ಪ್ರದೋಶ್ ಸಾಕ್ಷಿ ತಡೆಯುವ ಮತ್ತೊಂದು ಯತ್ನ ವಿಫಲ, ಸುಪ್ರೀಂನಲ್ಲೂ ಅರ್ಜಿ ವಜಾ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಅವರ ಮಾಫಿ ಸಾಕ್ಷಿ ನಿರ್ಣಾಯಕವಾಗಿದೆ. ಇದನ್ನು ತಡೆಯಲು ದರ್ಶನ್ ಕಡೆಯಿಂದ ನಡೆದ ಪ್ರಯತ್ನಗಳು ವಿಫಲಗೊಂಡಿವೆ. ವಿಜಯಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಆದೇಶದಿಂದ ಪ್ರದೋಶ್ ಅವರ ಹೇಳಿಕೆಗೆ ಇದ್ದ ಅಡಚಣೆಗಳು ನಿವಾರಣೆಯಾಗಿವೆ. ಅವರು ಪ್ರಕರಣದ ಹಲವು ಮಹತ್ವದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಪ್ರದೋಶ್ ಸಾಕ್ಷಿ ತಡೆಯುವ ಮತ್ತೊಂದು ಯತ್ನ ವಿಫಲ, ಸುಪ್ರೀಂನಲ್ಲೂ ಅರ್ಜಿ ವಜಾ
Pradosh Viji

Updated on: Oct 08, 2026 | 11:56 AM

ಮುಖ್ಯಾಂಶಗಳು

  • ಪ್ರದೋಶ್ ಸಾಕ್ಷಿ ತಡೆಯುವ ಮತ್ತೊಂದು ಯತ್ನ ವಿಫಲ
  • ಸಾಕ್ಷಿ ವಿರುದ್ಧ ಸುಪ್ರೀಂನಲ್ಲಿ ಅರ್ಜಿ ಸಲ್ಲಸಿದ್ದ ವಿಜಯಲಕ್ಷ್ಮಿ ದರ್ಶನ್
  • ವಿಜಯಲಕ್ಷ್ಮಿ ಅರ್ಜಿಯ ವಜಾ ಮಾಡಿದ ಸುಪ್ರೀಂಕೋರ್ಟ್

ರೇಣುಕಾ ಸ್ವಾಮಿ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿಯಾಗಿ ಪರಿವರ್ತನೆಗೊಂಡಿದ್ದು, ಇತ್ತೀಚೆಗಷ್ಟೆ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಸಿದ್ದಾರೆ. ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆ ಪ್ರಕರಣದಲ್ಲಿ ಬಹಳ ಮುಖ್ಯ ಪಾತ್ರ ವಹಿಸಲಿದೆ. ಈ ಸಾಕ್ಷಿ ಹೇಳಿಕೆಯನ್ನು ತಡೆಯಲು ದರ್ಶನ್ ಪರ ವಕೀಲರು ನಾನಾ ಪ್ರಯತ್ನಗಳನ್ನು ಮಾಡಿದ್ದು, ಎಲ್ಲವೂ ಬಹುತೇಕ ವಿಫಲವಾಗಿದೆ. ಸಾಕ್ಷಿ ಹೇಳಿಕೆ ದಾಖಲಾದ ಬಳಿಕವೂ ಸಹ ಪ್ರಯತ್ನ ನಿಂತಿಲ್ಲ. ಇತ್ತೀಚೆಗಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪ್ರದೋಶ್ ಸಾಕ್ಷಿಯನ್ನು ಪರಿಗಣಿಸದಂತೆ ಆದೇಶ ನೀಡಬೇಕೆಂದು ಒತ್ತಾಯಿಸಿ ಸುಪ್ರೀಂಕೋರ್ಟ್​​ಗೆ ಅರ್ಜಿ ಹಾಕಿದ್ದರು. ಆದರೆ ಅವರ ಅರ್ಜಿ ವಜಾಗೊಂಡಿದೆ.

