ಬೆಂಗಳೂರು: ಕೊರೊನಾ ಮಹಾಮಾರಿ ವಿರುದ್ಧದ ಸಂಗ್ರಾಮದಲ್ಲಿ ಲಾಕ್ ಡೌನ್ ಶಿಸ್ತಿಗೆ ಒಳಪಟ್ಟಿರುವುದು ಅನೇಕರಿಗೆ ಇರಿಸುಮುರಿಸು ತಂದಿದೆ. ಬಹಳಷ್ಟು ಮಂದಿ ಕಠಿಣ ಜೀವನಶೈಲಿಗೆ ಒಳಗಾಗಿದ್ದಾರೆ. ಕೆಲವರಿಗಂತೂ ತಮ್ಮಲ್ಲಿ ಸುಪ್ತವಾಗಿರುವ ಟ್ಯಾಲೆಂಟ್ ಅನ್ನು ಹೊರಹಾಕುವ ಸದವಕಾಶವಾಗಿದೆ.
ಸ್ಯಾಂಡಲ್ ವುಡ್ನ ತುಪ್ಪದ ಹುಡುಗಿಯೆಂದ್ರೇ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿರುವ ನಟಿ ರಾಗಿಣಿ ಇಂತಹ ಪ್ರಯೋಗವೊಂದಕ್ಕೆ ಮುಂದಾಗಿದ್ದಾರೆ. ತಮ್ಮ ನೆಯಲ್ಲ ಗುಡಿಸುತ್ತಾ, ಒಪ್ಪ ಓರಣ ಮಾಡಿದ್ದಾರೆ. ಜೊತೆಗೆ, ಅದನ್ನು ವಿಡಿಯೋ ಮಾಡಿ, ಒಂದಷ್ಟು ಟಿಪ್ಸ್ ಸಹ ಕೊಟ್ಟಿದ್ದಾರೆ. ಕಸ ಗುಡಿಸುವಾಗ ಯಾವ ರೀತಿಯ ಬಟ್ಟೆ ತೊಡಬೇಕು ಎಂದು ನಟಿ ರಾಗಿಣಿ ಟಿಪ್ಸ್ ಕೊಟ್ಟಿದ್ದಾರೆ..!
Published On - 2:18 pm, Wed, 22 April 20