ಟಪಾಲು ಮೂಲಕ ತಪಾಸಣೆ ಇಲ್ಲದೆ ನೇರವಾಗಿ ರಾಗಿಣಿ-ಸಂಜನಾ ಕೈಸೇರುತಿವೆ ಅಗತ್ಯ ವಸ್ತುಗಳು

| Updated By: ಸಾಧು ಶ್ರೀನಾಥ್​

Updated on: Oct 31, 2020 | 12:26 PM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ಸದ್ಯ ಜೈಲುಹಕ್ಕಿಗಳಾಗಿರುವ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜೈಲಿಗೇ ಪೋಸ್ಟ್ ಮೂಲಕ ವಸ್ತುಗಳನ್ನ ತರಿಸಿಕೊಳ್ತಿದ್ದಾರಂತೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿ ಮತ್ತು ಸಂಜನಾ ತಮಗೆ ಅಗತ್ಯವಾದ ವಸ್ತುಗಳನ್ನು ತರಿಸಿಕೊಳ್ತಿದ್ದಾರಂತೆ. ನಟಿಯರ ಪೋಷಕರು ನೇರವಾಗಿಯೇ ಜೈಲಿನಲ್ಲಿರುವ ಇಬ್ಬರ ಹೆಸರಿಗೆ ವಸ್ತುಗಳನ್ನ ಪೋಸ್ಟ್ ಮಾಡುತ್ತಿದ್ದು ಕಳೆದ 10 ದಿನಗಳಿಂದ ತಮಗೆ ಬೇಕಾದ ವಸ್ತುಗಳನ್ನು ಪೋಸ್ಟ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ. ಕೊರಿಯರ್ ಮೂಲಕ ಇಷ್ಟು ದಿನ ಸಾಮಾನು ತರಿಸಿಕೊಳ್ಳುತ್ತಿದ್ದ ನಟಿಯರ ಪಾರ್ಸಲ್​ಗಳನ್ನು […]

ಟಪಾಲು ಮೂಲಕ ತಪಾಸಣೆ ಇಲ್ಲದೆ ನೇರವಾಗಿ ರಾಗಿಣಿ-ಸಂಜನಾ ಕೈಸೇರುತಿವೆ ಅಗತ್ಯ ವಸ್ತುಗಳು
ಸಂಜನಾ ಗಲ್ರಾನಿ(ಎಡ); ರಾಗಿಣಿ ದ್ವಿವೇದಿ (ಬಲ)
Follow us on

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ಸದ್ಯ ಜೈಲುಹಕ್ಕಿಗಳಾಗಿರುವ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜೈಲಿಗೇ ಪೋಸ್ಟ್ ಮೂಲಕ ವಸ್ತುಗಳನ್ನ ತರಿಸಿಕೊಳ್ತಿದ್ದಾರಂತೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿ ಮತ್ತು ಸಂಜನಾ ತಮಗೆ ಅಗತ್ಯವಾದ ವಸ್ತುಗಳನ್ನು ತರಿಸಿಕೊಳ್ತಿದ್ದಾರಂತೆ. ನಟಿಯರ ಪೋಷಕರು ನೇರವಾಗಿಯೇ ಜೈಲಿನಲ್ಲಿರುವ ಇಬ್ಬರ ಹೆಸರಿಗೆ ವಸ್ತುಗಳನ್ನ ಪೋಸ್ಟ್ ಮಾಡುತ್ತಿದ್ದು ಕಳೆದ 10 ದಿನಗಳಿಂದ ತಮಗೆ ಬೇಕಾದ ವಸ್ತುಗಳನ್ನು ಪೋಸ್ಟ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ.

ಕೊರಿಯರ್ ಮೂಲಕ ಇಷ್ಟು ದಿನ ಸಾಮಾನು ತರಿಸಿಕೊಳ್ಳುತ್ತಿದ್ದ ನಟಿಯರ ಪಾರ್ಸಲ್​ಗಳನ್ನು ಅಧಿಕಾರಿಗಳು ಇಷ್ಟು ದಿನ ಚೆಕ್ ಮಾಡುತ್ತಿದ್ದರಂತೆ. ಹೀಗಾಗಿ, ನಟಿಯರು ತಮಗೆ ಬೇಕಾದ ವಸ್ತುಗಳನ್ನ ಪೊಸ್ಟ್ ಮೂಲಕ ತರಿಸಿಕೊಳ್ಳಲು ನಿರ್ಧಾರ ಮಾಡಿದರು. ಪೋಸ್ಟ್ ಮೂಲಕ ಬಂದ ವಸ್ತುಗಳು ಯಾವುದೇ ತಪಾಸಣೆ ಇಲ್ಲದೆ ನೇರವಾಗಿ ನಟಿಮಣಿಯರ ಕೈ ಸೇರುತ್ತದೆ. ಆದ್ದರಿಂದ, ಬಟ್ಟೆ, ಶ್ಯಾಂಪೂ, ಸೋಪ್ ಸೇರಿದಂತೆ ಇನ್ನಿತರೆ ದಿನ ಬಳಕೆಯ ವಸ್ತುಗಳನ್ನು ತರಿಸಿಕೊಳ್ತಿದ್ದಾರಂತೆ.

Published On - 12:13 pm, Sat, 31 October 20