
ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊದಲ ದಿನದಿಂದಲೇ ಹಂತ ಹಂತವಾಗಿ ಪ್ರದರ್ಶನ ಸಂಖ್ಯೆ ಹಾಗೂ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ಈ ಸಿನಿಮಾ, ಇದೀಗ ಎರಡು ವಾರಗಳಲ್ಲಿ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿ ದೊಡ್ಡ ಯಶಸ್ಸು ಕಂಡಿದೆ. ಸಿನಿಮಾ ಬಿಡುಗಡೆಯಾದ ಮೊದಲ ವಾರಕ್ಕಿಂತ ಎರಡನೇ ವಾರದಲ್ಲಿ ಭಾರಿ ಪ್ರಮಾಣದ ಕಲೆಕ್ಷನ್ ಮಾಡಿರುವುದು ಈ ಚಿತ್ರದ ವಿಶೇಷತೆಯಾಗಿದೆ.
ಚಿತ್ರದ ಗಳಿಕೆಯ ಅಂಕಿಅಂಶಗಳನ್ನು ಗಮನಿಸುವುದಾದರೆ, ‘ಪ್ರೇಮದ ಊರಲಿ’ ಸಿನಿಮಾ ಕರ್ನಾಟಕದಲ್ಲಿ ಎರಡು ವಾರಕ್ಕೆ 33.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. 28.97 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಇದೆ. 6,829 ಪ್ರದರ್ಶನಗಳನ್ನು ಕಂಡಿರುವ ಈ ಸಿನಿಮಾಗೆ ಮೌಖಿಕ ಪ್ರಚಾರವು ಸಹಕಾರಿ ಆಗಿದೆ.
ಮೊದಲ ವಾರದಲ್ಲಿ ಸಿನಿಮಾ ಅತ್ಯಂತ ಸರಳ ಆರಂಭವನ್ನು ಪಡೆದುಕೊಂಡಿತ್ತು. ಸೆಪ್ಟೆಂಬರ್ 25 ರಂದು ಕೇವಲ 60 ಶೋನೊಂದಿಗೆ 13 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ವಾರಾಂತ್ಯದ ವೇಳೆಗೆ ಉತ್ತಮ ಪ್ರದರ್ಶನ ಕಂಡಿತು. ಮೊದಲ ವಾರದ ಕೊನೆಯಲ್ಲಿ ಅಂದರೆ ಮೊದಲ ಏಳು ದಿನಗಳಲ್ಲಿ ಸಿನಿಮಾ ಒಟ್ಟು 5.32 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು.
ಎರಡನೇ ವಾರದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಸಲಿ ಧಮಾಕಾ ಸೃಷ್ಟಿಸಿದೆ. ಗಾಂಧಿ ಜಯಂತಿ ರಜಾದಿನವಾದ ಅಕ್ಟೋಬರ್ 2 ರಂದು ದಿನ ಒಂದರಲ್ಲೇ ರೂಪಾಯಿ 3.02 ಕೋಟಿ ರೂಪಾಯಿ, ಅಕ್ಟೋಬರ್ 4 ರ ಭಾನುವಾರ 4.50 ಕೋಟಿ ರೂಪಾಯಿ ಹಾಗೂ ಅಕ್ಟೋಬರ್ 8 ರಂದು 4.56 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಎರಡನೇ ವಾರದಲ್ಲಿ ಪ್ರತಿದಿನವೂ ಭಾರಿ ಪ್ರಮಾಣದ ಕಲೆಕ್ಷನ್ ದಾಖಲಿಸಿದೆ. ಶೋಗಳ ಸಂಖ್ಯೆ ಕೂಡ 900 ಕ್ಕಿಂತಲೂ ಅಧಿಕಕ್ಕೆ ಹೆಚ್ಚಾಯಿತು.
ಇದನ್ನೂ ಓದಿ: ‘ಪ್ರೇಮದ ಊರಲಿ’ ಟೈಟಲ್ ಟ್ರ್ಯಾಕ್ ಹಾಡಲು ಮಕ್ಕಳನ್ನೇ ಆಯ್ಕೆ ಮಾಡಿದ್ದೇಕೆ? ಗುಟ್ಟು ಬಿಚ್ಚಿಟ್ಟ ಸುನಾದ್
ಒಟ್ಟಾರೆಯಾಗಿ ಎರಡು ವಾರಗಳಲ್ಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡಿದೆ. 2 ಕೋಟಿ ರೂಪಾಯಿ ಬಜೆಟ್ನ ಸಿನಿಮಾ 33 ಕೋಟಿ ರೂಪಾಯಿ ಗಳಿಸಿರೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.