ಹಳ್ಳಿ ಸೊಗಡಿನ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ಗೆ ಬಿಗ್​ ಬಾಸ್ ವಾಸುಕಿ ಸಾಹಿತ್ಯ

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಕಥಾ ಹಂದರ, ವಿಭಿನ್ನ ಟೈಟಲ್​ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆ ಲಿಸ್ಟ್​ಗೆ ಸದ್ಯ ಸೇರ್ಪಡೆಯಾಗುತ್ತಿರುವ ಚಿತ್ರವೇ ಊರಿನ ಗ್ರಾಮಸ್ಥರಲ್ಲಿ ವಿನಂತಿ. ಹೆಸರೇ ಹೇಳೋ ಹಾಗೆ ಚಿತ್ರ ಹಳ್ಳಿ ಸೊಗಡನ್ನ ಹೊಂದಿದೆ. ಒಂದೊಳ್ಳೆ ಸಂದೇಶ ನೀಡೋ ಸಿನಿಮಾ ಇದಾಗಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ. ಹೆಚ್​.ಆರ್.ಕೆ ಸ್ಟುಡಿಯೋಸ್​ ಬ್ಯಾನರ್​ ಅಡಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಡಿ.ಆರ್​ ಕುಮಾರಸ್ವಾಮಿ ಮತ್ತು ದೇವನಗೌಡ ವಡಗೇರಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎಮ್. ಕೃಷ್ಣಮೂರ್ತಿ ಕಥೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿ […]

ಹಳ್ಳಿ ಸೊಗಡಿನ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ಗೆ ಬಿಗ್​ ಬಾಸ್ ವಾಸುಕಿ ಸಾಹಿತ್ಯ
ಸಾಧು ಶ್ರೀನಾಥ್​

Updated on: Dec 22, 2019 | 2:13 PM

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಕಥಾ ಹಂದರ, ವಿಭಿನ್ನ ಟೈಟಲ್​ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆ ಲಿಸ್ಟ್​ಗೆ ಸದ್ಯ ಸೇರ್ಪಡೆಯಾಗುತ್ತಿರುವ ಚಿತ್ರವೇ ಊರಿನ ಗ್ರಾಮಸ್ಥರಲ್ಲಿ ವಿನಂತಿ. ಹೆಸರೇ ಹೇಳೋ ಹಾಗೆ ಚಿತ್ರ ಹಳ್ಳಿ ಸೊಗಡನ್ನ ಹೊಂದಿದೆ. ಒಂದೊಳ್ಳೆ ಸಂದೇಶ ನೀಡೋ ಸಿನಿಮಾ ಇದಾಗಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹ ಇಲ್ಲ.

ಹೆಚ್​.ಆರ್.ಕೆ ಸ್ಟುಡಿಯೋಸ್​ ಬ್ಯಾನರ್​ ಅಡಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಡಿ.ಆರ್​ ಕುಮಾರಸ್ವಾಮಿ ಮತ್ತು ದೇವನಗೌಡ ವಡಗೇರಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎಮ್. ಕೃಷ್ಣಮೂರ್ತಿ ಕಥೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವಾಸುಕಿ ವೈಭವ್​ ಅವರ ಸಾಹಿತ್ಯ, ಕಾರ್ತಿಕ್​ ಎಸ್​ ಛಾಯಾಗ್ರಹಣ, ಸಾಯಿವಂಶಿ ಸಂಗೀತ, ಅನಿಲ್​ ಬಿಲ್ಲವ ಸಂಕಲನ ಚಿತ್ರಕ್ಕೆ ಇರಲಿದೆ.

ಜನವರಿ 1 ರಿಂದ ಚಿತ್ರೀಕರಣ ಪ್ರಾರಂಭ

ಚಿತ್ರದ ಶೂಟಿಂಗ್​ಗೆ ಭರದ ಸಿದ್ಧತೆ ನಡೆದಿದ್ದು ಮುಂದಿನ ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 30 ವರ್ಷಗಳ ಹಿಂದಿನ ಕಥೆಯನ್ನ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಚಿತ್ರದ ಮೂಲಕ ತೆರೆ ಮೇಲೆ ತರುವ ಪ್ರಯತ್ನಕ್ಕೆ ನಿರ್ದೇಶಕ ಕೃಷ್ಣಮೂರ್ತಿ ಕೈ ಹಾಕಿದ್ದಾರೆ. 30 ವರ್ಷದ ಹಿಂದೆ ಹಳ್ಳಿ-ಹಳ್ಳಿಗಳಿಗೆ ಹೋಗಿ ನಾಟಕ ಮಾಡಿಕೊಂಡು ಜೀವನ ನಡೆಸುವವರ ರೀತಿ-ನೀತಿ, ಪದ್ಧತಿಯನ್ನ ಸಿನಿಮಾದಲ್ಲಿ ಎಳೆಎಳೆಯಾಗಿ ತೊರಿಸಲಾಗುತ್ತೆ.

12 ವರ್ಷದ ಬಾಲಕನ ತರಲೆ, 30 ವರ್ಷಗಳ ಹಿಂದಿನ ಬೆಳವಣಿಗೆಯನ್ನು ಹೊಂದಿದ್ದು, ಕಥೆಯ ಕೊನೆ ಕ್ಷಣದಲ್ಲಿ ಇವನ ಧೈರ್ಯ, ಸಾಹಸ ಜನರಿಗೆ ನಾಯಕತ್ವ ತೋರುತ್ತದೆ. ಊರಿನ ರಾಕ್ಷರ ಕೋಟೆಯೊಂದರಲ್ಲಿ ಸಿಲುಕಿ ಭಯದಿಂದ ಜೀವನ ದೂಡೂತ್ತಿದ್ದ ಜನರ ಪಾಲಿಗೆ 12 ವರ್ಷದ ಹುಡುಗನ ಆಗಮನ, ಅವನ ಧೈರ್ಯ, ಸಾಹಸ ಕಂಡು ಭಯದಲ್ಲಿದ್ದ ಜನರಿಗೆ ತಮ್ಮನ್ನು ರಕ್ಷಣೆ ಮಾಡಲು ಬಂದ ಹನುಮಾನ್​ ರೂಪದಲ್ಲಿ ಕಾಣುತ್ತಾನೆ. ಇದು ಗ್ರಾಮಸ್ಥರಲ್ಲಿ ವಿನಂತಿ ಚಿತ್ರದ ಕಥಾ ಸಾರಂಶವಾಗಿದೆ.

ಈ ಎಲ್ಲಾ ಸನ್ನಿವೇಶಗಳನ್ನ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಿ ಒಂದು ಒಳ್ಳೆ ಸಂದೇಶದೊಂದಿಗೆ ಜನರ ಮುಂದೆ ತರಲು ಚಿತ್ರತಂಡ ಹೊರಟಿದೆ. ಚಿತ್ರತಂಡಕ್ಕೆ ನಾವು-ನೀವು ಆಲ್​ ದಿ ಬೆಸ್ಟ್​ ಹೋಳೋಣ, ಆಲ್​ ದಿ ಬೆಸ್ಟ್​ .. ಊರಿನ ಗ್ರಾಮಸ್ಥರಲ್ಲಿ ವಿನಂತಿ ಚಿತ್ರತಂಡ.

Published On - 10:25 am, Sat, 21 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us