ಆಕರ್ಷಕವಾದ ತ್ವಚೆಗೆ ಲೋಳೆಸರ ಬಳಸುತ್ತಾರಂತೆ ಈ ಬಾಲಿವುಡ್ ಬ್ಯೂಟಿ

|

Updated on: Nov 14, 2019 | 11:49 AM

ಬಾಲಿವುಡ್​ ಬೋಲ್ಡ್​ ಬ್ಯೂಟಿಗಳಲ್ಲಿ ಮಲೈಕಾ ಆರೋರಾ ಕೂಡಾ ಒಬ್ಬರು. ವಯಸ್ಸನ್ನೇ ನಾಚುವಂತೆ ಫಿಟ್ ಆಗಿರೋ ಚೆಲುವೆ. ಬಾಲಿವುಡ್​ನ ಬಳುಕೋ ಬಳ್ಳಿ ಮಲೈಕಾ ಅವರ ಲುಕ್ ಸ್ಟೇಟ್ಮೆಂಟ್ ಆ್ಯಂಡ್ ಬ್ಯೂಟಿ ನೋಡಿ ಬೆರಗಾಗದವರಿಲ್ಲ. ಮಲೈಕಾ ಆರೋರ ತ್ವಚೆ ಅಂದಕ್ಕಾಗಿ ತಾವು ಅನುಸರಿಸುತ್ತಿರುವ ಬ್ಯೂಟಿ ಸೀಕ್ರೆಟ್‌ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬ್ಯೂಟಿ ಸೀಕ್ರೆಟ್ ತುಂಬಾ ನೈಸರ್ಗಿಕವಾಗಿದ್ದು, ಹೆಚ್ಚೇನು ಹಣ ಖರ್ಚು ಮಾಡದೆ ಎಲ್ಲರೂ ಪಾಲಿಸಬಹುದಾಗಿದೆ. ಲೋಳೆಸರ ಬಳಸುವುದರಿಂದ ಕಲೆ ಉಳಿಯುವುದಿಲ್ಲ: ಬ್ಯೂಟಿಫುಲ್ ಮಲೈಕಾ ಅರೋರಾ ತಮ್ಮ ತ್ವಚೆ ಆರೈಕೆಗೆ ಲೋಳೆಸರ ಬಳಸುತ್ತಾರೆ. […]

ಆಕರ್ಷಕವಾದ ತ್ವಚೆಗೆ ಲೋಳೆಸರ ಬಳಸುತ್ತಾರಂತೆ ಈ ಬಾಲಿವುಡ್ ಬ್ಯೂಟಿ
Follow us on

ಬಾಲಿವುಡ್​ ಬೋಲ್ಡ್​ ಬ್ಯೂಟಿಗಳಲ್ಲಿ ಮಲೈಕಾ ಆರೋರಾ ಕೂಡಾ ಒಬ್ಬರು. ವಯಸ್ಸನ್ನೇ ನಾಚುವಂತೆ ಫಿಟ್ ಆಗಿರೋ ಚೆಲುವೆ. ಬಾಲಿವುಡ್​ನ ಬಳುಕೋ ಬಳ್ಳಿ ಮಲೈಕಾ ಅವರ ಲುಕ್ ಸ್ಟೇಟ್ಮೆಂಟ್ ಆ್ಯಂಡ್ ಬ್ಯೂಟಿ ನೋಡಿ ಬೆರಗಾಗದವರಿಲ್ಲ.

ಮಲೈಕಾ ಆರೋರ ತ್ವಚೆ ಅಂದಕ್ಕಾಗಿ ತಾವು ಅನುಸರಿಸುತ್ತಿರುವ ಬ್ಯೂಟಿ ಸೀಕ್ರೆಟ್‌ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬ್ಯೂಟಿ ಸೀಕ್ರೆಟ್ ತುಂಬಾ ನೈಸರ್ಗಿಕವಾಗಿದ್ದು, ಹೆಚ್ಚೇನು ಹಣ ಖರ್ಚು ಮಾಡದೆ ಎಲ್ಲರೂ ಪಾಲಿಸಬಹುದಾಗಿದೆ.

ಲೋಳೆಸರ ಬಳಸುವುದರಿಂದ ಕಲೆ ಉಳಿಯುವುದಿಲ್ಲ: ಬ್ಯೂಟಿಫುಲ್ ಮಲೈಕಾ ಅರೋರಾ ತಮ್ಮ ತ್ವಚೆ ಆರೈಕೆಗೆ ಲೋಳೆಸರ ಬಳಸುತ್ತಾರೆ. ಲೋಳೆಸರ ಬಳಸುವುದರಿಂದ ತ್ವಚೆಗೆ ಮುಖದಲ್ಲಿ ಕಲೆ ಉಳಿಯುವುದಿಲ್ವಂತೆ. ಲೋಳೆಸರ, ಕತ್ಲಿಗಿಡ ಎಂದೆಲ್ಲಾ ಕರೆಸಿಕೊಳ್ಳುವ ಅಲೋವೇರ ಎಲೆಗಳನ್ನು ಬಳಸಿ ಕೂಡ ತ್ವಚೆಯನ್ನು ಆರೈಕೆ ಮಾಡಬಹುದು.

ಅಲೋವೇರಾ ಚರ್ಮದ ಮೇಲೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಬರುತ್ತದೆ. ಅಲ್ಲದೆ, ಚರ್ಮಕ್ಕೆ ಬೇಕಾದ ಪೋಷಕಾಂಶ ಕೂಡ ಲೋಳೆಸರದಿಂದ ಸಿಗುತ್ತದೆ. ಒಂದು ವೇಳೆ ಚರ್ಮದ ಅಲರ್ಜಿಯಿದ್ದರೆ ನೀವು ಅಲೋವೇರ ಜೆಲ್​ಗಳನ್ನು ಬಳಸದಿರುವುದು ಉತ್ತಮ.

ಚರ್ಮದ ಹೊಳಪನ್ನು ಹೆಚ್ಚಿಸುತ್ತೆ: 
ನಿಮ್ಮ ಮುಖದಿಂದ ಧೂಳು, ಕೊಳಕು, ಡೆಡ್​ ಸ್ಕಿನ್​ ಮತ್ತು ಕೊಳೆಯನ್ನು ಸ್ವಚ್ಛಗೊಳಿಸಲು ಇದು ತುಂಬಾ ಸಹಾಯಕವಾಗಿದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆಕರ್ಷಣೀಯವಾಗಿಸುತ್ತದೆ. ಹಾಗೆಯೆ ಲೋಳೆಸರ ಹಚ್ಚಿದರೆ ಬಿಸಿಲಿನಿಂದ ತ್ವಚೆಯನ್ನು ರಕ್ಷಣೆ ಕೂಡಾ ಮಾಡುತ್ತಂತೆ.

Published On - 7:59 am, Thu, 14 November 19