‘ಬಘೀರ’ ಚಿತ್ರದ ಮೊದಲ ದಿನದ ಗಳಿಕೆ, ಸಿಕ್ಕ ರೇಟಿಂಗ್ ಎಷ್ಟು? ಇಲ್ಲಿದೆ ವಿವರ

‘ಬಘೀರ’ ಚಿತ್ರದ ಅವಧಿ 2.38 ಗಂಟೆ ಇದೆ. ಈ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಅಂಶ ಹೊಂದಿದೆ. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 2.8 ಸಾವಿರ ಮಂದಿ ವೋಟ್ ಮಾಡಿದ್ದು, 9.2 ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ರೇಟಿಂಗ್​ನಲ್ಲಿ ವ್ಯತ್ಯಾಸ ಆಗಲಿದೆ.

‘ಬಘೀರ’ ಚಿತ್ರದ ಮೊದಲ ದಿನದ ಗಳಿಕೆ, ಸಿಕ್ಕ ರೇಟಿಂಗ್ ಎಷ್ಟು? ಇಲ್ಲಿದೆ ವಿವರ
ಬಘೀರ

Updated on: Nov 01, 2024 | 11:42 AM

ಶ್ರೀಮುರಳಿ ಅವರು ‘ಉಗ್ರಂ’, ‘ಮಫ್ತಿ’ ಮೂಲಕ ದೊಡ್ಡ ಯಶಸ್ಸು ಪಡೆದಿದ್ದಾರೆ. ಅವರಿಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇತ್ತು. ಆ ಗೆಲುವು ‘ಬಘೀರ’ ಚಿತ್ರದ ಮೂಲಕ ಸಿಕ್ಕಿದೆ. ಟ್ರೇಲರ್ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಮಾಡಿದ್ದ ‘ಬಘೀರ’ ಚಿತ್ರ ಥಿಯೇಟರ್​ನಲ್ಲಿ ಹವಾ ಎಬ್ಬಿಸಿದೆ. ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ.

‘ಬಘೀರ’ ಸಿನಿಮಾ ಬಗ್ಗೆ

ಡಾ. ಸೂರಿ ಅವರು ‘ಬಘೀರ’ ಚಿತ್ರ ನಿರ್ದೇಶನ ಮಾಡಿದ್ದಾರೆ. ‘ಕೆಜಿಎಫ್’ ರೀತಿಯ ಸಿನಿಮಾಗಳನ್ನು ತೆರೆಮೇಲೆ ತಂದ ಪ್ರಶಾಂತ್ ನೀಲ್ ಅವರು ‘ಬಘೀರ’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಶ್ರೀಮುರಳಿಗೆ ಜೊತೆಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ಗರುಡ ರಾಮ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಹೊಂಬಾಳೆ ಫಿಲ್ಮ್ಸ್​ ಈ ಸಿನಿಮಾನ ನಿರ್ಮಾಣ ಮಾಡಿದೆ. ಸಿನಿಮಾ ಸೆಟ್​ನಲ್ಲಿ ಶ್ರೀಮುರಳಿ ಅವರಿಗೆ ಪೆಟ್ಟಾಗಿದ್ದರಿಂದ ಸಿನಿಮಾ ಕೆಲಸಗಳು ವಿಳಂಬ ಆದವು.

ಕಲೆಕ್ಷನ್

ಬಾಕ್ಸ್ ಆಫೀಸ್ ಬಗ್ಗೆ ಮಾಹಿತಿ ನೀಡುವ Sacnilk ವರದಿ ಮಾಡಿರುವ ಪ್ರಕಾರ ‘ಬಘೀರ’ ಚಿತ್ರ ಬರೋಬ್ಬರಿ 2.8 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಈ ಚಿತ್ರಕ್ಕೆ ಮೊದಲ ದಿನ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಭರ್ಜರಿ ಗಳಿಕೆ ಆಗೋದು ಖಚಿತ ಎನ್ನಲಾಗುತ್ತಿದೆ. ದೀಪಾವಳಿ ಪ್ರಯುಕ್ತ ಸಾಲು ಸಾಲು ರಜೆಗಳಿವೆ. ಇದು ಸಿನಿಮಾಗೆ ಸಹಕಾರಿ ಆಗಲಿದೆ.

ಇದನ್ನೂ ಓದಿ: Bagheera Review: ಸೂಪರ್ ಹೀರೋ ಆದ ಶ್ರೀಮುರಳಿ; ‘ಬಘೀರ’ ಚಿತ್ರದಲ್ಲಿ ಬ್ಯಾಟ್​ಮ್ಯಾನ್ ರೀತಿಯ ಕಥೆ

ರೇಟಿಂಗ್

‘ಬಘೀರ’ ಚಿತ್ರದ ಅವಧಿ 2.38 ಗಂಟೆ ಇದೆ. ಈ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಅಂಶ ಹೊಂದಿದೆ. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 2.8 ಸಾವಿರ ಮಂದಿ ವೋಟ್ ಮಾಡಿದ್ದು, 9.2 ರೇಟಿಂಗ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us