
ದೆಹಲಿ: ಬಾಲಿವುಡ್ ಸೆಲೆಬ್ರಿಟಿ, ಜನಪ್ರಿಯ ನಟ ಕಿರಣ್ ಕುಮಾರ್ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕಿರಣ್ ಕುಮಾರ್ ತಪಾಸಣೆಗಾಗಿ ಆಸ್ಪತ್ರೆಗೆ ಹೋದಾಗ ಮುಂಜಾಗ್ರತೆಗಾಗಿ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ.
ಈ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಕಿರಣ್ ಕುಮಾರ್ ಅವರು ಕಳೆದ 10 ದಿನಗಳಿಂದ ತಮ್ಮ ಮನೆಯಲ್ಲಿ ಸ್ವಯಂ-ದಿಗ್ಬಂಧನದಲ್ಲಿದ್ದರು. ಹಾಗೂ ಮೇ 25 ರಂದು ಮತ್ತೊಮ್ಮೆ ಕೊರೊನಾ ಪರೀಕ್ಷೆಯನ್ನು ಮಾಡಿಸುವುದಾಗಿ ತಿಳಿಸಿದ್ದಾರೆ.
ಪರೀಕ್ಷೆಗೆ ಮುಂಚಿತವಾಗಿಯೇ ನಟ ಕಿರಣ್ ಕುಮಾರ್ಗೆ ಯಾವುದೇ ಕೊರೊನಾ ರೋಗಕ್ಕೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಿರಲಿಲ್ಲ. ಪರೀಕ್ಷೆ ನಡೆಸಿದ ನಂತರ ಮತ್ತು ಕ್ವಾರಂಟೈನ್ನಲ್ಲಿದ್ದಾಗಲೂ ಅವರು ಲಕ್ಷಣರಹಿತನಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
Published On - 7:17 am, Sun, 24 May 20