಆದರೀಗ ಶೇನ್ ವಾರ್ನ್​ ಅವರ ಹೃದಯಾಘಾತಕ್ಕೆ ಕೋವಿಡ್ 19 ಗೆ ನೀಡಿದ್ದ mRNA ಲಸಿಕೆ ಕಾರಣವಿರಬಹುದು ಎಂಬ ವಾದವನ್ನು ಮುಂದಿಟ್ಟಿದ್ದಾರೆ ಭಾರತೀಯ ಮೂಲದ ಹೃದ್ರೋಗ ತಜ್ಞ ಡಾ. ಅಸೀಮ್ ಮಲ್ಹೋತ್ರಾ ಹಾಗೂ ಡಾ ಕ್ರಿಸ್ ನೀಲ್.

ಬ್ರಿಟನ್​ನ ಹೃದ್ರೋಗಶಾಸ್ತ್ರಜ್ಞರಾದ ಡಾ. ಅಸೀಮ್ ಮಲ್ಹೋತ್ರಾ ಹಾಗೂ ಆಸ್ಟ್ರೇಲಿಯನ್ ಮೆಡಿಕಲ್ ಪ್ರೊಫೆಷನಲ್ಸ್ ಸೊಸೈಟಿಯ (AMPS) ಅಧ್ಯಕ್ಷ ಡಾ. ಕ್ರಿಸ್ ನೀಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಶೇನ್ ವಾರ್ನ್​ಗೆ ನೀಡಿದ್ದ ಕೋವಿಡ್ ಎಂಆರ್‌ಎನ್‌ಎ ಲಸಿಕೆಯಿಂದ ಹೃದಯಾಘಾತವಾಗಿರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಏಕೆಂದರೆ ಕೋವಿಡ್ ಎಂಆರ್‌ಎನ್‌ಎ ಲಸಿಕೆಯು ಪರಿಧಮನಿಯ ಸಮಸ್ಯೆಯನ್ನು ಕ್ಷೀಪ್ರ ಗತಿಯಲ್ಲಿ ವರ್ಧಿಸುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ವಿಶೇಷವಾಗಿ ಸೌಮ್ಯ ಹೃದ್ರೋಗ ಸಮಸ್ಯೆ ಇರುವವರಲ್ಲಿನ ಹೃದಯದ ಸಮಸ್ಯೆಯನ್ನು ವೇಗವಾಗಿ ಹೆಚ್ಚಿಸುತ್ತಿದೆ ಎಂದು ಇಬ್ಬರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಶೇನ್ ವಾರ್ನ್ ಅವರ ಜೀವನಶೈಲಿಯ ಬಗ್ಗೆ ಕೂಡ ಮಾತನಾಡಿದ ಡಾ ಮಲ್ಹೋತ್ರಾ, ಇತ್ತೀಚಿನ ವರ್ಷಗಳಲ್ಲಿ ಅವರು ಆರೋಗ್ಯಕರ ಜೀವನಶೈಲಿಯನ್ನು ಹೊಂದಿಲ್ಲ ಎಂದು ನಮಗೆ ತಿಳಿದಿದೆ. ಅಧಿಕ ತೂಕದ ಸಮಸ್ಯೆಯನ್ನು ಎದುರಿಸಿದ್ದರು. ಅಲ್ಲದೆ ಧೂಮಪಾನಿಯಾಗಿದ್ದರು.

ಇದಾಗ್ಯೂ ಕೋವಿಡ್ ಎಂಆರ್‌ಎನ್‌ಎ ಲಸಿಕೆ ಪಡೆದ ನನ್ನ ರೋಗಿಗಳಲ್ಲಿ ನಾನು ಗಮನಿಸಿದಂತೆ ಅವರ ಅಪಧಮನಿಗಳಲ್ಲೂ ಕೆಲವು ಸೌಮ್ಯವಾದ ಏರಿಳಿತವಿತ್ತು. ನನ್ನ ಸ್ವಂತ ತಂದೆ ಕೂಡ ಕೋವಿಡ್ ಎಂಆರ್‌ಎನ್‌ಎ ಲಸಿಕೆ ಪಡೆದ ಬಳಿಕ ಕೆಲವೇ ತಿಂಗಳಲ್ಲಿ ನಿಧನರಾದರು. ಈ ಎಲ್ಲಾ ಕಾರಣಗಳಿಂದಾಗಿ ಶೇನ್ ವಾರ್ನ್ ಕೂಡ ಇದೇ ಲಸಿಕೆಯ ಪರಿಣಾಮದಿಂದ ಹಠಾತ್ ಹೃದಯಾಘಾತಕ್ಕೆ ಒಳಗಾಗಿರುವ ಸಾಧ್ಯತೆಯಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

