ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ಕೋಟಿ ರಾಮು ಕೊವಿಡ್​ಗೆ ಬಲಿ

ಸ್ಯಾಂಡಲ್​ವುಡ್​ ನಟಿ ಮಾಲಾಶ್ರೀ ಅವರ ಗಂಡ, ಖ್ಯಾತ ನಿರ್ಮಾಪಕ ಕೋಟಿ ರಾಮು (52) ಕೊರೊನಾದಿಂದ ನಿಧನ ಹೊಂದಿದ್ದಾರೆ. ರಾಮು ಅವರಿಗೆ ಕಳೆದವಾರ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಮೂರು ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು.

sadhu srinath

|

Apr 27, 2021 | 3:17 PM

ಕನ್ನಡದ ಖ್ಯಾತ ನಿರ್ಮಾಪಕ ರಾಮು ಕೊವಿಡ್​ಗೆ ಬಲಿ – ನಟಿ ಮಾಲಾಶ್ರೀ ಪತಿ ರಾಮು ಕೊನೆಯುಸಿರು – ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ರಾಮು – ವಾರದ ಹಿಂದೆ ರಾಮುಗೆ ಕೊರೊನಾ ಪಾಸಿಟಿವ್ ಬಂದಿತ್ತು.

ಸ್ಯಾಂಡಲ್​ವುಡ್​ ನಟಿ ಮಾಲಾಶ್ರೀ ಅವರ ಗಂಡ, ಖ್ಯಾತ ನಿರ್ಮಾಪಕ ಕೋಟಿ ರಾಮು (52) ಕೊರೊನಾದಿಂದ ನಿಧನ ಹೊಂದಿದ್ದಾರೆ. ರಾಮು ಅವರಿಗೆ ಕಳೆದವಾರ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಮೂರು ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಅವರಿಗೆ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಲೇ ಇದ್ದರು. ಆದರೆ, ಚಿಕಿತ್ಸೆ ಫಲಿಸಲಿಲ್ಲ. ಹೀಗಾಗಿ, ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಮು ಸ್ಯಾಂಡಲ್​ವುಡ್​ನಲ್ಲಿ ಖ್ಯಾತ ನಿರ್ಮಾಪಕರು. ಕನ್ನಡದಲ್ಲಿ ಅವರು ಸಾಕಷ್ಟು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಲಾಕಪ್​ಡೆತ್, AK-47, ರಾಕ್ಷಸ‌, ಕಲಾಸಿಪಾಳ್ಯ, ಅರ್ಜುನ್ ಗೌಡ ಸೇರಿ ಹಲವು ಚಿತ್ರ ನಿರ್ಮಾಣ ಮಾಡಿದ್ದರು.ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಚಿತ್ರಗಳನ್ನು ರಾಮು ನಿರ್ಮಾಣ ಮಾಡುತ್ತಿದ್ದರು.  ಅವರು ಕೋಟಿ ರಾಮು ಎಂದೇ ಖ್ಯಾತರಾಗಿದ್ದರು.
(Malashree Husband Kannada Producer koti Ramu Is dead due to coronavirus)

Follow us on

Click on your DTH Provider to Add TV9 Kannada