Dhoomam: ಕನ್ನಡದಲ್ಲಿ ಯಾಕಿಲ್ಲ ‘ಧೂಮಂ’ ಪೋಸ್ಟರ್​? ಹೊಂಬಾಳೆ ಫಿಲ್ಮ್ಸ್​, ಪವನ್​ ಕುಮಾರ್​ಗೆ ಕನ್ನಡಿಗರ ಪ್ರಶ್ನೆ

ಕನ್ನಡದಲ್ಲೂ ‘ಧೂಮಂ’ ಪೋಸ್ಟರ್​ ರಿಲೀಸ್​ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೇವಲ ಮಲಯಾಳಂನಲ್ಲಿ ಪೋಸ್ಟರ್​ ಬಿಡುಗಡೆ ಮಾಡಿರುವುದು ಕರುನಾಡಿನ ಸಿನಿಪ್ರಿಯರಿಗೆ ಬೇಸರ ಮೂಡಿಸಿದೆ.

Dhoomam: ಕನ್ನಡದಲ್ಲಿ ಯಾಕಿಲ್ಲ ‘ಧೂಮಂ’ ಪೋಸ್ಟರ್​? ಹೊಂಬಾಳೆ ಫಿಲ್ಮ್ಸ್​, ಪವನ್​ ಕುಮಾರ್​ಗೆ ಕನ್ನಡಿಗರ ಪ್ರಶ್ನೆ
ಧೂಮಂ ಸಿನಿಮಾ ಪೋಸ್ಟರ್

Updated on: Apr 17, 2023 | 4:45 PM

ಭಾರತೀಯ ಚಿತ್ರರಂಗದಲ್ಲಿ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಒಂದು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ‘ಕೆಜಿಎಫ್​: ಚಾಪ್ಟರ್​ 2’, ‘ಕಾಂತಾರ’ ಮುಂತಾದ ಸಿನಿಮಾಗಳನ್ನು ನೀಡಿರುವ ಈ ಬ್ಯಾನರ್​ ಮೇಲೆ ಪ್ರೇಕ್ಷಕರಿಗೆ ಸಖತ್​ ಭರವಸೆ ಮೂಡಿದೆ. ಈ ಪ್ರೊಡಕ್ಷನ್​ ಹೌಸ್​ನಿಂದ ಬರಲಿರುವ ಎಲ್ಲ ಸಿನಿಮಾಗಳ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಇದೇ ಸಂಸ್ಥೆಯ ‘ಧೂಮಂ’ ಸಿನಿಮಾದ (Dhoomam Movie) ಫಸ್ಟ್​ ಲುಕ್​ ಬಿಡುಗಡೆ ಆಗಿದೆ. ಖ್ಯಾತ ನಿರ್ದೇಶಕ ಪವನ್​ ಕುಮಾರ್​ ಅವರು ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಸದಾ ಡಿಫರೆಂಟ್​ ಕಾನ್ಸೆಪ್ಟ್​ಗಳ ಮೂಲಕ ಗಮನ ಸೆಳೆಯುವ ಅವರು ಈಗ ‘ಧೂಮಂ’ ಪೋಸ್ಟರ್ ಮೂಲಕ ಕೌತುಕ ಮೂಡಿಸಿದ್ದಾರೆ. ಮಲಯಾಳಂ ನಟ ಫಹಾದ್​ ಫಾಸಿಲ್​ (Fahadh Faasil) ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದು ಪ್ಯಾನ್​ ಇಂಡಿಯಾ ಸಿನಿಮಾ. ಆದರೆ ಸದ್ಯಕ್ಕೆ ಮಲಯಾಳಂ ಭಾಷೆಯಲ್ಲಿ ಮಾತ್ರ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಕನ್ನಡದಲ್ಲಿ ಯಾಕೆ ಪೋಸ್ಟರ್​ ರಿಲೀಸ್​ ಆಗಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಪವನ್​ ಕುಮಾರ್​ ಅವರ ಸಿನಿಮಾಗಳಲ್ಲಿ ಹೀರೋ ಯಾರು ಎಂಬುದಕ್ಕಿಂತಲೂ ಕಥೆ ಮತ್ತು ಕಾನ್ಸೆಪ್ಟ್​ ಏನು ಎಂಬುದೇ ಹೆಚ್ಚು ಮುಖ್ಯವಾಗುತ್ತದೆ. ಈ ಹಿಂದೆ ‘ಲೂಸಿಯಾ’, ‘ಯೂಟರ್ನ್​’ ಸಿನಿಮಾಗಳನ್ನು ಅವರು ಈ ಮಾತನ್ನು ಸಾಬೀತು ಮಾಡಿದ್ದರು. ಈಗ ‘ಧೂಮಂ’ ಸಿನಿಮಾವನ್ನು ಕೂಡ ಅವರು ಡಿಫರೆಂಟ್​ ಆಗಿ ಕಟ್ಟಿಕೊಡಲಿದ್ದಾರೆ ಎಂಬುದಕ್ಕೆ ಈ ಪೋಸ್ಟರ್​ ಸಾಕ್ಷಿ ಒದಗಿಸುತ್ತಿದೆ.

