ನನ್ನನ್ನು ಅಪರಾಧಿಯಾಗಿ ಬಿಂಬಿಸಿದ್ದು ತುಂಬಾ ನೋವು ತಂದಿದೆ -ಅನುಶ್ರೀ ಕಣ್ಣೀರು

|

Updated on: Nov 24, 2020 | 7:03 AM

ಮಂಗಳೂರು: ಡ್ರಗ್ಸ್ ಕೇಸ್ ಸಂಬಂಧ ಸಿಸಿಬಿ ತನಿಖೆ ಎದುರಿಸಿರೋ ನಿರೂಪಕಿ ಅನುಶ್ರೀ ತಮ್ಮ ಮನದಾಳದ ನೋವನ್ನು ಫೇಸ್​ಬುಕ್ ಮುಖಾಂತರ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಕಣ್ಣೀರು ಸುರಿಸುತ್ತ ನಾನು ಯಾವುದೇ ತಪ್ಪು ಮಾಡಿಲ್ಲ ಅಂತ ನೊಂದುಕೊಂಡಿದ್ದಾರೆ. ಸೆಪ್ಟೆಂಬರ್ 24 ಜೀವನದಲ್ಲಿ ಮರೆಯಲಾಗದ ದಿನ. 12 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಷೋನಲ್ಲಿ ವಿನ್ ಆಗಿದ್ದು ಅದೇ ಈಗ ಮುಳ್ಳು ಆಗುತ್ತೆ ಅಂಥಾ ಅಂದುಕೊಂಡಿರಲಿಲ್ಲ. ಎಲ್ಲರೂ ನನ್ನ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ. ಸಿಸಿಬಿ ನೋಟಿಸ್ ಬಂದಾಗ ಬೇಜಾರಾಗಲಿಲ್ಲ. ಸಿಸಿಬಿ ಕಚೇರಿಗೆ ಹೋದ […]

ನನ್ನನ್ನು ಅಪರಾಧಿಯಾಗಿ ಬಿಂಬಿಸಿದ್ದು ತುಂಬಾ ನೋವು ತಂದಿದೆ -ಅನುಶ್ರೀ ಕಣ್ಣೀರು
Follow us on

ಮಂಗಳೂರು: ಡ್ರಗ್ಸ್ ಕೇಸ್ ಸಂಬಂಧ ಸಿಸಿಬಿ ತನಿಖೆ ಎದುರಿಸಿರೋ ನಿರೂಪಕಿ ಅನುಶ್ರೀ ತಮ್ಮ ಮನದಾಳದ ನೋವನ್ನು ಫೇಸ್​ಬುಕ್ ಮುಖಾಂತರ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಕಣ್ಣೀರು ಸುರಿಸುತ್ತ ನಾನು ಯಾವುದೇ ತಪ್ಪು ಮಾಡಿಲ್ಲ ಅಂತ ನೊಂದುಕೊಂಡಿದ್ದಾರೆ.

ಸೆಪ್ಟೆಂಬರ್ 24 ಜೀವನದಲ್ಲಿ ಮರೆಯಲಾಗದ ದಿನ. 12 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಷೋನಲ್ಲಿ ವಿನ್ ಆಗಿದ್ದು ಅದೇ ಈಗ ಮುಳ್ಳು ಆಗುತ್ತೆ ಅಂಥಾ ಅಂದುಕೊಂಡಿರಲಿಲ್ಲ. ಎಲ್ಲರೂ ನನ್ನ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ. ಸಿಸಿಬಿ ನೋಟಿಸ್ ಬಂದಾಗ ಬೇಜಾರಾಗಲಿಲ್ಲ. ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿಯಲ್ಲ.

CCB ನೋಟಿಸ್ ಬಂದ ದಿನವೇ ಮೂವರಿಗೆ ಅನುಶ್ರೀಯಿಂದ ಕಾಲ್‌: ಯಾರು ಗೊತ್ತಾ ಆ ಪ್ರಭಾವಿಗಳು? 

ಆದರೆ ನನ್ನನ್ನು ಅಪರಾಧಿಯಾಗಿ ಬಿಂಬಿಸಿದ್ದು ತುಂಬಾ ನೋವು ತಂದಿದೆ. ಒಂದು ವಾರದಿಂದ ಮನೆಯವರ ನೆಮ್ಮದಿ ಹಾಳಾಗಿದೆ. ಈ ಕಷ್ಟ ಕಾಲದಲ್ಲಿ ಜನರು ಜೊತೆ ನಿಂತಿದ್ದಾರೆ ಎಂದು ಫೇಸ್​ಬುಕ್ ವಿಡಿಯೋದಲ್ಲಿ ಆ್ಯಂಕರ್ ಅನುಶ್ರೀ ಕಣ್ಣೀರಿಟ್ಟಿದ್ದಾರೆ.

ಅಂತೆಕಂತೆಗಳ ವಿಚಾರ ಸೃಷ್ಟಿ ಯಾಗುತ್ತಿದೆ. ಇದು ನೆಮ್ಮದಿಯನ್ನು ತುಂಬ ಹಾಳು ಮಾಡುತ್ತಿದೆ. ನಮ್ಮ ಮನಸ್ಥಿತಿ ಬಗ್ಗೆ ಸ್ವಲ್ಪ ಯೋಚನೆ ಮಾಡಿ. ಕನ್ನಡಿಗರು ಕೊಟ್ಟ ಹೆಸರಿಗೆ ಧಕ್ಕೆ ಮಾಡಲ್ಲ ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

Published On - 10:13 am, Fri, 2 October 20