‘ಚೆನ್ನಾಗಿರಲ್ಲ’; ತಪ್ಪಾಗಿ ನಡೆದುಕೊಂಡವರಿಗೆ ಸುದೀಪ್ ಎಚ್ಚರಿಕೆ

ಸಿಸಿಎಲ್ ಚಾಂಪಿಯನ್ ಆದ ಬಳಿಕ ಸುದೀಪ್ ಅವರು ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವೇದಿಕೆಯಲ್ಲಿ ಅತಿಯಾದ ಘೋಷಣೆ ಕೂಗಿ ತೊಂದರೆ ನೀಡಿದಾಗ, ಸುದೀಪ್ ಅವರು ‘ಚೆನ್ನಾಗಿರಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು. ಅಭಿಮಾನಿಗಳ ಮೇಲಿನ ಅವರ ಪ್ರೀತಿಗೆ ಕೊರತೆಯಿಲ್ಲವಾದರೂ, ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಕಾಪಾಡಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು.

‘ಚೆನ್ನಾಗಿರಲ್ಲ’; ತಪ್ಪಾಗಿ ನಡೆದುಕೊಂಡವರಿಗೆ ಸುದೀಪ್ ಎಚ್ಚರಿಕೆ
ಸುದೀಪ್

Updated on: Feb 03, 2026 | 7:34 AM

ಕಿಚ್ಚ ಸುದೀಪ್ (Sudeep) ಅವರು ಹೋದಲ್ಲಿ ಬಂದಲ್ಲಿ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಅವರು ಯಾವುದಾದರೂ ವೇದಿಕೆ ಏರಿದರೆ ಸಾಕು, ಬೇರೆಯವರಿಗೆ ಮಾತನಾಡಲು ಅವಕಾಶ ಕೂಡ ಕೊಡದೇ, ‘ಕಿಚ್ಚ ಕಿಚ್ಚ’ ಎಂದು ಘೋಷಣೆ ಕೂಗುತ್ತಾರೆ. ಈಗ ಸುದೀಪ್ ಅವರು ವಾರ್ನಿಂಗ್ ಒಂದನ್ನು ಕೊಟ್ಟಿದ್ದಾರೆ. ವೇದಿಕೆಯಲ್ಲಿ ಮಾತನಾಡುವಾಗ ತಪ್ಪಾಗಿ ನಡೆದುಕೊಂಡು, ತೊಂದರೆ ಕೊಟ್ಟವರಿಗೆ ಕಿಚ್ಚನ ಖಡಕ್ ವಾರ್ನಿಂಗ್ ಪಾಸ್ ಆಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ಸುದೀಪ್ ಅವರ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಂಘಟಿತ ಆಟ ಪ್ರದರ್ಶನ ನೀಡಿ ಸಿಸಿಎಲ್​​ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ. ಕೊಯಮತ್ತೂರಿನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ನಮ್ಮವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಪಂದ್ಯದ ಬಳಿಕ ಸುದೀಪ್ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಎಲ್ಲರೂ ‘ಕಿಚ್ಚ ಕಿಚ್ಚ’ ಎಂದು ಕೂಗಿದ್ದಾರೆ.

ವೇದಿಕೆ ಏರಿ ಸುದೀಪ್ ಮಾತನಾಡಲು ಆರಂಭಿಸಿದರು. ಆಗ ಅಲ್ಲಿ ನೆರೆದ ಕೆಲವರು ಕಿಚ್ಚ ಕಿಚ್ಚ ಎಂದು ಕೂಗುತ್ತಾ ಮಾತನಾಡಲೂ ಕೊಡಲಿಲ್ಲ. ಇದು ಸುದೀಪ್ ಅವರ ಕೋಪಕ್ಕೆ ಕಾರಣ ಆಗಿದೆ. ಅವರು ‘ಚೆನ್ನಾಗಿರಲ್ಲ’ ಎಂದು ನೇರವಾಗಿ ಎಚ್ಚರಿಕೆ ನೀಡಿದರು. ಆ ಬಳಿಕ ಎಲ್ಲರೂ ಸೈಲೆಂಟ್ ಆದರು.

ಇದನ್ನೂ ಓದಿ: ‘ಔಟಾದೆ, ಹೋಗಪ್ಪ’; ಕಿಚ್ಚ ಸುದೀಪ್ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು

ಸುದೀಪ್ ಅವರು ಅನೇಕ ಕಾರ್ಯಕ್ರಮಗಳಲ್ಲಿ ಇದೇ ರೀತಿಯ ಎಚ್ಚರಿಕೆ ನೀಡಿದ ಉದಾಹರಣೆ ಇದೆ. ಬೇರೆಯವರು ಮಾತನಾಡಲೂ ಕೊಡದೇ ಕಿಚ್ಚ ಎಂಬ ಘೋಷಣೆ ಕೂಗುತ್ತಾರೆ. ಆ ಸಂದರ್ಭದಲ್ಲಿ ಸುದೀಪ್ ಅವರು ಎಚ್ಚರಿಕೆ ನೀಡುತ್ತಾರೆ. ಆಗ ಫ್ಯಾನ್ಸ್ ಸೈಲೆಂಟ್ ಆಗುತ್ತಾರೆ. ಅವರಿಗೆ ಅಭಿಮಾನಿಗಳ ಮೇಲೆ ತುಂಬಾನೇ ಪ್ರೀತಿ. ಅವರು ತಪ್ಪಿದ್ದಾಗ ತಿದ್ದುತ್ತಾರೆ.

ಸುದೀಪ್ ಅವರು ‘ಮಾರ್ಕ್’ ಬಳಿಕ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಚಿತ್ರರಂಗಕ್ಕೆ ಬಂದು 30 ವರ್ಷಗಳು ಕಳೆದಿವೆ. ಈಗ ಅವರು ಹೊಸ ಸಿನಿಮಾ ಕೆಲಸದಲ್ಲಿ ತೊಡಗಿಕೊಳ್ಳಬೇಕಿದೆ. ರೋಮ್ ಕಾಮ್ ಸಿನಿಮಾ ಇದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us