ಇದನ್ನೂ ಓದಿ
‘ಕೆಜಿಎಫ್​ 3’ ಬಗ್ಗೆ ದೊಡ್ಡ ಸುಳಿವು ನೀಡಿದ ‘ಹೊಂಬಾಳೆ’; 1978ರಿಂದ 1981 ತನಕ ರಾಕಿ ಎಲ್ಲಿದ್ದ?
RCB-Hombale: ಬೆಂಗಳೂರಿನ ಖದರ್ ವಿಶ್ವಕ್ಕೆ ಪಸರಿಸಲು ಹೊಂಬಾಳೆ ಜೊತೆ ಕೈಜೋಡಿಸಿದ ಆರ್​ಸಿಬಿ
Kantara 2: ಯುಗಾದಿ ದಿನವೇ ಸಿಹಿ ಸುದ್ದಿ ನೀಡಿದ ರಿಷಬ್​ ಶೆಟ್ಟಿ; ಇಲ್ಲಿದೆ ‘ಕಾಂತಾರ 2’ ಅಪ್​ಡೇಟ್​
Hombale Films: ಮುಂದಿನ 5 ವರ್ಷಗಳಲ್ಲಿ ಚಿತ್ರರಂಗಕ್ಕೆ 3 ಸಾವಿರ ಕೋಟಿ ರೂ. ಹೂಡಿಕೆ; ವಿಜಯ್ ಕಿರಗಂದೂರು ಮಹತ್ವದ ಘೋಷಣೆ

‘ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ. ಇಲ್ಲಿದೆ ಮೊದಲ ಕಿಡಿ’ ಎಂಬ ಕ್ಯಾಪ್ಷನ್​ನೊಂದಿಗೆ ‘ಧೂಮಂ’ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ಪೋಸ್ಟರ್​ನಲ್ಲಿ ಫಹಾದ್​ ಫಾಸಿಲ್​ ಅವರ ಬಾಯಿಗೆ ಪಟ್ಟಿ ಕಟ್ಟಲಾಗಿದೆ. ಹಿನ್ನೆಲೆಯಲ್ಲಿ ಇನ್ನುಳಿದ ಪಾತ್ರಗಳನ್ನು ತೋರಿಸಲಾಗಿದೆ. ಪೋಸ್ಟರ್​ ನೋಡಿದ ಸಿನಿಪ್ರಿಯರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಕನ್ನಡದಲ್ಲೂ ಪೋಸ್ಟರ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕರುನಾಡಿನ ಸಿನಿಪ್ರಿಯರು ಅನಿಸಿಕೆ ತಿಳಿಸಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್​ 3’ ಬಗ್ಗೆ ದೊಡ್ಡ ಸುಳಿವು ನೀಡಿದ ‘ಹೊಂಬಾಳೆ’; 1978ರಿಂದ 1981 ತನಕ ರಾಕಿ ಎಲ್ಲಿದ್ದ?

‘ಹೊಂಬಾಳೆ ಫಿಲ್ಮ್ಸ್​’ ಕನ್ನಡದ ಸಿನಿಮಾ ನಿರ್ಮಾಣ ಸಂಸ್ಥೆ. ನಿರ್ದೇಶಕ ಪವನ್​ ಕುಮಾರ್​ ಕೂಡ ಕನ್ನಡದವರು. ಹಾಗಾಗಿ ಕನ್ನಡದಲ್ಲೂ ‘ಧೂಮಂ’ ಪೋಸ್ಟರ್​ ರಿಲೀಸ್​ ಆಗಲಿದೆ ಎಂದು ಕನ್ನಡಿಗರು ನಿರೀಕ್ಷಿಸಿದ್ದರು. ಆದರೆ ಕೇವಲ ಮಲಯಾಳಂನಲ್ಲಿ ಪೋಸ್ಟರ್​ ಬಿಡುಗಡೆ ಮಾಡಿರುವುದು ಕೆಲವರಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: Kichcha Sudeep: ‘ಹೊಂಬಾಳೆ ಫಿಲ್ಮ್ಸ್​’ ಜತೆ ಕಿಚ್ಚ ಸುದೀಪ್​ ಸಿನಿಮಾ? ಅಚ್ಚರಿ ಹುಟ್ಟುಹಾಕಿದೆ ಈ ಫೋಟೋ

‘ಧೂಮಂ’ ಸಿನಿಮಾದಲ್ಲಿ ಫಹಾದ್​ ಫಾಸಿಲ್​ ಜೊತೆ ರೋಷನ್​ ಮ್ಯಾಥೀವ್​, ಅಪರ್ಣಾ ಬಾಲಮುರಳಿ ಮುಂತಾದವರು ನಟಿಸುತ್ತಿದ್ದಾರೆ. ‘ಲೂಸಿಯಾ’ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಪ್ರೀತಾ ಜಯರಾಮನ್​ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:45 pm, Mon, 17 April 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us