ವಿಡಿಯೋ: ಚಂದನ್ ಶೆಟ್ಟಿ-ನಿವೇದಿತಾ ವಿಚ್ಛೇದನಕ್ಕೆ ಕಾರಣಗಳು ಏನಿರಬಹುದು?
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ‘ಹ್ಯಾಪಿ ದಂಪತಿ’ ಎಂಬಂತೆ ಬಿಂಬಿತವಾಗಿದ್ದ ಈ ಜೋಡಿಯ ಈ ವಿಚ್ಛೇದನದ ನಿರ್ಧಾರಕ್ಕೆ ಕಾರಣ ಏನಿರಬಹುದು?
ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಅವರು ನಾಲ್ಕು ವರ್ಷದ ದಾಂಪತ್ಯ ಮುರಿದು ಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ರೀಲ್ಸ್ ಮಾಡುತ್ತಾ, ಪರಸ್ಪರರ ಬಗ್ಗೆ ಪ್ರೀತಿ ಪೂರ್ವಕ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದರು. ಇದನ್ನು ನೋಡಿದ ಅಭಿಮಾನಿಗಳು ಈ ದಂಪತಿಗಳ ಪರಸ್ಪರ ಪ್ರೀತಿಯ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಆದರೆ ಈಗ ಹಠಾತ್ತನೆ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನಡೆದಿದ್ದು, ಬಿಗ್ಬಾಸ್ನಲ್ಲಿ ಶುರುವಾದ ಪ್ರೇಮ, ಶಾಂತಿನಗರದ ಕೌಟುಂಬಿಕ ಕೋರ್ಟ್ನಲ್ಲಿ ಅಂತ್ಯವಾಗಿದೆ. ಅಂದಹಾಗೆ ಈ ಇಬ್ಬರ ವಿಚ್ಛೇದನಕ್ಕೆ ಕಾರಣವೇನು?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos