ನಟಿ ರಕುಲ್ ಪ್ರೀತ್ ಸಿಂಗ್ ಸದ್ಯ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಸ್ಟಾರ್ ಸಿನಿಮಾಗಳಲ್ಲಿ ಅಭಿನಯಿಸೋ ಅವಕಾಶ ಗಿಟ್ಟಿಸಿಕೊಳ್ತಿದ್ದಾರೆ. ಆದ್ರೆ ಇತ್ತ ಸೌತ್ ಸಿನಿಮಾರಂಗ ಅತ್ತಿದ ಏಣಿಯನ್ನ ಒದಿಯಾಬಾರದು ಎಂದು ರಕುಲ್ ಪಾಠ ಮಾಡ್ತಿದ್ದಾರೆ.
ಸೌತ್ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ರಕುಲ್ ಪ್ರೀತ್ ಸಿಂಗ್ ಹೆಚ್ಚಾಗಿ ಗುರುತಿಸಿಕೊಂಡಿದ್ದು ತೆಲುಗು ಸಿನಿಮಾಗಳಲ್ಲಿ. ಹಾಗೇ ನೋಡಿದ್ರೆ ರಕುಲ್ಗೆ ಹೆಚ್ಚಿನ ಅಭಿಮಾನಿಗಳಿರೋ ಸೌತ್ ಸಿನಿರಂಗದಲ್ಲೇ. ಆದ್ರೆ ಅದ್ಯಾಕೋ ನಟಿ ರಕುಲ್ ನಡೆದು ಬಂದ ದಾರಿಯನ್ನ ಮರೆಯುತ್ತಿದ್ದಾರಂತೆ. ಬಾಲಿವುಡ್ಗೆ ಎಂಟ್ರಿ ಕೊಟ್ಟ ಬಳಿಕಾ ಸೌತ್ ಸಿನಿಮಾಗಳನ್ನ ಒಪ್ಪಿಕೊಳ್ತಿಲ್ಲವಂತೆ.
ಮಾಡಲಿಂಗ್ ಲೋಕದಿಂದ ಸ್ಯಾಂಡಲ್ವುಡ್ಗೆ ಬಂದಿಳಿದ ನಟಿ ರಕುಲ್ ಕನ್ನಡದಲ್ಲಿ ಗಿಲ್ಲಿ ಅನ್ನೋ ಸಿನಿಮಾ ಮಾಡಿದ್ರು. ಅದಾತ ಬಳಿಕಾ ತಮಿಳು, ತೆಲುಗು ಸಿನಿಮಾಗಳಲ್ಲೇ ಬ್ಯೂಸಿ ಆದ್ರು. ಆದ್ರೀಗ ಈಕೆ ಸೌತ್ ಕಡೆಗೆ ತಿರುಗಿಯೂ ನೋಡ್ತಿಲ್ಲವಂತೆ. ಇತ್ತೀಚೆಗೆ ಒಂದಷ್ಟು ಟಾಲಿವುಡ್ ಮಂದಿ ರಕುರನ್ನ ಅರಸಿ ಹೋಗಿ, ಬರಿ ಗೈಯಲ್ಲಿ ವಾಪಾಸ್ಸಾಗಿದ್ದಾರಂತೆ. ಕಾರಣ ರಕುಲ್ ತಾನು ತೀರಾ ಗ್ಲಾಮರಸ್ ಪಾತ್ರಗಳನ್ನ ಮಾಡೋದಿಲ್ಲ ಅಂತ ಹೇಳಿ ಸಿನಿಮಾಗಳನ್ನ ರಿಜೆಕ್ಟ್ ಮಾಡಿದ್ದಾರಂತೆ.