ಲಾಕ್‌ಡೌನ್‌ ಟೈಮ್‌ನಲ್ಲಿ ಕ್ರಿಕೆಟ್‌ ಆಡಿದ ಶಿವಣ್ಣ! ವಿಡಿಯೋ ಫುಲ್‌ ವೈರಲ್‌

ಬೆಂಗಳೂರು: ಎಲ್ಲೆಡೆ ಕೊರೊನಾದಿಂದಾಗಿ ಲಾಕ್‌ ಡೌನ್‌, ನಂತರ ಸಾಮಾಜಿಕ ಅಂತರ ಹೀಗೆ ಹತ್ತು ಹಲವು ಕಾರಣಗಳಿಂದ ಚಿತ್ರರಂಗದ ಚಟುವಟಿಕೆ ಬಂದ್‌ ಆಗಿದೆ. ಆದ್ರೆ ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್ ಈ ಸಮಯದಲ್ಲಿ ಮನೆಯಲ್ಲಿ ಕುಳಿತು ಸಾಕಾಗಿ, ಸಮಯ ಕಳೆಯಲು ಕ್ರಿಕೆಟ್‌ ಆಡಿದ ದೃಶ್ಯ ಈಗ ವೈರಲ್‌ ಆಗಿದೆ. ತಮ್ಮ ಕೆಲ ಆಪ್ತರೊಂದಿಗೆ ಬ್ಯಾಟ್ ಹಿಡಿದು ಮೈದಾನದಲ್ಲಿ ಅಖಾಡಕ್ಕಿಳಿದಿರುವ ಶಿವರಾಜ್ ಕುಮಾರ್ ಅವರೊಂದಿಗೆ ಕ್ರಿಕೆಟ್ ಆಡಿರೋ ಪೋಟೋ ಮತ್ತು ವಿಡಿಯೋ ವೈರಲ್ ಆಗಿದ್ದು, ಅವರ ಅಭಿಮಾನಿಗಳಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ. […]

ಲಾಕ್‌ಡೌನ್‌ ಟೈಮ್‌ನಲ್ಲಿ ಕ್ರಿಕೆಟ್‌ ಆಡಿದ ಶಿವಣ್ಣ! ವಿಡಿಯೋ ಫುಲ್‌ ವೈರಲ್‌

Updated on: Aug 13, 2020 | 3:32 PM

ಬೆಂಗಳೂರು: ಎಲ್ಲೆಡೆ ಕೊರೊನಾದಿಂದಾಗಿ ಲಾಕ್‌ ಡೌನ್‌, ನಂತರ ಸಾಮಾಜಿಕ ಅಂತರ ಹೀಗೆ ಹತ್ತು ಹಲವು ಕಾರಣಗಳಿಂದ ಚಿತ್ರರಂಗದ ಚಟುವಟಿಕೆ ಬಂದ್‌ ಆಗಿದೆ. ಆದ್ರೆ ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್ ಈ ಸಮಯದಲ್ಲಿ ಮನೆಯಲ್ಲಿ ಕುಳಿತು ಸಾಕಾಗಿ, ಸಮಯ ಕಳೆಯಲು ಕ್ರಿಕೆಟ್‌ ಆಡಿದ ದೃಶ್ಯ ಈಗ ವೈರಲ್‌ ಆಗಿದೆ.

ತಮ್ಮ ಕೆಲ ಆಪ್ತರೊಂದಿಗೆ ಬ್ಯಾಟ್ ಹಿಡಿದು ಮೈದಾನದಲ್ಲಿ ಅಖಾಡಕ್ಕಿಳಿದಿರುವ ಶಿವರಾಜ್ ಕುಮಾರ್ ಅವರೊಂದಿಗೆ ಕ್ರಿಕೆಟ್ ಆಡಿರೋ ಪೋಟೋ ಮತ್ತು ವಿಡಿಯೋ ವೈರಲ್ ಆಗಿದ್ದು, ಅವರ ಅಭಿಮಾನಿಗಳಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ.

ನಾಗವಾರದ ಮನೆ ಮುಂದೆ ಸಮಯ ಕಳೆಯಲು ಶಿವಣ್ಣಗೆ ಕ್ರಿಕೆಟ್ ಆಟದಲ್ಲಿ ನಿರ್ಮಾಪಕ ಕೆ ಪಿ ಶ್ರೀಕಾಂತ್ ಸೇರಿದಂತೆ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಕೂಡಾ ಸಾಥ್  ನೀಡಿದ್ದಾರೆ. ವೈರಲ್‌ ಆಗುತ್ತಿರುವ ಶಿವಣ್ಣನ ವಿಡಿಯೋ ನೋಡಿ ಅವರ ಅಭಿಮಾನಿಗಳು ಈಗ ತಿರುಗಿ ತಿರುಗಿ ವಿಡಿಯೋ ನೋಡಿದ್ದೇ ನೋಡಿದ್ದು.

Published On - 3:12 pm, Thu, 13 August 20