ಶಿವರಾಜ್ಕುಮಾರ್ ಅವರನ್ನು ಬಿಗಿದಪ್ಪಿ ಅತ್ತ ಜ್ಯೂ.ಎನ್ಟಿಆರ್
ರಾಜ್‌ಕುಮಾರ್ ಕುಟುಂಬ ಹಾಗೂ ಎನ್ಟಿಆರ್ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯ ಇದೆ. ಅಪ್ಪು ಹಾಗೂ ಜ್ಯೂ.ಎನ್ಟಿಆರ್ ಉತ್ತಮ ಗೆಳೆಯರೂ ಹೌದು. ಈ ಕಾರಣಕ್ಕೆ ಜ್ಯೂ.ಎನ್ಟಿಆರ್ ಅವರು ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ.
ಪುನೀತ್ ರಾಜ್‌ಕುಮಾರ್ ಮೃತಪಟ್ಟಿದ್ದು ಕೇವಲ ಸ್ಯಾಂಡಲ್ವುಡ್ ಮಂದಿಗೆ ಮಾತ್ರ ಬೇಸರ ತರಿಸಿಲ್ಲ. ಪರ ಭಾಷೆಯವರಿಗೂ ಇದೂ ಶಾಕಿಂಗ್ ಸುದ್ದಿಯೇ. ಜ್ಯೂ.ಎನ್ಟಿಆರ್, ಸಮಂತಾ ಸೇರಿ ಪರಭಾಷೆಯ ಸಾಕಷ್ಟು ಕಲಾವಿದರು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಈ ಮಧ್ಯೆ ಕೆಲ ನಟರು ಕಂಠೀರವ ಸ್ಟೇಡಿಯಂಗೆ ಆಗಮಿಸಿ ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ. ಈ ಪೈಕಿ ಜ್ಯೂ.ಎನ್ಟಿಆರ್ ಕೂಡ ಒಬ್ಬರು.
ರಾಜ್‌ಕುಮಾರ್ ಕುಟುಂಬ ಹಾಗೂ ಎನ್ಟಿಆರ್ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯ ಇದೆ. ಅಪ್ಪು ಹಾಗೂ ಜ್ಯೂ.ಎನ್ಟಿಆರ್ ಉತ್ತಮ ಗೆಳೆಯರೂ ಹೌದು. ಈ ಕಾರಣಕ್ಕೆ ಜ್ಯೂ.ಎನ್ಟಿಆರ್ ಅವರು ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ. ಅಷ್ಟೆ ಅಲ್ಲ, ಶಿವರಾಜ್ಕುಮಾರ್ ಅವರನ್ನು ಸಂತೈಸುವ ಕೆಲಸ ಮಾಡಿದ್ದಾರೆ. ತೆರಳುವುದಕ್ಕೂ ಮುನ್ನ ಶಿವರಾಜ್ಕುಮಾರ್ ಅವರನ್ನು ಜ್ಯೂ.ಎನ್ಟಿಆರ್ ಸಂತೈಸಿದ್ದಾರೆ.
ಇದನ್ನೂ ಓದಿ: ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸಿದ ಪುನೀತ್ ರಾಜ್‌ಕುಮಾರ್ ಪುತ್ರಿ; ಸಂಜೆ ವೇಳೆಗೆ ಬೆಂಗಳೂರಿಗೆ
Loading...
Unable to load recommendations.
Follow Us