ಈ ಲಸಿಕೆಗಳಿಂದ ಸಾಮಾನ್ಯ ಮತ್ತು ಗಂಭೀರವಾದ ಪ್ರತಿಕೂಲ ಹೃದಯದ ಪರಿಣಾಮಗಳಾಗುತ್ತದೆ ಎಂಬುದಕ್ಕೆ ಅಗಾಧ ಪುರಾವೆಗಳಿವೆ. ಆಸ್ಟ್ರೇಲಿಯಾ ಸೇರಿದಂತೆ ಪ್ರಪಂಚದಾದ್ಯಂತ ನಾವು ನೋಡುತ್ತಿರುವ ಹೆಚ್ಚಿನ ಸಾವುಗಳಿಗೆ ಪ್ರಮುಖ ಕಾರಣ COVID mRNA ಲಸಿಕೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಮತ್ತಷ್ಟು ಜನರು ಹೃದಯಾಘಾತಕ್ಕೆ ಒಳಗಾಗುವುದನ್ನು ಮತ್ತು ಅನಗತ್ಯವಾಗಿ ಸಾಯುವುದನ್ನು ತಡೆಯಲು ತನಿಖೆ ನಡೆಯಬೇಕು. ಅಲ್ಲದೆ ವಿಶ್ವಾದ್ಯಂತ ಈ ಲಸಿಕೆಯ ಬಳಕೆಯನ್ನು ತಕ್ಷಣವೇ ನಿಷೇಧಿಸಬೇಕು ಎಂದು ಮಲ್ಹೋತ್ರಾ ಹೇಳಿದ್ದಾರೆ.

ಎಲ್ಲಾ ಪುರಾವೆಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿದ ನಂತರ, ಕೋವಿಡ್ ಲಸಿಕೆಗಳು ಹೃದಯದ ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್‌ಗಿಂತ ಹೆಚ್ಚಿನ ರೀತಿಯಲ್ಲಿ ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂಬುದು ತಿಳಿದು ಬಂದಿದೆ. ಅಲ್ಲದೆ ಅಂಕಿ ಅಂಶಗಳ ಪ್ರಕಾರ ಶೇ. 20 ರಷ್ಟು ಹಿರಿಯ ವಯಸ್ಸಿಯನವರ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಎಂದು ವೈದ್ಯರೇ ಸೂಚಿಸಿದ್ದಾರೆ. ಹೀಗಾಗಿಯೇ ಹೃದ್ರೋಗ ತಜ್ಞರು ಸೇರಿದಂತೆ ಹಲವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಡಾ. ನೀಲ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಡಿಮಿಟ್ರಿ ಮಸ್ಕರೇನ್ಹಸ್, ಶೇನ್ ವಾರ್ನ್​ ನನ್ನ ಆತ್ಮೀಯ ಸ್ನೇಹಿತ. ಅವರ ಸಾವನ್ನು ತಡೆಯಬಹುದಿತ್ತು ಎಂಬ ವಿಷಯ ತಿಳಿದು ನನಗೆ ಆಘಾತ ಹಾಗೂ ದುಃಖವಾಯಿತು. ಅವರು ಕೋವಿಡ್ ಲಸಿಕೆ ತೆಗೆದುಕೊಳ್ಳದಿದ್ದರೆ, ಇಂದಿಗೂ ಜೀವಂತವಾಗಿರುತ್ತಿದ್ದರು. ಹೀಗಾಗಿ ಆಸ್ಟ್ರೇಲಿಯಾ ಮತ್ತು ಪ್ರಪಂಚದಾದ್ಯಂತ ಈ ಲಸಿಕೆಗಳನ್ನು ತಕ್ಷಣವೇ ನಿಷೇಧಿಸಲು ವೈದ್ಯರ ಅಭಿಪ್ರಾಯಕ್ಕೆ ನನ್ನೆ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಶೇನ್ ವಾರ್ನ್​ ನಿಧನರಾಗಿ ವರ್ಷಗಳ ಬಳಿಕ ಇಬ್ಬರು ಹೃದ್ರೋಗ ತಜ್ಞರು ನೀಡಿರುವ ಹೇಳಿಕೆಯು ಇದೀಗ ಮತ್ತೊಮ್ಮೆ ಕೋವಿಡ್ ಎಂಆರ್‌ಎನ್‌ಎ ಲಸಿಕೆಯ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸುವಂತೆ ಕೆಲವರು ಆಸ್ಟ್ರೇಲಿಯಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Published On - 3:16 pm, Thu, 22 June 23

ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