ಬೆಂಗಳೂರು: ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮ ಜೋರಾಗಿದೆ. ಯಶ್ 34ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂತೋಷ ಸಡಗರದಿಂದ ಆಚರಿಸಿದ್ದಾರೆ. ಕೆಲವೇ ವರ್ಷಗಳ ಸಿನಿ ಪಯಣದಲ್ಲಿ ಪ್ರಪಂಚಕ್ಕೆ ಗುರುತಿಸಿಕೊಳ್ಳುವಂತಹ ಹೆಸರನ್ನು ಯಶ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಯಶ್ ಹೆಚ್ಚಿಸಿದ್ದಾರೆ.
ಯಶ್ ಬರ್ತ್ಡೇಗೆ 5000 ಕೆ.ಜಿ ಕೇಕ್:
ಅಭಿಮಾನಿಗಳಿಗೆ ಭರ್ಜರಿ ಊಟದ ವ್ಯವಸ್ಥೆ:
ಯಶ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಬೆಳಗ್ಗೆ 3 ಸಾವಿರ ಅಭಿಮಾನಿಗಳಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಆರು ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ನಾಟಿ ಕೋಳಿ ಸಾರು, ಮಟನ್ ಬಿರಿಯಾನಿ, ಮುದ್ದೆ, ರೈಸ್, ಚಿಕನ್ ಪೆಪ್ಪರ್ ಡ್ರೈ, ರಸಂ, ಸಲಾಡ್, ವೆಜ್ ಬಿರಿಯಾನಿ, ಜಿಲೇಬಿ, ಪಕೋಡ ಸೇರಿ ವಿವಿಧ ಖಾದ್ಯಗಳ ರಸದೌತಣವನ್ನು ಯಶ್ ಏರ್ಪಡಿಸಿದ್ದಾರೆ.
Published On - 1:39 pm, Wed, 8 January 20