ಸನಾತನ ಧರ್ಮದ ಕಥೆ ಇರುವ ಸೂಪರ್​ ಹೀರೋ ಸಿನಿಮಾದಲ್ಲಿ ಕಿರಣ್ ರಾಜ್ ನಟನೆ

ನಟ ಕಿರಣ್ ರಾಜ್​ ಅವರು ಬ್ಯಾಕ್​ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಕೆಲವೇ ವಾರಗಳ ಹಿಂದೆ ಅವರು ನಟಿಸಿದ ‘ರಾನಿ’ ಸಿನಿಮಾ ಬಿಡುಗಡೆ ಆಗಿತ್ತು. ಈಗ ಅವರು ಇನ್ನೊಂದು ಸಿನಿಮಾದ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಬಾರಿ ಅವರು ಸೂಪರ್​ ಹೀರೋ ಕಾನ್ಸೆಪ್ಟ್ ಇರುವ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ವಿಶೇಷ.

ಸನಾತನ ಧರ್ಮದ ಕಥೆ ಇರುವ ಸೂಪರ್​ ಹೀರೋ ಸಿನಿಮಾದಲ್ಲಿ ಕಿರಣ್ ರಾಜ್ ನಟನೆ
ಕಿರಣ್ ರಾಜ್​, ಗುರುತೇಜ್​ ಶೆಟ್ಟಿ

Updated on: Nov 15, 2024 | 8:23 PM

ಕಿರುತೆರೆಯಲ್ಲಿ ಮಿಂಚಿ, ನಂತರ ಹಿರಿತೆರೆಗೆ ಕಾಲಿಟ್ಟ ಅನೇಕ ಕಲಾವಿದರು ಇದ್ದಾರೆ. ಅಂಥವರ ಪೈಕಿ ಕಿರಣ್ ರಾಜ್​ ಕೂಡ ಪ್ರಮುಖರು. ‘ಕಲರ್ಸ್ ಕನ್ನಡ’ ವಾಹಿನಿಯ ‘ಕನ್ನಡತಿ’ ಸೀರಿಯಲ್​ನಲ್ಲಿ ಕಿರಣ್ ರಾಜ್ ಅವರು ಪ್ರಮುಖ ಪಾತ್ರ ಮಾಡಿದ್ದರು. ಆ ಪಾತ್ರ ಅವರಿಗೆ ತುಂಬ ಖ್ಯಾತಿ ತಂದುಕೊಟ್ಟಿತು. ಕೇವಲ ಕಿರುತೆರೆಗೆ ಸೀಮಿತವಾಗದೇ ಹಿರಿತೆರೆಯಲ್ಲೂ ಕಿರಣ್ ರಾಜ್ ಅವರು ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಅವರ ಗಮನ ಪೂರ್ತಿ ಸಿನಿಮಾ ಕೆಲಸಗಳ ಮೇಲಿದೆ. ಈಗ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ.

ಸೂಪರ್​ ಹೀರೋ ಕಾನ್ಸೆಪ್ಟ್ ಇರುವ ಸಿನಿಮಾದಲ್ಲಿ ಕಿರಣ್ ರಾಜ್ ಅವರು ಮುಖ್ಯ ಭೂಮಿಕೆ ನಿಭಾಯಿಸಲಿದ್ದಾರೆ. ಈ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಅವರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ‘ರಾನಿ’ ಚಿತ್ರಕ್ಕೆ ಕೂಡ ಗುರುತೇಜ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದರು. ಅವರಿಬ್ಬರ ಕಾಂಬಿನೇಷನ್​ನಲ್ಲಿ ಈಗ ಸೂಪರ್​ ಹೀರೋ ಕಥೆಯಿರುವ ಸಿನಿಮಾ ಮೂಡಿಬರಲಿದೆ.

ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು ಎಂಬುದು ಕಿರಣ್ ರಾಜ್ ಹಂಬಲ. ಹಾಗಾಗಿ ಅವರು ಈ ಬಾರಿ ಸೂಪರ್​ ಹೀರೋ ಆಗಲು ಹೊರಟಿದ್ದಾರೆ. ಈ ಸಿನಿಮಾದ ಕಾನ್ಸೆಪ್ಟ್ ಬಗ್ಗೆಯೂ ಸಣ್ಣ ಸುಳಿವು ಬಿಟ್ಟು ಕೊಡಲಾಗಿದೆ. ಸನಾತನ ಧರ್ಮದ ಹಿನ್ನೆಲೆಯ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. ಆದರೆ ನಿರ್ದಿಷ್ಟವಾಗಿ ಅದು ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ಕಿರಣ್ ರಾಜ್ ನಟನೆಯ ಹೊಸ ಸಿನಿಮಾ ‘ಮೇಘ’ ಬಿಡುಗಡೆಗೆ ರೆಡಿ; ಕಾಜಲ್ ಕುಂದರ್ ನಾಯಕಿ

ಹೀರೋ ಕಿರಣ್ ರಾಜ್, ಡೈರೆಕ್ಟರ್​ ಗುರುತೇಜ್​ ಶೆಟ್ಟಿ ಎಂಬುದು ಹೊರತುಪಡಿಸಿ ಬೇರೆ ಯಾವುದೇ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಕೂಡ ಇನ್ನೂ ಬಹಿರಂಗ ಆಗಿಲ್ಲ. ನಿರ್ಮಾಣ ಮಾಡುವವರು ಯಾರು? ಪಾತ್ರವರ್ಗದಲ್ಲಿ ಬೇರೆ ಯಾರೆಲ್ಲ ಇರಲಿದ್ದಾರಾ? ತಂತ್ರಜ್ಞರ ಬಳಗದಲ್ಲಿ ಯಾರು ಇದ್ದಾರೆ ಎಂಬುದು ಸಹ ಸದ್ಯಕ್ಕೆ ಗೌಪ್ಯವಾಗಿದೆ. ಆ ಬಗ್ಗೆ ಮಾಹಿತಿ ಸಿಗಲಿ ಎಂದು ಕಿರಣ್ ರಾಜ್ ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us