
ಮೈಸೂರು: ಸ್ಯಾಂಡಲ್ವುಡ್ನಲ್ಲಿ ಸೆಂಚುರಿ ಸ್ಟಾರ್ ಎನಿಸಿಕೊಂಡಿದ್ದರು ಯಾವುದೇ ಅದ್ಧೂರಿ ಜೀವನಕ್ಕೆ ಒಗ್ಗೂಡದೆ ತೀರ ಸರಳ ಜೀವನವನ್ನು ಇಷ್ಟಪಡುವ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ತಮ್ಮ ಸರಳತೆಯಿಂದಲೇ ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಈಗ ಅಂತದೆ ಸರಳತೆಯ ಮೂಲಕ ಶಿವಣ್ಣ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
20 ನಿಮಿಷಕ್ಕೂ ಹೆಚ್ಚು ಕಾಲ ಅಭಿಮಾನಿಗಳ ಜೊತೆ ಶಿವರಾಜ್ ಕುಮಾರ್ ಕಾಲ ಕಳೆದಿದ್ದಾರೆ. ತಮ್ಮ ನೆಚ್ಚಿನ ನಟನ ಜೊತೆ ಫೋಟೋ ತೆಗೆದುಕೊಂಡ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಶಿವಣ್ಣನ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Published On - 1:28 pm, Sun, 22 November 20