‘ಲ್ಯಾಂಡ್​​​ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ

ದುನಿಯಾ ವಿಜಯ್ ನಟನೆಯ 'ಲ್ಯಾಂಡ್​​ಲಾರ್ಡ್' ಸಿನಿಮಾ ಜನವರಿ 23ರಂದು ತೆರೆಕಂಡು ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆ ಕುರಿತ ಈ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಈ ಬೆಂಬಲದಿಂದ 'ಲ್ಯಾಂಡ್​​ಲಾರ್ಡ್' ಹೆಚ್ಚು ಜನರನ್ನು ತಲುಪಲಿದ್ದು, 70ರ ದಶಕದ ಜಾತಿ ಸಂಘರ್ಷ ಹಾಗೂ ರೈತರ ಬವಣೆಯನ್ನು ಪರಿಣಾಮಕಾರಿಯಾಗಿ ಸಮಾಜಕ್ಕೆ ತಲುಪಿಸಲು ನೆರವಾಗಲಿದೆ.

‘ಲ್ಯಾಂಡ್​​​ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ
ಲ್ಯಾಂಡ್​​ಲಾರ್ಡ್ ಸಿನಿಮಾ

Updated on: Feb 03, 2026 | 1:16 PM

ಸಾಮಾಜಿಕ ಅಸಮಾನತೆ ಹಾಗೂ ಜಾತಿ ಶೋಷಣೆ ವಿಷಯವಿರುವ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್​​​ಲಾರ್ಡ್’ ಸಿನಿಮಾ (Land Lord Movie) ಜನವರಿ 23ರಂದು ರಿಲೀಸ್ ಆಗಿದೆ. ವಿಮರ್ಶಕರಿಂದ ಈ ಚಿತ್ರ ಮೆಚ್ಚುಗೆ ಪಡೆದಿದೆ. ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಇದರಿಂದ ಚಿತ್ರಕ್ಕೆ ಮತ್ತಷ್ಟು ಬೆಂಬಲ ಸಿಕ್ಕಂತೆ ಆಗಿದ್ದು, ಹೆಚ್ಚು ಜನರನ್ನು ತಲುಪಲು ಈ ಬೆಳವಣಿಗೆ ಸಹಕಾರಿ ಆಗಲಿದೆ.

‘ಲ್ಯಾಂಡ್​​ಲಾರ್ಡ್ 70ರ ದಶಕದ ಕಥೆ ಹೊಂದಿದೆ. ರಾಚಯ್ಯ (ದುನಿಯಾ ವಿಜಯ್), ನಿಂಗವ್ವ (ರಚಿತಾ ರಾಮ್) ಮಗಳು ಭಾಗ್ಯಾ (ರಿತನ್ಯಾ ರಾಮ್) ಜೊತೆ ಹಾಯಾಗಿ ಜೀವನ ನಡೆಸುತ್ತಿರುತ್ತಾರೆ. ಆ ಊರಿನಲ್ಲಿ ಸಣ್ಣ ಧಣಿ (ರಾಜ ಬಿ. ಶೆಟ್ಟಿ) ಪಾರುಪತ್ಯ. ಆತ ಹೇಳಿದಂತೆ ನಡೆಯಬೇಕು. ಯಾರ ಬಳಿಯೂ ಜಮೀನು ಇರಬಾರದು ಎಂಬುದು ಆತನ ಆಜ್ಞೆ. ತಾವೇ ಬೆಳೆದ ಬೆಳೆಯಲ್ಲಿ ಸಿಗೋದು ಒಂದು ಹಿಡಿ ಮಾತ್ರ. ಇದನ್ನು ಪ್ರಶ್ನಿಸಿದ ಭಾಗ್ಯಾಳ ಪ್ರಿಯಕರನ ಸುಟ್ಟು ಕೊಲ್ಲಲಾಗುತ್ತದೆ. ಈ ಅಸಮಾನತೆ ವಿರುದ್ಧ ರಾಚಯ್ಯ ಸಿಡಿದೇಳುತ್ತಾರೆ. ಈ ರೀತಿಯಲ್ಲಿ ಸಿನಿಮಾ ಇದೆ.

‘ಲ್ಯಾಂಡ್​​ಲಾರ್ಡ್’ ಚಿತ್ರವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ. ಈ ಮೊದಲು ವಿಜಯ್ ಹಾಗೂ ಜಡೇಶ್ ಕುಮಾರ್ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತೆರಿಗೆ ವಿನಾಯಿತಿ
ಕೊಡುವಂತೆ ಮನವಿ ಮಾಡಿದ್ದರು. ಈ ವೇಳೆ ಸಿನಿಮಾ ನೋಡದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗ ಸಂಬಂಧಪಟ್ಟ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ನೀಡಲು ಸೂಚನೆ ಸಿದ್ದರಾಮಯ್ಯ ನೀಡಿದ್ದಾರೆ. ತೆರಿಗೆ ವಿನಾಯಿತಿ ಸಿಗುವುದರಿಂದ ಟಿಕೆಟ್ ದರ ಕಡಿಮೆ ಆಗಲಿದೆ.

ಇದನ್ನೂ ಓದಿ: ಭೂತ-ಪ್ರೇತಗಳ ‘ರಕ್ಕಸಪುರ’ದಲ್ಲಿ ರಾಜ್ ಬಿ ಶೆಟ್ರು ರಕ್ಷಕನಾ-ರಾಕ್ಷಸನಾ?

‘ಲ್ಯಾಂಡ್​​ಲಾರ್ಡ್’ ಸಿನಿಮಾ ಜನವರಿ 23ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಬುಕ್ ಮೈ ಶೋನನಲ್ಲಿ ಸುಮಾರು ಮೂರು ಸಾವಿರ ಜನ ರೇಟಿಂಗ್ ನೀಡಿದ್ದು, 9.4/10 ಸಿಕ್ಕಿದೆ. ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ನಟನೆಯನ್ನು ಕೊಂಡಾಡಿದ್ದಾರೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಮಗಳು ರಿತನ್ಯ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ ಎಂಬುದು ವಿಶೇಷ.

ವರದಿ: ಈರಣ್ಣಾ ಬಸವ 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:15 pm, Tue, 3 February 26

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us