ಅವಳಿ ಮಕ್ಕಳಿಗೆ ದೇವರ ಹೆಸರಿಟ್ಟ ರಾಮ್ ಚರಣ್-ಉಪಾಸನಾ ದಂಪತಿ

ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಇತ್ತೀಚೆಗೆ ಅವಳಿ ಮಕ್ಕಳು ಜನಿಸಿದ್ದು, ಅವರ ಹೆಸರುಗಳು ಚರ್ಚೆಯಲ್ಲಿದೆ. ಜ್ಯೋತಿಷಿ ಸಲಹೆಯಂತೆ ಮಗನಿಗೆ ಶಿವರಾಮ್ ಹಾಗೂ ಮಗಳಿಗೆ ಅನ್ವೀರಾ ದೇವಿ ಎಂದು ಹೆಸರಿಡಲಾಗಿದೆ. ಶಿವರಾಮ್ ಶಿವ-ರಾಮರ ಸಮ್ಮಿಲನವಾದರೆ, ಅನ್ವೀರಾ ಧೈರ್ಯ ಮತ್ತು ಕೃಪೆಯನ್ನು ಪ್ರತಿನಿಧಿಸುತ್ತದೆ. ಈ ದೈವಿಕ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನ ಸೆಳೆದಿವೆ.

ಅವಳಿ ಮಕ್ಕಳಿಗೆ ದೇವರ ಹೆಸರಿಟ್ಟ ರಾಮ್ ಚರಣ್-ಉಪಾಸನಾ ದಂಪತಿ
ರಾಮ್ ಚರಣ್​-ಉಪಾಸನಾ

Updated on: Feb 13, 2026 | 10:10 AM

ರಾಮ್ ಚರಣ್ (Ram Charan) ಹಾಗೂ ಉಪಾಸನಾ ದಂಪತಿ ಇತ್ತೀಚೆಗೆ ಅವಳಿ ಮಕ್ಕಳಿಗೆ ಪಾಲಕರಾಗಿದ್ದಾರೆ. ಈ ಮೊದಲು ಹುಟ್ಟಿದ ಮಗಳಿಗೆ ಕ್ಲಿನ್​ಕಾರ ಎಂದು ಹೆಸರು ಇಟ್ಟಿದ್ದರು. ಈ ಬಾರಿ ಅವಳಿ ಮಕ್ಕಳಿಗೂ ಇವರು ಭಿನ್ನ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅವರು ಮಕ್ಕಳಿಗೆ ದೇವರ ಹೆಸರನ್ನೇ ಇಟ್ಟಿದ್ದಾರೆ ಎಂಬುದು ವಿಶೇಷ.

ರಾಮ್ ಚರಣ್ ಅವರು ಅವಳಿ ಮಕ್ಕಳಿಗೆ ಹೆಸರನ್ನು ಇಡಲು ಖ್ಯಾತ ಜ್ಯೋತಿಷಿ ಬಳಿ ತೆರಳಿದ್ದರು ಎನ್ನಲಾಗಿದೆ. ಮಕ್ಕಳಿಗೆ ಯಾವ ರೀತಿಯ ಹೆಸರು ಇಡಬೇಕು ಎಂಬ ಬಗ್ಗೆ ಮಾಹಿತಿ ಕೇಳಲಾಗಿತ್ತು. ಅವರು ಸೂಚಿಸಿದ ಹೆಸರನ್ನೇ ಇವರು ಮಕ್ಕಳಿಗೆ ಇಟ್ಟಿದ್ದಾರೆ ಎಂದು ವರದಿ ಆಗಿದೆ. ಮಗನಿಗೆ ಶಿವರಾಮ್ ಎಂದು ಹಾಗೂ ಮಗಳಿಗೆ ಅನ್ವೀರಾ ದೇವಿ ಎಂದು ಇಡಲಾಗಿದೆಯಂತೆ.

ಶಿವರಾಮ್ ಎಂಬುದು ಹಿಂದೂ ದೇವರುಗಳಾದ ಶಿವ ಹಾಗೂ ರಾಮನ ಸಮ್ಮಿಲನವಾಗಿದೆ. ಕೊನಿಡೆಲಾ ಶಿವರಾಮ್ ಎಂದು ಮಗನಿಗೆ ಕರೆಯಲಾಗುತ್ತದೆ. ಮಗನಿಗೆ ದೇವರ ಹೆಸರನ್ನು ಇಟ್ಟಿರುವುದಕ್ಕೆ ಅನೇಕರಿಗೆ ಖುಷಿಯಾಗಿದೆ. ಇನ್ನು, ಮಗಳಿಗೆ ಅನ್ವೀರಾ ದೇವಿ ಎಂದು ಇಡಲಾಗಿದೆಯಂತೆ. ಇದು ಪ್ರಾಚೀನ ಪರಿಭಾಷೆಯಲ್ಲಿ ಧೈರ್ಯ ಮತ್ತು ಕೃಪೆಯ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ 

ಸದ್ಯ ರಾಮ್ ಚರಣ್ ತಮ್ಮ ಮಕ್ಕಳಿಗೆ ಇಟ್ಟ ಹೆಸರು ಚರ್ಚೆ ಆಗುತ್ತಿದೆ. ಮಕ್ಕಳಿಗೆ ಅವರು ಕ್ಲಿನ್​ಕಾರ, ಶಿವರಾಮ್ ಹಾಗೂ ಅನ್ವೀರಾ ದೇವಿ ಎಂದು ಇಟ್ಟಂತೆ ಆಗಿದೆ. ರಾಮ್ ಚರಣ್ ಅವರಿಗೆ ಈ ವರ್ಷ ವಿಶೇಷ ಎನಿಸಿಕೊಂಡಿದೆ. ಅವರು ಅವಳಿ ಮಕ್ಕಳ ತಂದೆ ಆಗಿದ್ದಾರೆ. ಇನ್ನು, ಈ ವರ್ಷ ಅವರ ನಟನೆಯ ‘ಪೆದ್ದಿ’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಏಪ್ರಿಲ್ 30ರಂದು ಸಿನಿಮಾ ತೆರೆಗೆ ಬರಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us