ಪ್ರದೋಶ್ ಸಾಕ್ಷಿ ಹೇಳಿಕೆಯನ್ನು ಪರಿಗಣಿಸಬಾರದೆಂದು ವಿಜಯಲಕ್ಷ್ಮಿ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ವಿಜಯಲಕ್ಷ್ಮಿ ಅವರ ಪರ ವಾದ ಮಂಡಿಸಿದ ನಾಗಮುತ್ತು, ಹಿಂದಿನ ಕೆಲವು ಆದೇಶಗಳನ್ನು ಉಲ್ಲೇಖಿಸುತ್ತಾ ಸಾಕ್ಷಿ ಹೇಳಿಕೆಯನ್ನು ಪರಿಗಣಿಸಬಾರದು ಎಂದರು. ಆದರೆ ಸುಪ್ರೀಂಕೋರ್ಟ್ ಇದಕ್ಕೆಲ್ಲ ಸೊಪ್ಪು ಹಾಕದೆ ಅರ್ಜಿಯನ್ನು ವಜಾ ಮಾಡಿತು. ಅರ್ಜಿಯನ್ನು ವಜಾ ಮಾಡಿದ ಆದೇಶ ನೀಡಿದ ಬಳಿಕವೂ ನಾಗಮುತ್ತು ವಾದ ಮುಂದುವರೆಸಿದ್ದರು, ಆದರೆ ನ್ಯಾಯಮೂರ್ತಿಗಳು ವಾದವನ್ನು ಆಲಿಸಲಿಲ್ಲ. ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್, ‘ಮೇಲ್ನೋಟಕ್ಕೆ ಮಧ್ಯ ಪ್ರವೇಶಿಸುವ ಅಂಶಗಳಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ.

ಆ ಮೂಲಕ ಪ್ರದೋಶ್ ಸಾಕ್ಷ್ಯವನ್ನು ತಡೆಯುವ ಅಥವಾ ಪ್ರದೊಶ್ ನೀಡಿರುವ ಸಾಕ್ಷಿ ಹೇಳಿಕೆಯನ್ನು ಅಮಾನ್ಯಗೊಳಿಸುವ ದರ್ಶನ್ ಪರ ವಕೀಲರ ಕೊನೆಯ ಪ್ರಯತ್ನ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಪ್ರದೋಶ್ ಹೇಳಿಕೆಗೆ ಆಗಬಹದಿದ್ದ ಅಡಚಣೆಗಳು ನಿವಾರಣೆ ಆದಂತಾಗಿದೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ

ಪ್ರದೋಶ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಆಗಿದ್ದು, ಅವರು ಪ್ರಕರಣದಲ್ಲಿ ಅಪ್ರೂವರ್ (ಮಾಫಿ ಸಾಕ್ಷಿ) ಆಗಿ ಬದಲಾಗಿದ್ದು, ಕೆಲ ದಿನಗಳ ಹಿಂದಷ್ಟೆ ವಿಚಾರಣಾ ನ್ಯಾಯಾಲಯದ ಎದುರು ಪ್ರಕರಣದ ಕುರಿತಾಗಿ ತಮಗೆ ತಿಳಿದಿದ್ದ ಎಲ್ಲ ಮಾಹಿತಿಯನ್ನು ಹೇಳಿಕೆ ರೂಪದಲ್ಲಿ ದಾಖಲಿಸಿದ್ದಾರೆ. ದರ್ಶನ್ ಸೇರಿದಂತೆ ಇತರೆ ಆರೋಪಿಗಳು ರೇಣುಕಾ ಸ್ವಾಮಿ ಮೇಲೆ ನಡೆಸಿದ ಅಮಾನುಷ ಹಲ್ಲೆ ಮತ್ತು ಸಾಕ್ಷ್ಯ ನಾಶಕ್ಕೆ ಮಾಡಿದ ಪ್ರಯತ್ನಗಳ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ, ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದ ವಿಷಯ ದರ್ಶನ್​​ಗೆ ಮೊದಲೇ ಗೊತ್ತಿತ್ತು ಎಂಬ ಅಂಶವನ್ನು ಸಹ ಅವರು ಹೇಳಿರುವುದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us